ಚಲನಚಿತ್ರ ನಿರ್ಮಾಪಕ-ಸಂಯೋಜಕ ಪಲಾಶ್ ಮುಚ್ಚಲ್ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ನವೆಂಬರ್ 23ರ ಭಾನುವಾರದಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹವಾಗಲು ಸಜ್ಜಾಗಿದ್ದರು. ಅದ್ರಂತೆ, ಮದುವೆ ಕಾರ್ಯಗಳು ಕೂಡ ಆರಂಭವಾಗಿದ್ದವು.
ಆದ್ರೆ, ಇದ್ದಕ್ಕಿದ್ದಂತೆ ಸ್ಮೃತಿ ತಂದೆಗೆ ಅನಾರೋಗ್ಯ ಉಂಟಾಗಿದ್ದು ಮದುವೆ ಹಠಾತ್ತನೆ ನಿಂತುಹೋಯಿತು.
ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರನ್ನ ಹೃದಯಾಘಾತದ ಲಕ್ಷಣಗಳು ಕಂಡುಬಂದ ನಂತರ ಸರ್ವಿತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ದಿನದ ನಂತರ, ಹಠಾತ್ ಆರೋಗ್ಯ ಸಮಸ್ಯೆಯ ವರದಿಗಳ ನಂತರ ಪಲಾಶ್ ಅವರನ್ನ ಕೂಡ ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಲಾಯಿತು.
ಆದಾಗ್ಯೂ, ಸಧ್ಯ ಮದುವೆಯನ್ನ ವಿರಾಮಗೊಳಿಸಿದ ಸ್ವಲ್ಪ ಸಮಯದ ನಂತರ ಪಲಾಶ್ ಸ್ಮೃತಿಯನ್ನ ಮೋಸ ಮಾಡಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ‍್ಯಮದಲ್ಲಿ ಓಡಾಡುತ್ತಿವೆ. ಅದ್ರಂತೆ, ಸ್ಮೃತಿ ಕೂಡ ತನ್ನ ನಿಶ್ಚಿತಾರ್ಥ ಘೋಷಣೆ ಮತ್ತು ಪ್ರಸ್ತಾಪದ ವೀಡಿಯೊ ಸೇರಿದಂತೆ ಮದುವೆಗೆ ಸಂಬಂಧಿಸಿದ ತನ್ನ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್’ಗಳನ್ನು ಸದ್ದಿಲ್ಲದೆ ಅಳಿಸಿ ಹಾಕಿದ್ದಾರೆ. ಇನ್ನೀದು ತಕ್ಷಣವೇ ಆನ್‌ಲೈನ್’ನಲ್ಲಿ ಊಹಾಪೋಹಗಳಿಗೆ ಕಾರಣವಾಯಿತು.
ರೆಡ್ಡಿಟ್ ಸ್ಕ್ರೀನ್‌ಶಾಟ್’ಗಳು ವಿಭಿನ್ನ ಸಂಭಾಷಣೆಯನ್ನ ಹುಟ್ಟುಹಾಕುತ್ತವೆ.!
ಮೇರಿ ಡಿ’ಕೋಸ್ಟಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ರೆಡ್ಡಿಟ್’ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ, ಅದು ಪಲಾಶ್ ಅವರೊಂದಿಗಿನ ಅವರ ಚಾಟ್’ಗಳೆಂದು ಅವರು ಹೇಳಿಕೊಂಡಿದ್ದಾರೆ. ಖಾತೆಯನ್ನು – ಪ್ರದರ್ಶನ ಚಿತ್ರದೊಂದಿಗೆ – ನಿಷ್ಕ್ರಿಯಗೊಳಿಸಲಾಗಿದೆ, ಆದರೆ ಸ್ಕ್ರೀನ್‌ಶಾಟ್’ಗಳು ಪ್ಲಾಟ್‌ಫಾರ್ಮ್’ಗಳಲ್ಲಿ ಪ್ರಸಾರವಾಗುತ್ತಲೇ ಇವೆ.
ಮೇ 2025ರ ಹಿಂದಿನ ಸಂದೇಶಗಳಲ್ಲಿ, ಪಲಾಶ್ ಮೇರಿಯನ್ನ ಸ್ವಿಮ್ಮಿಂಗ್ ಮಾಡಲು ಬರುವಂತೆ ಕೇಳುತ್ತಿರುವುದನ್ನು ಕಾಣಬಹುದು. ಇನ್ನು ಆಕೆ ಪಾಲಾಶ್ ತನ್ನನ್ನು ಪ್ರೀತಿಸುತ್ತಿದ್ದಾನೋ ಇಲ್ಲವೋ ಎಂದು ತಿಳಿಯಲು ಪ್ರಯತ್ನಿಸಿದಾಗ, ಪಲಾಶ್ ನುಣುಚಿಕೊಳ್ಳುತ್ತಾ ಸ್ಪಷ್ಟ ಉತ್ತರ ನೀಡುವ ಬದಲು, ಆಕೆಯ ಭೇಟಿಗಾಗಿ ಮನವೊಲಿಸುವುದನ್ನ ಕಾಣಬಹುದು. ಸ್ವಾಭಾವಿಕವಾಗಿ, ಈ ಸ್ಕ್ರೀನ್‌ಶಾಟ್‌ಗಳು ಬೇಗನೆ ವೈರಲ್ ಆಗಿದ್ದು, ಮುಂದೂಡಲ್ಪಟ್ಟ ವಿವಾಹದ ಸುತ್ತ ಚರ್ಚೆಯ ಮುಖ್ಯ ವಿಷಯವಾಗಿದೆ. ನೆಟ್ಟಿಗರು ಇದನ್ನ ಪ್ರಲಭವಾಗಿ ಖಂಡಿಸಿದ್ದು, ಸ್ಮೃತಿಗೆ ಬೆಂಬಲ ನೀಡುತ್ತಿದ್ದಾರೆ.

