ಕರ್ನಾಟಕದಲ್ಲೂ ಬಕ್ರೀದ್‌ಗೆ ಹಸು ಖರೀದಿ ಮಾಡಲ್ಲ ಎಂದ ಮುಸ್ಲಿಮರು: ನಮಗೆ ದುಡ್ಡು ಬೇಕು ಹಿಂದೂ ಸಂಘಟನೆಗಳೇ ಹಸು ಕೊಂಡುಕೊಳ್ಳಲಿ ಎಂದು ರೈತರ ಆಕ್ರೋಶ

Spread the love

ನಾಳೆ (ಮೇ 28) ದೇಶದಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಬಕ್ರೀದ್ ಎಂದಮೇಲೆ ಮಾಂಸದೂಟ ಭರ್ಜರಿಯಾಗಿಯೇ ನಡೆಯಲಿದ್ದು, ರೈತರಿಂದ ಪ್ರಾಣಿಗಳನ್ನು ಖರೀದಿಸಿ ಹಬ್ಬ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡುಬಂದಿರುವ ವಾಡಿಕೆ.

ಆದರೆ ಈ ಬಾರಿ ದೇಶದಾದ್ಯಂತ ಮುಸ್ಲಿಮರ ನಿರ್ಧಾರ ಬೇರೆಯದ್ದೇ ಆಗಿದ್ದು, ಸ್ವತಃ ಮುಸ್ಲಿಮರೇ ಜಾನುವಾರುಗಳನ್ನು ವಧೆ ಮಾಡದೇ ಹಬ್ಬ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.

ಜಾನುವಾರುಗಳೆಂದರೆ ಎಮ್ಮೆ, ಹಸು ಹಾಗೂ ದನ ಈ ಯಾವುದೇ ಪ್ರಾಣಿಯನ್ನೂ ಸಹ ಖರೀದಿ ಮಾಡದೇ ಹಬ್ಬ ಆಚರಿಸಲು ದೇಶದ ವಿವಿಧ ನಗರದ ಮುಸ್ಲಿಮರು ಕರೆ ಕೊಟ್ಟಿದ್ದು, ಇದಕ್ಕೆ ಸಮುದಾಯದವರಿಂದ ಸಮ್ಮತಿಯೂ ಸಹ ಸಿಕ್ಕಿದೆ.

ಪಶ್ಚಿಮ ಬಂಗಾಳದಲ್ಲಿ ಶುರುವಾದ ಈ ಆಂದೋಲನ ಸದ್ಯ ರಾಜ್ಯಕ್ಕೂ ಸಹ ಕಾಲಿಟ್ಟಿದ್ದು, ಹಾಸನದಲ್ಲಿ ಮುಸಲ್ಮಾನ ಸಂಘಟನೆಗಳು ಜಾನುವಾರುಗಳನ್ನು ಖರೀದಿಸದೇ ಹಬ್ಬ ಮಾಡಲು ತೀರ್ಮಾನಿಸಿದ್ದಾರೆ.

ಮುಸ್ಲಿಮರ ಈ ನಡೆ ರೈತರಿಗೆ ಭಾರೀ ಹಿನ್ನಡೆಯನ್ನುಂಟುಮಾಡಿದ್ದು, ಬಕ್ರೀದ್ ಪ್ರಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲು ಸಂತೆಗೆ ಕರೆ ತಂದು ಯಾರೂ ಖರೀದಿ ಮಾಡದ ಕಾರಣ ಆಕ್ರೋಶ ಹೊರಹಾಕಿದ್ದಾರೆ.

ಹಾಸನದಲ್ಲಿ ಈ ಘಟನೆ ನಡೆದಿದ್ದು, ಯಾರೂ ಸಹ ಖರೀದಿ ಮಾಡದೇ ಇದ್ದರೆ ನಾವು ಭಿತ್ತನೆ ಬೀಜ ತೆಗೆದುಕೊಳ್ಳಲು ಹಣ ಎಲ್ಲಿಂದ ಬರುತ್ತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಎಲ್ಲಿಂದ ತರುವುದು, ನಮಗೆ ಏನು ಮಾಡುತ್ತಾರೋ ಗೊತ್ತಿಲ್ಲ, ಡಿಸಿ ಕಚೇರಿ ಮುಂದೆ ಜಾನುವಾರುಗಳನ್ನು ತಂದು ಧರಣಿ ಮಾಡುತ್ತೇವೆ, ಅಧಿಕಾರಿಗಳಾದರೂ ತೆಗೆದುಕೊಳ್ಳಲಿ ಅಥವಾ ಸಂಘಟನೆಯವರಾದರೂ ತೆಗೆದುಕೊಳ್ಳಲಿ ನಮಗೆ ಹಣ ಬೇಕು, ಹಣದ ಅಗತ್ಯವಿದೆ ಎಂದು ಆಕ್ರೋಶದ ಮಾತುಗಳನ್ನು ಆಡಿದ್ದಾರೆ.

WhatsApp Group Join Now

Spread the love

Leave a Reply