ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ.? ಶಾಕಿಂಗ್ ವರದಿ ಇಲ್ಲಿದೆ.!

Spread the love

“ಮದ್ಯಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಎಚ್ಚರಿಕೆಯನ್ನು ನಾವು ಪ್ರತಿದಿನ ನೋಡುತ್ತೇವೆ. ಆದರೆ, ಒಬ್ಬ ವ್ಯಕ್ತಿ ಸತತ ಒಂದು ವರ್ಷಗಳ ಕಾಲ ನಿಯಮಿತವಾಗಿ ಮದ್ಯಪಾನ ಮಾಡಿದರೆ ಆತನ ದೇಹದ ಪ್ರಮುಖ ಅಂಗವಾದ ಯಕೃತ್ತು ಅಥವಾ ಲಿವರ್ ಮೇಲೆ ಅದು ಎಂತಹ ಭೀಕರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವೈದ್ಯಕೀಯ ಸಂಶೋಧನೆಗಳು ಕಣ್ಣು ತೆರೆಸುವಂತಹ ಮಾಹಿತಿಯನ್ನು ಬಿಚ್ಚಿಟ್ಟಿವೆ.

ಒಂದು ವರ್ಷದ ಸತತ ಪಾನ: ಲಿವರ್‌ನಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ.?

1. ಫ್ಯಾಟಿ ಲಿವರ್ ಆರಂಭ (0-3 ತಿಂಗಳು) :
ಮದ್ಯಪಾನ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗಲು ಶುರುವಾಗುತ್ತದೆ. ಇದನ್ನು ‘ಆಲ್ಕೊಹಾಲಿಕ್ ಫ್ಯಾಟಿ ಲಿವರ್’ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಯಾವುದೇ ದೊಡ್ಡ ಲಕ್ಷಣಗಳು ಕಾಣಿಸದಿದ್ದರೂ, ಲಿವರ್ ತನ್ನ ನೈಜ ಸಾಮರ್ಥ್ಯವನ್ನು ಕಳೆದುಕೊಳ್ಳಲು ಆರಂಭಿಸಿರುತ್ತದೆ.

2. ಲಿವರ್ ಊತ ಅಥವಾ ಇನ್ಫ್ಲಮೇಷನ್ (3-9 ತಿಂಗಳು) :
ಆರು ತಿಂಗಳು ಕಳೆಯುತ್ತಾ ಬಂದಂತೆ ಯಕೃತ್ತಿನಲ್ಲಿ ಉರಿಯೂತ ಅಥವಾ ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಕುಂಠಿತವಾಗುವುದು, ಪದೇ ಪದೇ ಆಯಾಸವಾಗುವುದು ಮತ್ತು ಹೊಟ್ಟೆಯ ಬಲಭಾಗದಲ್ಲಿ ಸಣ್ಣಗೆ ನೋವು ಕಾಣಿಸಿಕೊಳ್ಳಬಹುದು.

3. ಜೀವಕೋಶಗಳ ನಾಶ (9-12 ತಿಂಗಳು) :
ಒಂದು ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ಲಿವರ್‌ನ ಆರೋಗ್ಯವಂತ ಜೀವಕೋಶಗಳು ಸಾಯಲು ಆರಂಭಿಸುತ್ತವೆ. ಲಿವರ್ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಶಕ್ತಿಯನ್ನು ಮೀರಿ ಹಾನಿಗೊಳಗಾಗಲು ಈ ಹಂತ ನಾಂದಿಯಾಗುತ್ತದೆ. ಇದು ಮುಂದೆ ‘ಲಿವರ್ ಸಿರೋಸಿಸ್’ ನಂತಹ ಮಾರಕ ಸ್ಥಿತಿಗೆ ದಾರಿ ಮಾಡಿಕೊಡುತ್ತದೆ.

WhatsApp Group Join Now

Spread the love

Leave a Reply