ಪತ್ನಿ ಬಾಯಿಗೆ ಫೆವಿಕ್ವಿಕ್ ಹಾಕಿ ಕೊಲೆಗೆ ಪತಿ ಯತ್ನ – ಅನೈತಿಕ ಸಂಬಂಧದ ಶಂಕೆ.! ರಾಜ್ಯದಲ್ಲೊಂದು ಅಮಾನುಷ ಕೃತ್ಯ

Spread the love

ಕನ್ನಡ ನ್ಯೂಸ್ ಟೈಮ್ : ರಾಜ್ಯದಲ್ಲೇ ಅಮಾನುಷ ಕೃತ್ಯ ಎನ್ನುವಂತೆ ಪತ್ನಿಯ ಬಾಯಿಗೆ ಫೆವಿಕ್ವಿಕ್ ಹಾಕಿದಂತ ಪತಿರಾಯನೊಬ್ಬ, ಆಕೆಯನ್ನು ಕೊಲೆಗೆ ಯತ್ನಿಸಿದಂತ ಘಟನೆ ನೆಲಮಂಗಲದ ಹಾರೋಕ್ಯಾತನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ಉತ್ತರದ ನೆಲಮಂಗಲದ ಬಳಿಯ ಹಾರೋಕ್ಯಾತನಹಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ.

Subsidy Scheme : ಕೇಂದ್ರ ಸರ್ಕಾರದ ಈ ಯೋಜನೆಗಳಡಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗಲಿವೆ ಸಾಲ ಸೌಲಭ್ಯಗಳು.!

ಪತ್ನಿ ಮಂಜುಳಾ ಎಂಬುರ ಮೇಲೆ ಅನೈತಿಕ ಸಂಬಂಧದ ಶಂಕೆಯನ್ನು ಮಾಡಿದಂತ ಪತಿ ಸಿದ್ದಲಿಂಗಸ್ವಾಮಿ ಎಂಬುವರು ಬಾಯಿಗೆ ಫೆವಿಕ್ವಿಕ್ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಕಿರುಚಿಕೊಳ್ಳಬಾರದು ಅಂತ ಪತ್ನಿಯ ಬಾಯಿಗೆ ಫೆವಿಕ್ವಿಕ್ ಹಾಕಿ, ಕುತ್ತಿಗೆ ಹಿಚುಕಿ ಕೊಲೆಗೆ ಯತ್ನಿಸಿದ್ದಾರೆ. ಮನೆಯ ಅಕ್ಕಪಕ್ಕದವರು ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪತಿ ಸಿದ್ದಲಿಂಗಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದೀಗ ಅರೆ ಪ್ರಜ್ಞಾನಾವಸ್ಥೆಯಲ್ಲಿದ್ದಂತ ಮಂಜುಳಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಟವರ್ ಲೊಕೇಶನ್ ಮೂಲಕ ಬಂಧಿಸಿರುವುದಾಗಿ ತಿಳಿದು ಬಂದಿದೆ.

WhatsApp Group Join Now

Spread the love

Leave a Reply