HSRP Number Plate : ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ನ. 30 ರವರೆಗೆ ಗಡುವು ವಿಸ್ತರಣೆ ಮಾಡಿತಾ ಸಾರಿಗೆ ಇಲಾಖೆ.!

HSRP Number Plate : ನಮಸ್ಕಾರ ಸ್ನೇಹಿತರೇ, ಹಳೆ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ ಹೆಚ್‌ಎಸ್‌ಆರ್ಪಿಗಳ ಅಳವಡಿಕೆ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಮಾಡಲಾಗಿದೆ.

ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.

ಹೆಚ್‌ಎಸ್‌ಆರ್ಪಿ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು, ಅದರಂತೆ ರಾಜ್ಯದಲ್ಲಿ 2 ಕೋಟಿ ವಾಹನಗಳು ಹೆಚ್‌ಎಸ್‌ಆರ್ಪಿ ಅಳವಡಿಸಿಕೊಳ್ಳಬೇಕಿದೆ. ಇದುವರೆಗೆ 50 ಲಕ್ಷಕ್ಕೂ ಅಧಿಕ ವಾಹನಗಳು ಮಾತ್ರ ಹೆಚ್‌ಎಸ್‌ಆರ್ಪಿ ಅಳವಡಿಸಿಕೊಂಡಿದ್ದು, 1.50 ಕೋಟಿ ವಾಹನಗಳು ಹೆಚ್‌ಎಸ್‌ಆರ್ಪಿ ಅಳವಡಿಸಿಕೊಳ್ಳಬೇಕಿದೆ.

ಈಗಾಗಲೇ 4 ಬಾರಿ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದ್ದು, ಮತ್ತೊಮ್ಮೆ ನವೆಂಬರ್ 30ರವರೆಗೆ ಹೊಸ ಗಡುವು ನಿಗದಿ ಮಾಡಲಾಗಿದೆ. ನಂತರ ದಂಡ ಪ್ರಯೋಗಿಸಲಾಗುವುದು ಎನ್ನಲಾಗಿದೆ.

WhatsApp Group Join Now

Leave a Reply