‘ನಮ್ಮ ರಾಜಕೀಯ ಮುಗಿಯಿತು, ನೀವು ಎಚ್ಚರಿಕೆ ವಹಿಸದೇ ಇದ್ದರೆ ಅಪಾಯ ಎದುರಾಗಲಿದೆ,” ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿರುವ ಮುನ್ಸೂಚನೆ ನೀಡಿದರು.ಮೈಸೂರಿನ ಜೆಕೆ ಮೈದಾನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದಿಂದ ನಡೆದ ಮೈಸೂರು ವಿಭಾಗೀಯ ಎಸ್‌ಐಆರ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿ(ಎಸ್‌ಐಆರ್) ಬಗ್ಗೆ ಜಾಗೃತಿ ವಹಿಸದಿದ್ದರೆ ಮಾರಣಹೋಮ ನಡೆಯಲಿದೆ ಎಂದು ಆತಂಕ ವ್ಯಕ್ತಪಡಿಸುವುದರ ಜೊತೆಗೆ ನಮ್ಮ ರಾಜಕೀಯ ಮುಗಿಯಿಯು ಮುಂದಿನ ಮುಖಂಡರುಎಚ್ಚರವಹಿಸಬೇಖು ಎಂದು ಕಿವಿಮಾತು ಹೇಳಿದ್ದಾರೆ.
”ದೇಶದಲ್ಲಿ ಸಂದಿಗ್ಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ವಾಧಿಕಾರಕ್ಕಾಗಿ ಬಿಜೆಪಿ ಏನಾದರೂ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಎಚ್ಚರ ತಪ್ಪಿದರೆ ನಿಮ್ಮನ್ನೇ ಮುಗಿಸಲಿದೆ,” ಎಂದು ನಾಯಕರು ಮತ್ತು ಮುಖಂಡರಿಗೆ ಎಚ್ಚರಿಕೆ ನೀಡಿದರು. ನನ್ನ ರಾಜಕೀಯ ಮುಗಿಯಿತು, ನೀವು ಎಚ್ಚರಿಕೆ ವಹಿಸದೇ ಇದ್ದರೆ ಅಪಾಯ ಎದುರಾಗಲಿದೆ,” ಎಂದು ಹೇಳುವ ಮೂಲಕ ಇನ್ಮುಂದೆ ರಾಜಕೀಯದಲ್ಲಿ ಇರುವುದಿಲ್ಲ ಎಂಬ ಬಗ್ಗೆ, ಚುನಾವಣೆ ಎದುರಿಸುವುದಿಲ್ಲ ಎಂಬ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.
ಬಿಜೆಪಿಯಿಂದ ದ್ರೋಹ ಆರೋಪ
”ದೇಶದಲ್ಲಿ 2014ರ ನಂತರ ಮತದಾರರ ದ್ರೋಹ ನಡೆಯುತ್ತಿದೆ. ಬಿಜೆಪಿಯವರು ಮತ ದಾರರ ಪಟ್ಟಿಯಲ್ಲಿರುವ ಕಾಂಗ್ರೆಸ್ ಪರವಾಗಿರುವ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಮತಗಳನ್ನು ಎಗರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮತಗಳನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು, ಹಾಲಿ ಮತ್ತು ಮಾಜಿ ಸಂಸದರು ನಿಗಾವಹಿಸಬೇಕು. ಪರಿಷ್ಕರಣೆ ನಡೆಯುವ ಒಂದು ತಿಂಗಳ ಕಾಲ ಎಲ್ಲ ಕೆಲಸವನ್ನು ಬದಿಗೊತ್ತಿ ಪರಿಷ್ಕರಣಾ ಕಾರ್ಯದ ಬಗ್ಗೆ ಎಚ್ಚರಿಕೆ ಈ ವಹಿಸಬೇಕು. ಈ ಸಮ ಯದಲ್ಲಿ ವೆಚ್ಚವಾದರೂ ಚಿಂತೆ ಇಲ್ಲ. ಯಾವುದೇ ಅರ್ಹ ಮತದಾರರ ಹೆಸರು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು,” ಎಂದರು. ”
ಎಸ್‌ಐಆರ್ ನಡೆಯುತ್ತಿರುವುದು ಇದು ಮೊದಲ ಬಾರಿಯಲ್ಲ. 1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿ, 1952 ರಲ್ಲಿ ಪ್ರಥಮ ಚುನಾವಣೆ ನಡೆಯಿತು. ಆಗಾಗ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತ ಬಂದಿದೆ. ಆದರೆ ಅರ್ಹ ಮತದಾರರನ್ನು ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ. ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು. ಮೋಸ ಮಾಡಿದವರಲ್ಲ,” ಎಂದು ಹೇಳಿದರು.
”ಈಗ ದೇಶದಲ್ಲಿ ಸಂವಿಧಾನಬದ್ಧ ಚುನಾವಣಾ ಆಯೋಗ ಇಲ್ಲ ಎನ್ನುವುದನ್ನು ಮರೆಯಬೇಡಿ. 2019ರಲ್ಲಿ ಬಿಜೆಪಿಯ 303 ಅಭ್ಯರ್ಥಿಗಳು ಗೆದ್ದಿದ್ದರು. 2024ರಲ್ಲಿಈ ಸಂಖ್ಯೆ 240ಕ್ಕೆ ಇಳಿದಿದೆ. ಇದಕ್ಕೆ ಬೆಲೆಯೇರಿಕೆ, ವಚನ ಭ್ರಷ್ಟತೆ, ನಿರುದ್ಯೋಗ ಕಾರಣ. ಈ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎಸ್‌ಐಆರ್ ಮೂಲಕ ಬದಲಾಯಿಸಲು ಹೊರಟಿದ್ದಾರೆ. ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿಯಾಗಿದೆ. 13 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಫಲಿತಾಂಶ ಏನಾಗಿದೆ? ಕೇರಳದಲ್ಲಿ ಇವರ ಆಟ ನಡೆಯಲಿಲ್ಲಅಷ್ಟೆ. ಬಿಜೆಪಿ ಎರಡು ಬಾರಿಯೂ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿಅಧಿಕಾರಕ್ಕೆ ಬಂದಿದ್ದು, ಅವರು ಅಧಿಕಾರದಲ್ಲಿ ಉಳಿಯಲು ಏನು ಬೇಕಾದರೂ ಮಾಡಲು ಹೇಸುವುದಿಲ್ಲ,” ಎಂದು ದೂರಿದರು.
ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ:
ಕೆಪಿಸಿಸಿಯ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ”ಎಸ್‌ಐಆರ್‌ನಿಂದಾಗಿ ದೇಶದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ನಾವ್ಯಾರೂ ಭಯೋತ್ಪಾದಕರಲ್ಲ. ಮತದಾನವೇ ಸಾರ್ವಜನಿಕರ ಕೈಯಲ್ಲಿಇರುವ ಅಸ್ತ್ರವಾಗಿದೆ. ಅದನ್ನು ಬಿಜೆಪಿಯವರು ಎಸ್‌ಐಆರ್ ನೆಪದಲ್ಲಿ ಕಿತ್ತು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟ ನಡೆಸಬೇಕಾಗಿದೆ,” ಎಂದು ಕರೆ ನೀಡಿದರು.
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಸಂಸದ ಸುನೀಲ್ ಬೋಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ ಸೇರಿದಂತೆ ಆರು ಜಿಲ್ಲೆಯ ಮಾಜಿ, ಹಾಲಿ ಶಾಸಕರು, ಜಿಲ್ಲಾಧ್ಯಕ್ಷರು ಮತ್ತು ಮುಖಂಡರು ಇದ್ದರು.
‘ನಮ್ಮ ರಾಜಕೀಯ ಮುಗಿಯಿತು.. ಚುನಾವಣಾ ರಾಜಕೀಯದ ಅಂತ್ಯದ ಬಗ್ಗೆ ಮೈಸೂರಲ್ಲಿ ಮುನ್ಸೂಚನೆ ನೀಡಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ!
WhatsApp Group
Join Now