ರೈತರ ಸಾಲದ ಮೇಲಿನ ಬಡ್ಡಿ ಮನ್ನಾ.! ಯಾರೆಲ್ಲಾ ಅರ್ಹರು.? ಬೇಕಾಗುವ ದಾಖಲೆಗಳೇನು.? ಹೇಗೆ ಅರ್ಜಿ ಸಲ್ಲಿಸುವುದು.?

ರಾಜ್ಯದ ರೈತರು ಬ್ಯಾಂಕುಗಳಲ್ಲಿ ಪಡೆದಿರುವಂತಹ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರವು ರೈತರಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯದ ಪಶುಪಾಲನಾ ಇಲಾಖೆಯಿಂದ ರೈತರು ಹೈನುಗಾರಿಕೆ ಮಾಡಲು ಬ್ಯಾಂಕುಗಳಲ್ಲಿ ಪಡೆದಿರುವಂತಹ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡಲು ಅರ್ಹ ಫಲಾನುಭವಿ ರೈತ ಅಭ್ಯರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಇದನ್ನೂ ಕೂಡ ಓದಿ : Gold Rate Today : ದಿಢೀರ್ ಕುಸಿತ ಕಂಡಿತಾ ಚಿನ್ನ.! ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?

WhatsApp Group Join Now

ಪಶುಪಾಲನಾ ಇಲಾಖೆಯ ಈ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನ ಸಲ್ಲಿಸಬಹುದು.? ಹೇಗೆ ಅರ್ಜಿ ಸಲ್ಲಿಸಬೇಕು.? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು.?ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರಾಜ್ಯದ ಪಶುಪಾಲನಾ ಇಲಾಖೆಯು ರೈತರು ಹೈನುಗಾರಿಕೆ ಮಾಡಿ ಉತ್ತಮ ಆದಾಯ ಗಳಿಸಲಿ ಎನ್ನುವ ಉದ್ದೇಶದಿಂದಾಗಿ ಸಾಲದ ಸೌಲಭ್ಯವನ್ನು ನೀಡುತ್ತಿದ್ದು, ಅದರ ಜೊತೆಗೆ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಮನ್ನಾ ಮಾಡುವ ಅಥವಾ ಬಡ್ಡಿ ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ರೈತ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೈನುರಾಸುಗಳನ್ನು ಖರೀದಿಸಲು ತೆಗೆದುಕೊಂಡಿರುವಂತಹ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡುತ್ತಿದೆ.

WhatsApp Group Join Now

ಇದನ್ನೂ ಕೂಡ ಓದಿ : SBI Bank Recruitment : ಎಸ್ ಬಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ.! ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್

ಸಾಲದ ಮೇಲಿನ ಬಡ್ಡಿ ಎಷ್ಟು ಮನ್ನಾ ಆಗಲಿದೆ.?

ರೈತರು ಹೈನುಗಾರಿಕೆ ಮಾಡಲು ಖರೀದಿಸಿರುವಂತಹ ಹಸು ಹಾಗು ಎಮ್ಮೆಗಳ ಮೇಲೆ ಸಾಲವನ್ನು ಮಾಡಿ, ನಿಗದಿತ ಅವಧಿಯ ಒಳಗೆ ಮರುಪಾವತಿ ಮಾಡಿದ್ದರೆ ರಾಜ್ಯ ಸರ್ಕಾರದ ಪಶುಪಾಲನೆ ಇಲಾಖೆಯಿಂದ ಶೇ. 6% ರಷ್ಟು ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು.!

ಸಾಲದ ಮೇಲಿನ ಬಡ್ಡಿಮನ್ನಾಗೆ ಅರ್ಜಿ ಸಲ್ಲಿಸಲು ಹೈನುಗಾರಿಕೆ ಮಾಡುವ ಸಲುವಾಗಿ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಅರ್ಹ ರೈತ ಫಲಾನುಭವಿ ಮಹಿಳೆಯರು ಮಾಡಿರುವ ಸಾಲಕ್ಕೆ, ಬಡ್ಡಿಮನ್ನಾ ಮಾಡುವ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

WhatsApp Group Join Now

ಪ್ರಮುಖವಾಗಿ ನಿಗದಿತ ಅವಧಿಯ ಒಳಗಾಗಿ ಸಾಲ ಮರುಪಾವತಿ ಮಾಡಿರುವ ಅರ್ಹ ಫಲಾನುಭವಿ ರೈತ ಮಹಿಳೆಯರು ಮಾತ್ರ ಈ ಸಾಲದ ಮೇಲಿನ ಬಡ್ಡಿಮನ್ನಾಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಇದನ್ನೂ ಕೂಡ ಓದಿ : Gram Panchayat Jobs : ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗಾವಕಾಶ.! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳೇನು.?

ಬೇಕಾಗುವ ದಾಖಲೆಗಳೇನು.?

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ಪಾಸ್ ಬುಕ್
  • ಉತಾರ
  • ಭಾವಚಿತ್ರ

ಎಲ್ಲಿ ಅರ್ಜಿ ಸಲ್ಲಿಸುವುದು.?

ಸಾಲದ ಮೇಲಿನ ಬಡ್ಡಿಮನ್ನಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿ ಮಹಿಳಾ ರೈತರು ನಿಮ್ಮ ತಾಲೂಕಿನ ಪಶು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನ ಪಡೆದುಕೊಂಡು, ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply