Ration Card Updates : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ.! ಈ ದಾಖಲೆಗಳು ಕಡ್ಡಾಯ.!

Ration Card Updates : ನಮಸ್ಕಾರ ಸ್ನೇಹಿತರೇ, ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವವರಿಗೆ ಸಿಹಿಸುದ್ಧಿ ಇದೆಯಾ.? ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಯಾವಾಗ ಅವಕಾಶ ಮಾಡಿಕೊಡಲಾಗಿದೆ.? ಹಾಗು ಯಾವ ದಿನಾಂಕವನ್ನು ನಿಗದಿಪಡಿಸಲಾಗಿದೆ.? ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಹೊಸ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಲು ಸರ್ಕಾರವು ಈ ಹಿಂದೆ ಹಲವು ಬಾರಿ ಅವಕಾಶಗಳನ್ನು ಜನರಿಗೆ ಮಾಡಿಕೊಟ್ಟಿದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಕೆಲವೊಂದಿಷ್ಟು ಜನರಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಿತ್ತು. ಇನ್ನು ಬಹಳಷ್ಟು ಅರ್ಹರು ಎರಡು ವರ್ಷಗಳಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಅಂತವರಿಗೆ ಈಗ ಸರ್ಕಾರ ಸಿಹಿಸುದ್ಧಿ ನೀಡಿದೆ. ಜೂನ್ 4 ರಂದು ಅಥವಾ ಅದರ ನಂತರ ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್(Ration Card) ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸುವುದಾಗಿ ತಿಳಿಸಿದೆ.

WhatsApp Group Join Now

ಇದನ್ನೂ ಕೂಡ ಓದಿ : Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

ಹೊಸ ಪಡಿತರ ಚೀಟಿಗೆ (Ration Card) ಅರ್ಜಿ :

ನೀವು ಹೊಸ ಪಡಿತರ ಚೀಟಿಗೆ(Ration Card) ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ಕೆಳಗೆ ತಿಳಿಸಲಾದ ಕೆಲವು ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ. ಏಕೆಂದರೆ ಸರ್ವರ್ ಕೆಲವು ಗಂಟೆಗಳ ಕಾಲ ಮಾತ್ರ ಇರುತ್ತದೆ. ನಿಮ್ಮ ಹತ್ತಿರ ದಾಖಲಾತಿಗಳು ರೆಡಿಯಾಗಿದ್ದರೆ ಸರ್ವರ್ ಬಂದಾಗ ತಕ್ಷಣ ಅರ್ಜಿಯನ್ನ ಸಲ್ಲಿಸಬಹುದು. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೆಳಗಡೆ ನೀಡಿರುವ ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು..

WhatsApp Group Join Now

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಜಾರಿಗೊಳಿಸಿದ ನಂತರ ಜನರು ಹೊಸ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದ್ದರಿಂದ ನೀವು ಮೊದಲೇ ಎಲ್ಲಾ ದಾಖಲೆಗಳನ್ನು ರೆಡಿಯಾಗಿಟ್ಟುಕೊಂಡರೆ ಅರ್ಜಿಯನ್ನು ಆರಂಭ ಮಾಡಿದ ತಕ್ಷಣವೇ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಕೂಡ ಓದಿ : e-Shram Card : ಸರ್ಕಾರದ ಈ ಕಾರ್ಡ್ ಇದ್ರೆ ನಿಮಗೆ ಸಿಗಲಿದೆ 2 ಲಕ್ಷ ರೂ. ವಿಮೆ.! ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ಪಡಿತರ ಚೀಟಿಗೆ ಯಾವಾಗ ಅರ್ಜಿ ಪ್ರಾರಂಭ :-

ನಮಗೆ ಬಂದಿರುವ ಮಾಹಿತಿ ಪ್ರಕಾರ ಇದೇ ಜೂನ್ 4 ರಂದು ಅಥವಾ ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದಾಗಿ ತಿಳಿದು ಬಂದಿದೆ. ಆದ್ದರಿಂದ ಪಡಿತರ ಚೀಟಿ(Ration Card) ತಿದ್ದುಪಡಿ ಮಾಡುವವರು ಅಥವಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಜೂನ್ 4ರ ಒಳಗೆ ಎಲ್ಲಾ ದಾಖಲೆಗಳನ್ನು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಂಡಿರಿ.

WhatsApp Group Join Now

ಬೇಕಾಗುವ ದಾಖಲೆಗಳೇನು :-

  • ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನಿಮ್ಮ ಕುಟುಂಬದ ವಿಳಾಸ ಪ್ರಮಾಣ ಪತ್ರ
  • ನಿಮ್ಮದೇ ಆದ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
  • ಸದಸ್ಯರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ

ಇದನ್ನೂ ಕೂಡ ಓದಿ : Bara Parihara Amount Failed : ನಿಮಗಿನ್ನೂ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಈ ತಪ್ಪುಗಳೇ ಕಾರಣ! ಸಂಪೂರ್ಣ ಮಾಹಿತಿ

ಹೇಗೆ ಅರ್ಜಿ ಸಲ್ಲಿಸುವುದು.?

ನೀವು ಹೊಸ ಪಡಿತರ ಚೀಟಿಗೆ(Ration Card) ಅರ್ಜಿಯನ್ನು ನಿಮ್ಮ ಮೊಬೈಲ್ ಫೋನ್ ಮೂಲಕ ಆನ್ ಲೈನ್ ನಲ್ಲಿಯೇ ಅರ್ಜಿಯನ್ನ ಸಲ್ಲಿಸಬಹುದು. ಆದರೆ, ಸರ್ವರ್ ಸಮಸ್ಯೆ ಜಾಸ್ತಿಯಿರುವ ಕಾರಣ, ನಿಮ್ಮ ಹತ್ತಿರದ ಗ್ರಾಮ ಒನ್ , ಬಾಪೂಜಿ ಸೇವಾ ಕೇಂದ್ರ ಇಂತಹ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ನೀವು ಸುಲಭವಾಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply