ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಕ್ಕೆ ಸ್ನೇಹಿತನನ್ನ ಸ್ಥಳಕ್ಕೆ ಕರೆಸಿಕೊಂಡ ಪತಿ ಮುಂದೇನಾಯ್ತು ನೋಡಿ!

Spread the love

ಪತ್ನಿಗೆ ಮೆಸೇಜ್ ಮಾಡುತ್ತಿದ್ದನೆಂದು ಸಂಶಯಗೊಂಡು ವ್ಯಕ್ತಿಯೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ. ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಹೆಂಡತಿಗೆ ಮೆಸೇಜ್ ಮಾಡುತ್ತಿದ್ದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪತ್ನಿ ನಂಬರ್‌ಗೆ ಮೆಸೇಜ್ ಕಳಿಸುತ್ತಿದ್ದ ಮಹೇಶ್

ಮೃತ ಮಹೇಶ್ ತನ್ನ ಸ್ನೇಹಿತ ಅನ್ನದಾನಿಯ ಪತ್ನಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ಗೆ ಮೆಸೇಜ್ ಕಳಿಸುತ್ತಿದ್ದಾನೆ ಎನ್ನುವ ವಿಷಯ ಗೊತ್ತಾಗಿದೆ. ಇದರಿಂದ ಕುದ್ದು ಹೋದ ಆರೋಪಿ ಅನ್ನದಾನಿ, ಇವನನ್ನು ಹೀಗೆ ಬಿಟ್ಟರೆ ಮನೆವರೆಗೂ ಬರ್ತಾನೆ ಎಂದುಕೊಂಡವನು ಮುಗಿಸಲು ಸ್ಕೆಚ್ ಹಾಕಿದ್ದಾನೆ. ಅದರಂತೆ ಸೋಮವಾರ ರಾತ್ರಿ ಮನೆಯಲ್ಲಿದ್ದ ಮಹೇಶ್‌ನಿಗೆ ಕರೆ ಮಾಡಿರುವ ಅನ್ನದಾನಿ ಮತ್ತು ಅವನ ಸಹಚರರು ಹೊರಗೆ ಬರುವಂತೆ ಪುಸಲಾಯಿಸಿ ಕರೆಸಿಕೊಂಡಿದ್ದಾರೆ.

ಬಳಿಕ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿವರೆಗೆ ಮಹೇಶ್‌ನಿಗೆ ಮುಂದೆ ನಡೆಯಲಿದೆ ಅನ್ನೋದರ ಅರಿವೇ ಇಲ್ಲದೇ ಅವರೊಂದಿಗೆ ಖುಷಿಯಾಗಿ ಹೋಗಿದ್ದಾನೆ. ಯಾವಾಗ ನಿರ್ಜನ ಪ್ರದೇಶಕ್ಕೆ ಬಂದರೋ ಆಗ ಮಹೇಶ್ ಮೇಲೆ ಚಾಕುವಿನಿಂದ ಇರಿದ್ದಾರೆ. ಅಷ್ಟೇ ಅಲ್ಲದೆ ಮೈಮೇಲೆ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೊಂದು ವಿಚಿತ್ರ ಎಂದರೆ ಹತ್ಯೆಯ ಬಳಿಕ ಅದೇ ಆರೋಪಿಗಳು ಮಹೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲು ಯತ್ನಿಸಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದ ವೇಳೆ ಆತ ಅದಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ.

ಘಟನೆ ಬಗ್ಗೆ ಆಸ್ಪತ್ರೆ ಸಿಬ್ಬಂದಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಿರುಗಾವಲು ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಹತ್ಯೆಯ ಹಿಂದಿನ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

WhatsApp Group Join Now

Spread the love

Leave a Reply