RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ವಿಪಕ್ಷಕ್ಕೆ ಟಾಂಗ್ ನೀಡಿ ಪ್ರಿಯಾಂಕ್‌ ಖರ್ಗೆ ಪೋಸ್ಟ್

Spread the love

ಆರ್‌ಎಸ್‌ಎಸ್‌ ನೋಂದಣಿ ವಿಚಾರವಾಗಿ ಆರಂಭವಾದ ಗೊಂದಲ, ವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ. ಇದೀಗ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕಿ ವಿಪಕ್ಷ ಬಿಜೆಪಿಗೆ ಟಾಂಗ್ ನೀಡದ್ದಾರೆ. ಸರ್ಪಕ್ಕೆ ಹೋಲಿಕೆ ಮಾಡಿ ಹಾವಿನ ಬಾಲ ಎಳೆದರೆ ಬುಸುಗುಡುತ್ತದೆ ಎಂಬ ಹಾಗೆ, ಬಿಜೆಪಿಯ ಬಾಲ ಆರ್‌ಎಸ್‌ಎಸ್‌ ಕೈಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ.ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ. ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷ ಏಕೆ ಬೇಕಾಯಿತು ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ.
ಅವರು ನಿಜವಾಗಿ ಯಾರ ಸಂವಿಧಾನಕ್ಕೆ ನಿಷ್ಠೆ ತೋರುತ್ತಾರೆ – ಬಾಬಾಸಾಹೇಬರ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ.
ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು, ತೆರಿಗೆ ಪಾವತಿಸಲು ಏಕೆ ನಿರಾಕರಿಸುತ್ತಾರೆ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ.
RSS ಬೋಧಿಸುವುದನ್ನು RSSಗೇ ಪಾಲಿಸುವಂತೆ ಕೇಳಿಕೊಂಡರೆ – ಬಿಜೆಪಿ ಬುಸುಗುಡುತ್ತದೆ.
ಬಿಜೆಪಿ ಎಂದಿಗೂ ಕೇವಲ RSSನ ಜೊತೆಗಾರ ಅಲ್ಲ, ಬದಲಿಗೆ ಅದು ಸದಾ RSS ನ ಸಾಧನ ಆಗಿದೆ. ಬಿಜೆಪಿಯ ಪ್ರತಿ ಬುಸುಗುಡುವಿಕೆ, ಅದರ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ. ಎಂದು ಟೀಕಿಸಿದ್ದಾರೆ. (ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರ)

WhatsApp Group Join Now
https://x.com/PriyankKharge/status/2070053802506666481?ref_src=twsrc%5Etfw%7Ctwcamp%5Etweetembed%7Ctwterm%5E2070053802506666481%7Ctwgr%5E811f30fadf6141d056725c22c55b103622b1e2c1%7Ctwcon%5Es1_c10&ref_url=https%3A%2F%2Fapi-news.dailyhunt.in%2F


ದಲಿತರು ಆರ್‌ಎಸ್‌ಎಸ್‌ ನ ಪ್ರಶ್ನೆ ಮಾಡ್ಬಾರ್ದಾ ಎಂದಿದ್ದ ಪ್ರಿಯಾಂಕ್ ಖರ್ಗೆ

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಈ ವಿವಾದಕ್ಕೆ ಸಂಬಂಧಿಸಿ ಏಕವಚನದಲ್ಲಿಯೇ ಕಿಡಿಕಾರಿದ್ದ ಅವರು, ದಲಿತನಿಗೆ ಆರ್‌ಎಸ್‌ಎಸ್ ವಿಷಯವೇಕೆ? ಆರ್‌ಎಸ್‌ಎಸ್ ತಂಟೆಗೆ ಬಂದವರು ಇದುವರೆಗೆ ಯಾರೂ ಉಳಿದಿಲ್ಲ ಎಂದು ಹೇಳಿದ್ದರು. ಅಲ್ಲದೆ ಅಪ್ಪನ ಹೆಸರಿನ ಮೇಲೆ ರಾಜ್ಯದ ಗೃಹ ಸಚಿವರಾಗಿದ್ದು, ಆ ಕೆಲಸ ಮಾಡಲಿ ಎಂದಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಪ್ರಿಯಾಂಕ್ ಖರ್ಗೆ ದಲಿತರು ಆರ್‌ಎಸ್‌ಎಸ್‌ನ ಪ್ರಶ್ನೆ ಮಾಡಬಾರದಾ ಎಂದ ತಿರುಗೇಟು ಕೊಟ್ಟಿದ್ದರು.

ಇನ್ನು ಆರ್‌ಎಸ್‌ಎಸ್‌ನ ವಿಷಸರ್ಪಕ್ಕೆ ಹೋಲಿಕೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಕೂಡಾ ವಿವಾದಕ್ಕೆ ಎಡೆಯಾಗಿತ್ತು. ಆಗ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್‌ ದೂರು ದಾಖಲಿಸಲಿ ಬಿಡಿ, ಅವರ ಸಂಘ ನೋಂದಣಿಯಾಗಿದ್ದರೆ ಅವರ ಲೆಟರ್‌ಹೆಡ್‌ನಲ್ಲಿ ದೂರು ಕೊಡಲಿ ಎಂದು ಸವಾಲು ಹಾಕಿದ್ದರು.


Spread the love

Leave a Reply