ಮಂಡ್ಯ: ಸ್ನೇಹದ ಹೆಸರಿನಲ್ಲಿ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಸ್ನೇಹಿತನ ಹೆಂಡತಿಯನ್ನೇ ಕರೆದುಕೊಂಡು ಓಡಿ ಹೋಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.
ಓಡಿಹೋದ ಜೋಡಿಯನ್ನು ಪವಿತ್ರ ಮತ್ತು ಯೇಸುದಾಸ್ ಎಂದು ಗುರುತಿಸಲಾಗಿದೆ. ಶಾಕಿಂಗ್ ವಿಚಾರ ಅಂದ್ರೆ, ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ಇಬ್ಬರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ವಿವಾಹಿತರು ತಮ್ಮ ಸಂಸಾರ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ಮನೆ ಬಿಟ್ಟು ಎಸ್ಕೇಪ್ ಆಗಿದ್ದ ಪವಿತ್ರ ಮತ್ತು ಯೇಸುದಾಸ್, ಇದೀಗ ರಹಸ್ಯವಾಗಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ತಮ್ಮ ಮದುವೆ ಫೋಟೋಗಳನ್ನು ಕುಟುಂಬಸ್ಥರ ಮೊಬೈಲ್‌ಗೆ ಕಳುಹಿಸುವ ಮೂಲಕ ಶಾಕ್ ನೀಡಿದ್ದಾರೆ. ಇತ್ತ ಜೋಡಿಗಳು ಮದುವೆಯಾಗಿ ಫೋಟೋ ಕಳುಹಿಸುತ್ತಿದ್ದಂತೆ, ಇತ್ತ ಕಡೆ ಅವರವರ ಕುಟುಂಬಸ್ಥರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ಈ ಘಟನೆಯಿಂದಾಗಿ ಎರಡು ಕುಟುಂಬಗಳು ಬೀದಿಗೆ ಬಿದ್ದಂತಾಗಿದ್ದು, ಓಡಿಹೋದವಳ ಗಂಡ ಮತ್ತು ಓಡಿಹೋದವನ ಹೆಂಡತಿ ಇಬ್ಬರೂ ಕಂಗಾಲಾಗಿದ್ದಾರೆ. ಅತ್ತ ಪತ್ನಿಯನ್ನ ಕಳೆದುಕೊಂಡ ಗಂಡ, ಇತ್ತ ಗಂಡನನ್ನ ಕಳೆದುಕೊಂಡ ಹೆಂಡತಿ ತಮ್ಮ ಮಕ್ಕಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳ ಮುಖ ನೋಡಿಯಾದರೂ ವಾಪಸ್ ಬರುವಂತೆ ಕಣ್ಣೀರಿಡುತ್ತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆಗೆ ದೂರು: ಈ ಅಕ್ರಮ ಸಂಬಂಧ ಮತ್ತು ಪಲಾಯನ ಕುರಿತಂತೆ ನೊಂದ ಕುಟುಂಬಸ್ಥರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಓಡಿಹೋದ ಜೋಡಿಗಳ ವಿರುದ್ಧ ಅಧಿಕೃತವಾಗಿ ದೂರನ್ನು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ನೇಹಿತನ ಹೆಂಡತಿಯನ್ನೇ ಹಾರಿಸಿಕೊಂಡು ಹೋದ ಭೂಪ! ಕಣ್ಣೀರಿಟ್ಟು ‘ಬಂದ್ ಬಿಡು’ ಎಂದ ರಿಯಲ್ ಗಂಡ
WhatsApp Group
Join Now