ಸಣ್ಣ ರೈತರಿಗೆ ಸರ್ಕಾರದ ಬಂಪರ್ ಕೊಡುಗೆ: ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಘೋಷಣೆ

Spread the love

ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (farmers) ಕೃಷಿ ಚಟುವಟಿಕೆಗಳಲ್ಲಿ ನೆರವಾಗಲು ಸರ್ಕಾರ ‘ಮುಖ್ಯಮಂತ್ರಿ ನೇಗಿಲ ಯೋಗಿ’ (Mukhyamantri Negila Yogi scheme) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಡಿಸಿಎಂ ಪರಮೇಶ್ವರ್ ಅವರು ಈ ಯೋಜನೆಯ ಮಹತ್ವದ ವಿವರಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.

ಉಚಿತವಾಗಿ ಹೊಲ ಉಳುಮೆ!

WhatsApp Group Join Now

ಸಾಮಾನ್ಯವಾಗಿ ಟ್ರ್ಯಾಕ್ಟರ್ ಹೊಂದಿರುವ ಕೆಲವೇ ರೈತರು ತಮ್ಮ ಜಮೀನನ್ನು ಮಾತ್ರ ಉಳುಮೆ ಮಾಡಿಕೊಂಡು, ನಂತರ ಆ ಯಂತ್ರಗಳನ್ನು ಸುಮ್ಮನೆ ನಿಲ್ಲಿಸಿಟ್ಟಿರುತ್ತಾರೆ. ಆದರೆ, ಬಡ ಹಾಗೂ ಸಣ್ಣ ರೈತರಿಗೆ ಉಳುಮೆ ವೆಚ್ಚವೇ ದೊಡ್ಡ ಹೊರೆಯಾಗಿರುತ್ತದೆ. ಇದನ್ನು ಮನಗಂಡು ಸರ್ಕಾರವೇ ಉಚಿತವಾಗಿ ರೈತರ ಜಮೀನನ್ನು ಉಳುಮೆ (ಹೊಲ ಹೊಡೆದು) ಮಾಡಿಕೊಡಲು ನಿರ್ಧರಿಸಿದೆ.

ಯೋಜನೆಯ ಪ್ರಮುಖ ಮುಖ್ಯಾಂಶಗಳು:

ಸಣ್ಣ ರೈತರಿಗೆ ಆದ್ಯತೆ: ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಸಂಪೂರ್ಣ ಲಾಭ ಸಿಗಲಿದೆ.

ಟ್ರ್ಯಾಕ್ಟರ್‌ಗಳಿಗೆ ಸರ್ಕಾರದಿಂದಲೇ ಬಾಡಿಗೆ: ರೈತರ ಜಮೀನು ಉಳುಮೆ ಮಾಡಲು ಬಳಸುವ ಟ್ರ್ಯಾಕ್ಟರ್‌ಗಳಿಗೆ ಸರ್ಕಾರವೇ ನೇರವಾಗಿ ಬಾಡಿಗೆ ಹಣವನ್ನು ಪಾವತಿಸಲಿದೆ.

ಯಂತ್ರೋಪಕರಣಗಳ ಪೂರೈಕೆ: ಸ್ಥಳೀಯವಾಗಿ ಟ್ರ್ಯಾಕ್ಟರ್‌ಗಳ ಕೊರತೆ ಇದ್ದಲ್ಲಿ, ಸರ್ಕಾರವೇ ಪರ್ಯಾಯವಾಗಿ (ಸಪ್ಲಿಮೆಂಟ್) ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರಗಳನ್ನು ಒದಗಿಸಲಿದೆ.

31 ತಾಲೂಕುಗಳಲ್ಲಿ ಪೈಲಟ್ ಪ್ರಾಜೆಕ್ಟ್: ಯೋಜನೆಯ ಮೊದಲ ಹಂತವಾಗಿ ರಾಜ್ಯದ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ (ಪೈಲಟ್ ಪ್ರಾಜೆಕ್ಟ್) ಇದನ್ನು ಜಾರಿಗೆ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಯೋಜನೆಯಿದೆ.

ರೈತರ ಕೃಷಿ ವೆಚ್ಚವನ್ನು ತಗ್ಗಿಸಿ, ಸಮಯಕ್ಕೆ ಸರಿಯಾಗಿ ಉಳುಮೆ ಕಾರ್ಯ ಮುಗಿಸಲು ಈ ‘ನೇಗಿಲ ಯೋಗಿ’ ಯೋಜನೆ ಸಹಕಾರಿಯಾಗಲಿದೆ.


Spread the love

Leave a Reply