ಗದಗ ತಾಲೂಕಿನಲ್ಲಿ ಸಿನಿಮೀಯ ರೀತಿಯಲ್ಲಿ ಸಾರಿಗೆ ಬಸ್ ಅಡ್ಡಗಟ್ಟಿ ಗಲಾಟೆ ಮಾಡಿ ಕರ್ತವ್ಯದಲ್ಲಿದ್ದ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ಮಕ್ಕಳು ಶಾಲೆಗೆ ಹೋಗಲು ಕಾಯುತ್ತಿದ್ದರು, ಆದರೆ ಬಸ್ ನಿಲ್ಲಿಸದ ಕಾರಣ ಮಗಳಿಗೆ ಬಸ್ ಪರೀಕ್ಷೆ ಮಿಸ್ ಆಗುತ್ತದೆ ಎಂಬ ಕಾರಣಕ್ಕೆ ಬೈಕ್ ನಲ್ಲಿ ಬಸ್ ಅನ್ನು ಬೆನ್ನಟ್ಟಿ ಬಂದು ಟೋಲ್ ನಾಕಾ ಬಳಿ ಅಡ್ಡಗಟ್ಟಿದ್ದಾರೆ.
ಬೈಕ್ ಮೂಲಕ ಬಂದು ಬಸ್ ಅಡ್ಡಗಟ್ಟಿದ ಬಳಿಕ ವಿದ್ಯಾರ್ಥಿನಿ ಬಸ್ ಹತ್ತಲು ಮುಂದಾಗಿದ್ದಾಳೆ. ಇದನ್ನೂ ಗಮನಿಸಿದ ಕಂಡಕ್ಟರ್ ನೇತ್ರಾವತಿ, ಇಲ್ಲಿ ಬಸ್ ಹತ್ತಬಾರದು ಚೆಕ್ಕಿಂಗ್ ಗೆ ಬಂದರೆ ನಮ್ಮ ಕೆಲಸ ಹೋಗುತ್ತದೆ ಎಂದು ಹೇಳಿ ಬಸ್ ನಿಂದ ಕೆಳಕ್ಕೆ ಇಳಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿದ ಬಾಲಕಿಯ ತಂದೆ ಹಾಗೂ ಗ್ರಾಮಸ್ಥರು ಸಿಟ್ಟಾಗಿ ಬಸ್ ಅನ್ನು ಬೆನ್ನಟ್ಟಿ ಬಂದ ಅಡ್ಡಗಟ್ಟಿ ಯಾಕೆ ಕೆಳಕ್ಕೆ ಇಳಿಸಿದ್ದೀರಿ ಎಂದು ಮುಂಡರಗಿ ತಾಳುಕಿನ ಕದಂಪೂರ ಗ್ರಾಮದ ಪ್ರಕಾಶ ಸಂಕಣ್ಣನವರ ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಗ್ರಾಮಸ್ಥರೆಲ್ಲ ಸೇರಿ ಚಾಲಕ, ನಿರ್ವಾಹಕಿ ಜೊತೆ ಜಗಳ ಮಾಡುತ್ತಿದ್ದರು, ಇದೇ ವೇಳೆ ಏಕಾಏಕಿ ಎಂಟ್ರಿ ಕೊಟ್ಟ ಅದೇ ಗ್ರಾಮದ ವ್ಯಕ್ತಿ ನೀಲಪ್ಪ ಜಂತ್ಲಿ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಸಿಟ್ಟಾದ ಕಂಡಕ್ಟರ್ ನೇತ್ರಾವತಿ ವಾಪಸ್ ಹೊಡೆದಿದ್ದಾರೆ.
ಕಂಡಕ್ಟರ್ ನೇತ್ರಾವತಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಜೋರಾಗಿ ಅಳುತ್ತಾ ಕೆಳಕ್ಕೆ ಬಿದ್ದಿದ್ದು, ಕೂಡಲೇ ಪ್ರಯಾಣಿಕರು ಮೇಲಕ್ಕೆ ಎತ್ತಿ ಸೀಟಿನಲ್ಲಿ ಕೂರಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಂಡಕ್ಟರ್ ನೇತ್ರಾವತಿ ದೂರು ದಾಖಲಿಸಿದ್ದರು.
ದೂರಿನನ್ವಯ ಮುಂಡರಗಿ ತಾಳುಕಿನ ಕದಂಪೂರ ಗ್ರಾಮದ ಪ್ರಕಾಶ ಸಂಕಣ್ಣನವರ ಹಾಗೂ ಹಲ್ಲೆ ನಡೆಸಿದ ನೀಲಪ್ಪ ಜಂತ್ಲಿಯನ್ನು ಪೊಲೀಸರು ಬಂಧಿಸಿದ್ದು, ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಬಸ್ ನಿಲ್ಲಿಸದಿದ್ದಕ್ಕೆ ಗ್ರಾಮಸ್ಥರಿಂದ ಹಲ್ಲೆ – ತಲೆ ತಿರುಗಿ ಬಿದ್ದ ಲೇಡಿ ಕಂಡಕ್ಟರ್
WhatsApp Group
Join Now