Labour Card : ಬಿಪಿಎಲ್ ಕಾರ್ಡ್ ಬೆನ್ನಲ್ಲೆ, 2 ಲಕ್ಷಕ್ಕೂ ಅಧಿಕ ‘ನಕಲಿ’ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ರದ್ದು! ಸಂಪೂರ್ಣ ಮಾಹಿತಿ

Spread the love

Labour Card : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಅರ್ಹರಲ್ಲದವರು ಕೂಡ ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದರಿಂದ ಇದೀಗ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದೆ. ಬಿಪಿಎಲ್ ಕಾರ್ಡ್ ಬೆನ್ನಲ್ಲೇ ಕಾರ್ಮಿಕ ಕಾರ್ಡುಗಳ ಅಮಾನತು ಮಾಡಲಾಗಿದ್ದು, ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ನಕಲಿ ಕಾರ್ಡುಗಳು ಅಮಾನತು ಮಾಡಲಾಗಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

2,46, 951 ನಕಲಿ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ.

ಹೌದು, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಡ್ ಗೆ ನೋಂದಣಿ ಮಾಡಿಕೊಂಡಿದ್ದು. 2.46 ಲಕ್ಷ ಸಾವಿರ ಕಾರ್ಡ್ ಅಮಾನತು ಮಾಡಲಾಗಿದೆ. ಹಾವೇರಿಯಲ್ಲಿ 1.69 ಲಕ್ಷ ಕಾರ್ಡ್ ಗಳು ಕಾರ್ಮಿಕ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ. ಬಿಪಿಎಲ್ ಬೆನ್ನಲ್ಲೇ ಕಾರ್ಮಿಕ ಕಾರ್ಡ್ ಗಳನ್ನು ಇದೀಗ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಹಾವೇರಿಯಲ್ಲಿ ಸುಮಾರು ಎರಡೂವರೆ ಲಕ್ಷ 3 ಲಕ್ಷ ಕಾರ್ಡ್‌ ಮಾಡಿದ್ದಾರೆ. ಅಲ್ಲಿ ಪರಿಶೀಲಿಸಿದ ನಂತರ ಕಾರ್ಡ್‌ಗಳನ್ನು ರದ್ದು ಪಡಿಸಿದ್ದೇವೆ. ಅದೇ ರೀತಿ ಎಲ್ಲಾ ಜಿಲ್ಲೆಯಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ನಮ್ಮ ಸರ್ಕಾರಕ್ಕೆ ಯಾರು ಆದಾಯವನ್ನು ಗಳಿಸಲು ಸಹಾಯ ಮಾಡಿದ್ದಾರೋ ಅವರಿಗೆ ಕಾರ್ಮಿಕ ಕಾರ್ಡ್‌ ಅನ್ನು ನೀಡುತ್ತೇವೆ ಎಂದು ಹೇಳಿದರು.

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಕಾರ್ಮಿಕರ ಕಾರ್ಡ್ ಪರಿಶೀಲನೆ ಯಾವುದೇ ಕಾರಣಕ್ಕೂ ಇಲ್ಲ. ಅಂಬೇಡ್ಕರ್ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗುತ್ತೇವೆ. ನೇರ ಪರಿಶೀಲನೆ ಮಾಡಿ ಕಾರ್ಡ್ ವಿತರಿಸುತ್ತೇವೆ. ಸಮೀಕ್ಷೆ ಮಾಡಿ ಕಾರ್ಮಿಕ ಕಾರ್ಡ್ ಅಮಾನತು ಮಾಡಲಾಗುತ್ತದೆ. ರದ್ದಾದ ಕಾರ್ಡ್ ನಕಲಿ ಅಲ್ಲದಿದ್ದರೆ ಪುನಃ ನೀಡಲಾಗುತ್ತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ನೀಡಿದರು.

WhatsApp Group Join Now

Spread the love

Leave a Reply