Govt House Scheme : ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರದ ಸರ್ವರಿಗೂ ಸೂರು ಯೋಜನೆ ಅಡಿ ಬಡವರಿಗೆ ಬಂಪರ್ ಗಿಫ್ಟ್ ನೀಡಿದೆ. ಸರಿಸುಮಾರು 1.30 ಲಕ್ಷ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಒಟ್ಟು 5 ಲಕ್ಷ ರೂ. ಭರಿಸಲು ತೀರ್ಮಾನಿಸಿದೆ. ಅಂದರೆ 2 ಲಕ್ಷ ರೂಪಾಯಿ ಸಬ್ಸಿಡಿ ಜತೆಗೆ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ಭರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡ ಕುಟುಂಬಗಳಿಗಾಗಿ ನೀಡಲಾಗುತ್ತಿರುವ ಒಟ್ಟಾರೆ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆಯನ್ನು ಸರ್ಕಾರ ಭರಿಸಲು ತೀರ್ಮಾನಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಕ್ತಿ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಕೂಡ ಓದಿ : Kisan Credit Card Scheme : ಇನ್ನು ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸುವುದು ಹೇಗೆ.?
ಈ ಯೋಜನೆ ಅಡಿ ಪ್ರಸ್ತುತ ಪ್ರತಿ ಮನೆ ನಿರ್ಮಾಣಕ್ಕೆ ಒಟ್ಟು 7.5 ಲಕ್ಷ ರೂ. ಖರ್ಚಾಗುತ್ತದೆ. ಇದರಲ್ಲಿ ಕೇಂದ್ರದಿಂದ 1.5 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಸಬ್ಸಿಡಿ ಸಿಗುತ್ತದೆ. ಉಳಿದ ಹಣವನ್ನು ಫಲಾನುಭವಿಯೇ ಕಟ್ಟಬೇಕಿತ್ತು. ಆದರೆ ಈಗ ಅದರಲ್ಲಿ ಫಲಾನುಭವಿಗಳು 1 ಲಕ್ಷ ರೂ. ಪಾವತಿಸಿದರೆ ಸಾಕು, ಉಳಿದ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಈ ಮೂಲಕ ಸರ್ಕಾರ ಒಟ್ಟು 5 ಲಕ್ಷ ರೂ. ಅರ್ಹ ಫಲಾನುಭವಿಗಳಿಗೆ ನೀಡಿದಂತಾಗುತ್ತದೆ.
ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ನಿರ್ಮಿಸಲಾಗುವ ಮನೆಗಳ ನಿರ್ಮಾಣದ ಹಣವನ್ನು ಸರ್ಕಾರವೇ ಭರಿಸಲು ಒಪ್ಪಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ, ನಿರ್ಮಾಣದ ವಿವಿಧ ಹಂತದಲ್ಲಿರುವ 1.29 ಲಕ್ಷ ಮನೆಗಳಿಗೆ ಎಷ್ಟು ವೆಚ್ಚ ಆಗುತ್ತದೆ. ಈ ವರ್ಷ ಗರಿಷ್ಠ ಎಷ್ಟು ಹಣ ಕೊಡಬಹುದು? ಮುಂದಿನ ವರ್ಷ ಎಷ್ಟು ಹಣ ಕೊಡಬಹುದು? ಎಂಬುದರ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದರು.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಕೊಳೆಗೇರಿಗಳ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39,966 ಮನೆ ಹಂಚಿಕೆ ಮಾಡಲು ಸಿದ್ಧವಿದ್ದು, 862 ಕೋಟಿ ರೂ. ಹಣ ಅಗತ್ಯವಿದೆ. ಅದೇ ರೀತಿ, ರಾಜೀವ್‌ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆಗಳು ಸಿದ್ಧವಿದ್ದು, 529 ಕೋಟಿ ರೂ. ಅವಶ್ಯಕತೆ ಇದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಈ ಮೊದಲು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಯೋಜನೆಗೆ ಅನುಮತಿ ದೊರೆತಿತ್ತು. ಬುಧವಾರದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಸಹ ಅನ್ವಯ ಮಾಡಲು ತಾತ್ವಿಕ ಒಪ್ಪಿಗೆ ದೊರೆಯಿತು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
- Horoscope Today : 18 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳಿಸಿ : ಸಿಎಂ ಸಿದ್ದರಾಮಯ್ಯ ಸೂಚನೆ
- ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ
- ಮೂತ್ರ ಮಾಡುವ ಸಂದರ್ಭದಲ್ಲಿ ಉರಿ ಹಾಗೂ ದುರ್ವಾಸನೆ ಬರಲು ಕಾರಣ ಹಾಗೂ ಆಯುರ್ವೇದ ಪರಿಹಾರಗಳು
- ನಿಮ್ಮ ಮನೆಯ ವಿದ್ಯುತ್ ‘ಮೀಟರ್ ಬೋರ್ಡ್ ‘ನಲ್ಲಿ ‘ಕೆಂಪು ಲೈಟ್’ ಉರಿಯೋದು ಯಾಕೆ..? ಕಾರಣ ತಿಳಿಯಿರಿ
- ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆಯಂಬುಲೆನ್ಸ್ನಲ್ಲಿ ಕಳಿಸಿದ ಮಗಳು
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?
- ‘SBI’ ಗ್ರಾಹಕರಿಗೆ ಬಿಗ್ ಶಾಕ್ : ATM ವಿತ್ ಡ್ರಾ ಮತ್ತು ‘ಬ್ಯಾಲೆನ್ಸ್ ಚೆಕ್’ ಶುಲ್ಕ ಹೆಚ್ಚಳ.!
- Arecanut Price : ಇಂದಿನ ಅಡಿಕೆ ಧಾರಣೆ – 17 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ನಿಮ್ಮ ಖಾಸಗಿ ಫೋಟೋ-ವಿಡಿಯೋ ವೈರಲ್ ಆದ್ರೆ ಭಯ ಪಡಬೇಡಿ, ತಕ್ಷಣ ಇದೊಂದು ಕೆಲಸ ಮಾಡಿ
- ಹಲ್ಲು ಹುಳುಕು ನಿವಾರಣೆಗೆ ಇಲ್ಲಿವೆ ಸರಳ ಮನೆ ಮದ್ದುಗಳು
- ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ : ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ
- Horoscope Today : 17 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನೇ ಸಜೀವ ದಹನ ಮಾಡಲು ಮುಂದಾದ ತಾಯಿ ; ತಾನೂ ಬೆಂಕಿ ಹಚ್ಚಿಕೊಂಡು ಸಾವು!
- ಪುರುಷರಲ್ಲಿ ಪದೇ ಪದೇ ಮೂತ್ರ ವಿಸರ್ಜನೆ.. ಪ್ರಾಸ್ಟೇಟ್ ಕ್ಯಾನ್ಸರ್ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳಿವು
- ಒಂದೇ ಸ್ಥಳದಲ್ಲಿ ಕೂತ್ರೆ ದೇಹಕ್ಕೆ ಒಕ್ಕರಿಸುತ್ತೆ ಈ ಮಾರಕ ಕಾಯಿಲೆ.! ಕೂತರೂ ಕೂಡ ಪ್ರಾಣಕ್ಕೆ ಕಂಟಕ..!
- ಪತಿ ಮಾರಾಟ ಮಾಡಿದ ಆಸ್ತಿಯಿಂದ ಪತ್ನಿಗೆ ‘ಜೀವನಾಂಶ’ ಪಡೆಯುವ ಹಕ್ಕಿದೆ : ಹೈಕೋರ್ಟ್ ಮಹತ್ವದ ತೀರ್ಪು
- ಹಾಲಾಯ್ತು ಹಾಲಾಹಾಲ – ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ ಮಾಡ್ತಿದ್ದ ಖದೀಮರು ಅರೆಸ್ಟ್!



















