ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ಪ್ರಾಕೃತಿಕ ದುರಂತದಿಂದಾಗಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸಿ, ಜನತೆ ಸಂಪೂರ್ಣ ನಲುಗಿ ಹೋಗಿರುವುದನ್ನು ಎಲ್ಲರೂ ಕಂಡಿದ್ದಾರೆ. ನೋಡು ನೋಡುತ್ತಿದ್ದಂತೆಯೇ ನಡೆದ ಈ ಘಟನೆಯ ಬೆನ್ನಲ್ಲೇ, ಹಾಸನದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಪ್ರಸ್ತುತ ಪರಿಸ್ಥಿತಿ ಹಾಗೂ ಈ ವರ್ಷದ ಭವಿಷ್ಯದ ಕುರಿತು ಆತಂಕಕಾರಿ ನುಡಿಗಳನ್ನಾಡಿದ್ದಾರೆ.
ದಕ್ಷಿಣ ಭಾರತದಲ್ಲೂ ನೇಪಾಳದ ಪರಿಸ್ಥಿತಿ ಮರುಕಳಿಸುವ ಆತಂಕ
ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಯುದ್ಧ, ಸಮರ, ವಿವಿಧ ಸಮಸ್ಯೆಗಳು ಮತ್ತು ಭಾರಿ ಪ್ರವಾಹದಂತಹ ಹಲವಾರು ಸಂಗತಿಗಳ ಬಗ್ಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ದಕ್ಷಿಣ ಭಾರತದಲ್ಲೂ ನೇಪಾಳದ ಪರಿಸ್ಥಿತಿಯೇ ಮರುಕಳಿಸಲಿದೆ ಎಂದು ಅವರು ನುಡಿದಿರುವುದು ತೀವ್ರ ಕೌತುಕ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಜನ ಜಂಗುಳಿ ಆಗುತ್ತದೆ, ಯುದ್ಧ ಆಗುತ್ತದೆ, ಜನ ನಿಯಂತ್ರಣ ತಪ್ಪುತ್ತದೆ, ಪ್ರಕೃತಿ ವಿಕೋಪ ಆಗುತ್ತದೆ. ದಕ್ಷಿಣ ಭಾರತದಲ್ಲಿ ನೇಪಾಳದಲ್ಲಿ ಆದಂತೆ ಆಗುತ್ತದೆ ಎಂದು ಅವರು ನೀಡಿರುವ ಭವಿಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದ ತೀವ್ರತೆಯಿಂದಾಗಿ ಊರುಗಳು ಜಲಾವೃತಗೊಂಡು ಭಾರೀ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸುವ ಮುನ್ಸೂಚನೆಯನ್ನು ಕೋಡಿ ಶ್ರೀಗಳು ನೀಡಿದ್ದು, ಈ ಸ್ಫೋಟಕ ಭವಿಷ್ಯವು ಈಗ ಎಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಭಾರತದಲ್ಲೂ ನೇಪಾಳದಂತಹ ಪ್ರಳಯ, ಕೋಡಿ ಶ್ರೀ ಸ್ಪೋಟಕ ಭವಿಷ್ಯ!
WhatsApp Group
Join Now