ಹಾಸನ: ಹೆಂಡತಿಯ ಶೀಲ ಶಂಕಿಸಿ, ಆಕೆಯ ಮೇಲೆ ಸದಾ ಕ್ರೌ*ರ್ಯ ಮೆರೆಯುತ್ತಿದ್ದ ಪತಿಯೊಬ್ಬ ಕೊನೆಗೂ ಆಕೆಯನ್ನು ಬರ್ಬರವಾಗಿ ಕೊ* ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಲ್ಲೇನಹಳ್ಳಿ ಗ್ರಾಮದ ಯಶೋಧ (23) ಕೊ*ಯಾದ ದುರ್ದೈ*ವಿ. ಪತ್ನಿಯನ್ನೇ ಕಟುಕನಂತೆ ಕೊ*ದ ಪಾಪಿ ಪತಿ ಪುನೀತ್ (28) ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಓದುತ್ತಿರುವಾಗಲೇ ಅರಳಿದ್ದ ಪ್ರೇಮ; ದುರ*ತ ಅಂತ್ಯ
ಕಳೆದ ಏಳು ವರ್ಷಗಳ ಹಿಂದೆ ಯಶೋಧ ಅವರು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಗ, ಪುನೀತ್‌ನೊಂದಿಗೆ ಪರಿಚಯವಾಗಿ ಅದು ಪ್ರೀತಿಯಾಗಿ ಬದಲಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮತಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ನಂತರದ ದಿನಗಳಲ್ಲಿ ಬಿರುಗಾಳಿ ಎದ್ದಿದೆ.
ಅನುಮಾನದ ಪಿಶಾಚಿಗೆ ಬ*ಯಾದ ಹೆಣ್ಣು ಜೀವ
ಮದುವೆಯಾದ ಕೆಲವೇ ವರ್ಷಗಳಲ್ಲಿ ಪುನೀತ್ ಪತ್ನಿಯ ಶೀಲದ ಮೇಲೆ ಸಂಶಯ ಪಡಲು ಆರಂಭಿಸಿದ್ದ. ಇದೇ ವಿಚಾರವಾಗಿ ಯಶೋಧ ಅವರ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಕಿರುಕು*ಳ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಈ ಕ್ರೌ*ರ್ಯ ಮತ್ತು ತನಗಾಗುತ್ತಿದ್ದ ನೋವನ್ನು ಯಶೋಧ ಅವರು ತಮ್ಮ ತಾಯಿ ಮತ್ತು ಸಹೋದರಿಯರ ಬಳಿ ಹಲವು ಬಾರಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.
ಘಟನೆಯ ಹಿನ್ನೆಲೆ:
ನಿನ್ನೆಯೂ ಸಹ ಇದೇ ಶೀಲ ಶಂಕಿಸುವ ವಿಷಯವಾಗಿ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಪುನೀತ್, ಯಶೋಧ ಅವರ ಮೇಲೆ ಮನಬಂದಂತೆ ಹ* ನಡೆಸಿ, ಕ್ರೂ*ವಾಗಿ ಹ* ಮಾಡಿದ್ದಾನೆ.
ಪೊಲೀಸ್ ತನಿಖೆ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿಯಿಂದ ಕೈಹಿಡಿದ ಪತಿಯೇ ಸಂಶಯದ ಬೆನ್ನೇರಿ ಹೆಂಡತಿಯನ್ನು ಕೊ*ದಿರುವ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪತಿ ; ಶೀಲ ಶಂಕೆಯೇ ಯುವತಿಯ ಜೀವ ಬಲಿ!
WhatsApp Group
Join Now