Ration Card Updates : ಹೊಸ ರೇಷನ್ ಕಾರ್ಡ್ ಅರ್ಜಿ ಸ್ಟೇಟಸ್ ಚೆಕ್ ಹೀಗೆ ಮಾಡಿ | ರೇಷನ್ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ

Spread the love

Ration Card Updates : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಬಂದಿರುವ ಅರ್ಜಿ ವಿಲೇವಾರಿಯು ಪ್ರಾರಂಭವಾಗಿದೆ. ಇದೀಗ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಾಗಿದ್ದರೆ ನಿಮಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತೆ ಮತ್ತು ಹೊಸ ರೇಷನ್ ಕಾರ್ಡ್ ನ ಸ್ಟೇಟಸ್ ನಿಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Taxi Car Subsidy : ಕಾರು, ಆಟೋ, ಗೂಡ್ಸ್ ವಾಹನ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ – ಡೈರೆಕ್ಟ್ ಲಿಂಕ್ ಇಲ್ಲಿದೆ

ಕೊನೆಗೆ ಒಂದು ವರ್ಷದಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಕಡೆಯಿಂದ ಈಗ ಸಿಹಿ ಸುದ್ದಿಯನ್ನು ನೀಡಿದೆ. ಹೌದು, ಬಹಳ ದಿನಗಳಿಂದ ಕರ್ನಾಟಕದ ಜನತೆ ಯಾವಾಗ ಹೊಸ ರೇಷನ್ ಕಾರ್ಡ್ ನಮ್ಮ ಕೈಗೆ ಸಿಗುತ್ತದೆ ತುಂಬಾನೇ ಕಾಯ್ತಾ ಇದ್ರು. ಯಾಕೆಂದರೆ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಪಡಿತರ ಚೀಟಿ ಬಹುಮುಖ್ಯವಾಗಿದೆ. ಹಾಗೂ ಯಾವುದೇ ಯೋಜನೆಯ ಲಾಭ ಪಡೆಯಲು, ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಲು ಕೂಡ ರೇಷನ್ ಕಾರ್ಡ್ ಮುಖ್ಯವಾಗಿದೆ. ಇದಕ್ಕಾಗಿ ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದವರಿಗೆ ಇದೀಗ ಹೊಸ ರೇಷನ್ ಕಾರ್ಡ್ ನೀಡಲು ರಾಜ್ಯ ಆಹಾರ ಇಲಾಖೆಯು ಅವಕಾಶವನ್ನ ಕಲ್ಪಿಸಿದೆ.

WhatsApp Group Join Now

ರಾಜ್ಯ ಆಹಾರ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪನವರು, ಇನ್ನು ಯಾರು ಕೂಡ ಕಾಯುವ ಅಗತ್ಯವಿಲ್ಲ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಪ್ರಾರಂಭ ಮಾಡಿದ್ದೇವೆ, ರಾಜ್ಯದಲ್ಲಿ ಸುಮಾರು ಒಟ್ಟು 1,73,000 ಹೊಸ ಬಿಪಿಎಲ್ (BPL) ರೇಷನ್ ಕಾರ್ಡ್ ವಿತರಣೆಯನ್ನು ಮಾಡಲಾಗುವುದು ಎಂದು ಅಧಿಕೃತ ಘೋಷಣೆಯನ್ನು ಕೂಡ ಮಾಡಲಾಯಿತು ಎಂದು ತಿಳಿಸಿದ್ದಾರೆ. ಕೊನೆಗೂ ಇಷ್ಟು ದಿನ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದ ಜನತೆಗೆ ಇದು ಸಿಹಿ ಸುದ್ದಿ ಅಂತಾನೇ ಹೇಳಬಹುದು.

ಇದನ್ನೂ ಕೂಡ ಓದಿ : Business Loan : ಸ್ವ-ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿವರೆಗೆ ಸಾಲ ಹಾಗು ಸಹಾಯಧನ.! ಬೇಕಾಗುವ ದಾಖಲೆಗಳೇನು.?

WhatsApp Group Join Now

ರೇಷನ್ ಕಾರ್ಡ್ (Ration Card) ಸ್ಟೇಟಸ್ ಚೆಕ್ ಮಾಡುವ ವಿಧಾನ.?

ನೀವು ಈಗಾಗಲೇ ರಾಜ್ಯದಲ್ಲಿ ನೀವು ಹೊಸ ರೇಷನ್ ಕಾರ್ಡ್ ಗೆ ನೀವು ಅರ್ಜಿ ಸಲ್ಲಿಸಿದ್ದರೆ ನಿಮ್ಮ ಮೊಬೈಲ್ ನಲ್ಲೇ ನಾವು ಈ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸ್ಥಿತಿಯನ್ನು ನೀವು ತುಂಬಾ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಮೊದಲು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ ಮುಂದೆ ಈ ಸ್ಥಿತಿ (e status) ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಆರ್‌ಸಿ ವಿನಂತಿ ಸ್ಥಿತಿ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿಯ ಸ್ಥಿತಿ ಆಯ್ಕೆ ಕ್ಲಿಕ್ ಮಾಡಿ. ಆಮೇಲೆ ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ಹರ್ಬಲ್ ಎಂದು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನೀವು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಪಡೆದುಕೊಂಡ acknowledgment number ನಂಬರನ್ನೂ ಹಾಕಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಕಿ
ನಂತರ ಕೆಳಗಿರುವ Go ಬಟನ್ ಮೇಲೆ ಕ್ಲಿಕ್ ಮಾಡಿ, ಆವಾಗ ನಿಮ್ಮ ಹೊಸ ಪಡಿತರ ಚೀಟಿ ಅರ್ಜಿ ಸ್ಥಿತಿ ನಿಮಗೆ ತಿಳಿಯಬಹುದು.

ರೇಷನ್ ಕಾರ್ಡ್ ಅರ್ಜಿ ಸ್ಥಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply