State Budget 2025 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹದಿನಾರನೇ ಬಜೆಟ್ ಗೆ ಮುಹೂರ್ತ ಫಿಕ್ಸ್.! ರೈತರಿಗೆ ಸಿಹಿ ಸುದ್ದಿ ಕೊಡ್ತಾರಾ.? ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇದೀಗ 2025-26 ರ ಬಜೆಟ್ ಮಂಡನೆ ಮುಹೂರ್ತ ಫಿಕ್ಸ್ ಆಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಮಾರ್ಚ್ ಮೂರಕ್ಕೆ ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯಲಿದೆ ಮತ್ತು ಮಾರ್ಚ್ 7 ರಂದು 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಈ ಬಾರಿಯ ಬಜೆಟ್ 2025-26 ರ ಬಗ್ಗೆ ಜನರಿಗೆ ಹಲವು ನಿರೀಕ್ಷೆಗಳಿದ್ದು, ಇದೀಗ ಕೊನೆಗೂ ಸಿಎಂ ಸಿದ್ದರಾಮಯ್ಯನವರು ಮಾರ್ಚ್ 7 ರಂದು ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಸತತ ಹದಿನಾರನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.
RTC Transfer : ಜಮೀನಿನ ಪಹಣಿ ತಂದೆ, ತಾತ, ಮುತ್ತಾತ, ಪೂರ್ವಜರ ಹೆಸರಿನಲ್ಲಿ ಇದ್ದರೆ – ನಿಮ್ಮ ಹೆಸರಿಗೆ ವರ್ಗಾವಣೆ
ಕಾಲು ನೋವಿದ್ದರೂ ಮನೆಯಿಂದಲೇ ಸಭೆ :-
ಹೊಸ ವರ್ಷದ ಮೊದಲ ಅಧಿವೇಶನ ಮಾರ್ಚ್ 3 ರಿಂದ ಆರಂಭವಾಗಲಿದೆ. ನನಗೆ ಕಾಲು ನೋವು ಇದ್ದರೂ ಮನೆಯಲ್ಲಿ ಕುಳಿತು ಇಲಾಖೆಗಳ ಸಭೆ ನಡೆಸಿದ್ದೇನೆ. ಇಂದು ರೈತ ಮುಖಂಡರ ಜೊತೆಗೂ ಕೂಡ ಸಭೆಯನ್ನು ಮಾಡಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಿದರು. ಇನ್ನು ಬಜೆಟ್ ಮಾಡುವಾಗ ನಮ್ಮ ಇತಿಮಿತಿಯಲ್ಲಿ ಏನೇನು ಸೇರಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ ಪೂರಕವಾಗಿ ಇರ್ತಿವಿ ಎಂಬ ಮಾತನ್ನ ಕೊಡ್ತೀನಿ.
ಕಳೆದ ಮೂರು ತಿಂಗಳುಗಳಿಂದ ರಾಜ್ಯ ಸರ್ಕಾರ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಫಲಾನುಭವಿಗಳಿಗೆ ನೀಡಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದರು. ಈ ಕುರಿತಂತೆ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಹಾಕುವುದು ಸ್ವಲ್ಪ ತಡವಾಗಿದೆ. ಹೌದು, ಗೃಹಲಕ್ಷ್ಮಿ ಹಣ ಕೂಡ ಮೂರು ತಿಂಗಳಿನಿಂದ ತಡವಾಗಿದೆ. ಸರ್ಕಾರದ ಮಾತು ಕೊಟ್ಟಂತೆ ಎರಡು ಹಣ ಹಾಕುತ್ತೇವೆ. ಶೀಘ್ರದಲ್ಲಿಯೇ ಎಲ್ಲ ಹಣವನ್ನು ಫಲಾನುಭವಿ ಹಾಕುತ್ತೇವೆಂದು ಆಶ್ವಾಸನೆ ನೀಡಿದರು.
ಲೇಬರ್ ಕಾರ್ಡ್ ಇದ್ದವರಿಗೆ ₹120000 ಹಣ ಉಚಿತ – ಕಾರ್ಮಿಕ ಕಾರ್ಡ್ ಇದ್ದರೆ ತಪ್ಪದೇ ನೋಡಿ – Labour Card Benefits
ದೇವನಹಳ್ಳಿಯಲ್ಲಿ ಅನ್ನಭಾಗ್ಯ, ಅಕ್ಕಿ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ, ಎರಡು ತಿಂಗಳ ಹಣ ಮಾತ್ರ ಬಾಕಿ ಇದೆ. ನಾಲ್ಕೈದು ತಿಂಗಳು ಬಾಕಿ ಇಲ್ಲ. ಕೇವಲ ಎರಡೇ ತಿಂಗಳು ಹಣ ಮಾತ್ರ ಬಾಕಿ ಇದೆ. ಅದನ್ನ ಸಹ ಈಗ ಹಾಕಲಿದ್ದೇವೆ. ಎರಡು ತಿಂಗಳಿಗೆ ಒಂದು ಬಾರಿ ಹಾಕುತ್ತಿದ್ದೇವೆ. ಇನ್ನು ಮುಂದೆ ಪ್ರತಿ ತಿಂಗಳು ಸರಿಯಾಗಿ ಹಣ ಹಾಕುವುದಕ್ಕೆ ಏರ್ಪಾಡು ಮಾಡುತ್ತೇವೆ. ವಿಪಕ್ಷಗಳ ಟೀಕೆ ಮಾಡಿದರೆ ನಾವು ಸರಿಯಾಗಿ ಕೆಲಸ ಮಾಡುವುದು ಎಂದು ಹೇಳಿದ್ದಾರೆ.