ಪಾಪಿ ಪುತ್ರನೊಬ್ಬ ಬುದ್ಧಿವಾದ ಹೇಳಿದ ಹೆತ್ತಪ್ಪನನ್ನೇ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಬ್ಯಾಡರಹಳ್ಳಿಯ ತಿಗಳರಪಾಳ್ಯದ ಕೆರೆಯ ಮುನೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ.
ಮೃತ ತಂದೆಯನ್ನು ಮಾಜಿ ಸೈನಿಕ ಚನ್ನಬಸಪ್ಪ (61) ಎಂದು ಗುರುತಿಸಲಾಗಿದ್ದು, ನಿವೃತ್ತಿ ಬಳಿಕ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಅಮಿತ್ (21) ಎಂದು ಗುರುತಿಸಲಾಗಿದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅಮಿತ್ ಜೀವನ ಹಾದಿ ತಪ್ಪಿತ್ತು. ಮಾದಕ ವಸ್ತುವಿನ ದಾಸನಾಗಿದ್ದ ಅಮಿತ್‌ಗೆ ತಂದೆ ಬುದ್ಧಿವಾದ ಹೇಳುತ್ತಿದ್ದರು. ಇದೇ ವಿಚಾರವಾಗಿಯೂ ಪ್ರತಿ ದಿನ ಅಪ್ಪ ಮಗನ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಸೋಮವಾರ ಸಂಜೆ ಕೂಡ ಕುಡಿದು ಮನೆಗೆ ಬಂದಿದ್ದ ಅಮಿತ್ ಕುಡಿಯಲು ಮತ್ತಷ್ಟು ಹಣ ಕೇಳಿದ್ದಲ್ಲದೇ, ತಾಯಿಯ ಚಿನ್ನದ ಸರ, ಕಿವಿಯೋಲೆ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಅದನ್ನು ತಂದೆ ಚನ್ನಬಸವಯ್ಯ ಪ್ರಶ್ನಿಸಿ, ಮದ್ಯ, ಡ್ರಗ್ಸ್ ಸೇವನೆಯಿಂದ ದೂರವಾಗಿ, ಉತ್ತಮ ಕೆಲಸ ಮಾಡುವಂತೆ ಚನ್ನಬಸವಯ್ಯ, ಅಮಿತ್‌ಗೆ ಬುದ್ದಿವಾದ ಹೇಳಿದ್ದಾರೆ. ಅದರಿಂದ ಕೋಪಗೊಂಡ ಆರೋಪಿ, ಚಾಕುವಿನಿಂದ ತಂದೆಯ ಎದೆ, ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಕೂಡಲೇ ಪತ್ನಿ, ಪುತ್ರಿ ಹಾಗೂ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಕ್ಷಣಗಳಲ್ಲಿ ಚನ್ನಬಸವಯ್ಯ ಮೃತಪಟ್ಟಿದ್ದಾರೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಪ್ರಕರಣ ದಾಖಲಿಸಿಕೊಂಡು ಪಾಪಿ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.