ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ತಿಂಗಳಿಗೆ 2,000 ರೂಪಾಯಿಯನ್ನು ಹಾಕಲಾಗುತ್ತಿದೆ. ಆದರೆ ಇದೀಗ ಹೊಸ ನಿಯಮವೊಂದನ್ನು ಜಾರಿ ಮಾಡಲಾಗಿದೆ.
ಇದನ್ನ ಪಾಲಿಸದಿದ್ದರೆ ಅಂತಹವರಿಗೆ ಇನ್ಮುಂದೆ ಹಣ ಜಮೆ ಆಗುವುದಿಲ್ಲ. ಹಾಗಾದ್ರೆ ಆ ನಿಯಮ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂಪಾಯಿ ಹಣವನ್ನು ಪಡೆಯಲು ಫಲಾನುಭವಿ ಮಹಿಳೆಯರು ಬಯೋಮೆಟ್ರಿಕ್ ಮಾಡಿಸುವುದು ಕಡ್ಡಾಯ ಆಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಅಂತವರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ ಅಂತಾ ತಿಳಿದುಬಂದಿದೆ.
ಗೃಹಲಕ್ಷ್ಮಿ ದುರುಪಯೋಗ ತಡೆಗೆ ಕ್ರಮ
ಯೋಜನೆ ಆರಂಭವಾಗಿ ಯಶಸ್ವಿಯಾಗಿ ಮುಂದುವರೆಸಿದೆ. ಆದರೆ ಇದೀಗ ಕಡ್ಡಾಯ ಬಯೋಮೆಟ್ರಿಕ್ ನಿಯಮ ತರಲು ಸರ್ಕಾರಕ್ಕೆ ಕೆಲವು ಮುಖ್ಯ ಕಾರಣಗಳಿವೆ. ಯೋಜನೆಯಲ್ಲಿ ಅಕ್ರಮ ಅಥವಾ ಅರ್ಹರಲ್ಲದವರು ಹಣ ಪಡೆಯುತ್ತಿರುವುದನ್ನು (ಗೃಹಲಕ್ಷ್ಮಿ ದುರುಪಯೋಗ ತಡೆಗೆ) ಬಯೋಮೆಟ್ರಿಕ್ ಕ್ರಮ ಕೈಗೊಳ್ಳಲಾಗಿದೆ.
ಯೋಜನೆಗೆ ನೋಂದಣಿಯಾದ ನಂತರ ಕೆಲವು ಫಲಾನುಭವಿಗಳು ಮರಣ ಹೊಂದಿದ್ದರೂ, ಅವರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಕೇವಲ ಜೀವಂತ ಇರುವ ಮತ್ತು ಅರ್ಹರಾಗಿರುವ ಮಹಿಳೆಯರಿಗೆ ಮಾತ್ರ ತಲುಪಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಂದಿನ ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ
ಫಲಾನುಭವಿಗಳ ಬ್ಯಾಂಕ್ ಖಾತೆಗಳು ಸಕ್ರಿಯವಾಗಿವೆಯೇ ಮತ್ತು ಆಧಾರ್ ಲಿಂಕ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಇ-ಕೆವೈಸಿ (e-KYC) ಪ್ರಕ್ರಿಯೆ ನೆರವಾಗಲಿದೆ. ಫಲಾನುಭವಿಗಳು ತಮ್ಮ ಹತ್ತಿರದ ಯಾವುದಾದರೂ ಒಂದು ಸರ್ಕಾರಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಈ ಬಯೋಮೆಟ್ರಿಕ್‌ಗೆ 5 ರೂಪಾಯಿ ಶುಲ್ಕವನ್ನ ನಿಗದಿ ಮಾಡಲಾಗಿದ್ದು, ಇದು ಮುಂದಿನ ತಿಂಗಳಿನಿಂದ ಜಾರಿ ಆಗಲಿದೆ ಎಂದು ತಿಳಿದುಬಂದಿದೆ.
ಬಯೋಮೆಟ್ರಿಕ್ ಎಲ್ಲೆಲ್ಲಿ ಮಾಡಿಸಬಹುದು?
• ಕರ್ನಾಟಕ ಒನ್
• ಬೆಂಗಳೂರು ಒನ್
• ಗ್ರಾಮ ಒನ್
• ಸೇವಾಸಿಂಧು ಕೇಂದ್ರ
ಬಯೋಮೆಟ್ರಿಕ್ ಅಪ್ಡೇಟ್‌ಗೆ ಬೇಕಾಗುವ ದಾಖಲೆಗಳು
• ಫಲಾನುಭವಿಗಳ ಆಧಾರ್ ಕಾರ್ಡ್
• ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಡ್ಡಾಯ.
ಯಾರಿಗೆ ಈ ನಿಯಮ ಅನ್ವಯ?
ಸೇವಾ ಕೇಂದ್ರದಲ್ಲಿ ನಿಮ್ಮ ಬೆರಳಚ್ಚು ಅಥವಾ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡುವ ಮೂಲಕ ಬಯೋಮೆಟ್ರಿಕ್ ದೃಢೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುತ್ತಿರುವ ಎಲ್ಲಾ ಮಹಿಳೆಯರಿಗೂ ಈ ಇ-ಕೆವೈಸಿ ನಿಯಮ ಅನ್ವಯಿಸಲಿದೆ. ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಿಂದ ತಾಂತ್ರಿಕ ಕಾರಣಗಳಿಂದ ಹಣ ಬಾರದೆ ಬಾಕಿ ಇರುವವರು ತಕ್ಷಣವೇ ಈ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕು. ಇದರಿಂದ ಬಾಕಿ ಇರುವ ಹಣ ಬಿಡುಗಡೆಯಾಗಲು ಸುಲಭವಾಗುತ್ತದೆ.
ಸರ್ಕಾರವು ಈ ಪ್ರಕ್ರಿಯೆಗೆ ನಿಗದಿತ ಗಡುವನ್ನು ನೀಡಿದೆ. ಮಹಿಳೆಯರು ಕೊನೆಯ ದಿನದ ದಟ್ಟಣೆ ತಪ್ಪಿಸಲು ಆದಷ್ಟು ಬೇಗ ತಮ್ಮ ಹತ್ತಿರದ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಲು ಮನವಿ ಮಾಡಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಹಣ ಕೈತಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Gruhalakshmi Scheme: ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಬಿಗ್ ಅಲರ್ಟ್, ಮುಂದಿನ ತಿಂಗಳೊಳಗೆ ಈ ಕೆಲ್ಸ ಮಾಡಿಸದಿದ್ರೆ ಹಣ ಕಟ್
WhatsApp Group
Join Now