ಇನ್ಮುಂದೆ ಅಪಘಾತವಾದ್ರೆ ಪೊಲೀಸ್ ಠಾಣೆಗೆ ಹೋಗೋ ಅವಶ್ಯಕತೆ ಇಲ್ಲ, ಜಸ್ಟ್ ಹೀಗೆ ಮಾಡಿ

Spread the love

ಬೆಂಗಳೂರು ನಗರದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ (Tech Tips) ರಸ್ತೆ ಅಪಘಾತಗಳ (Accident) ಪ್ರಮಾಣವೂ ಏರಿಕೆಯಾಗಿದ್ದು, ಸಣ್ಣಪುಟ್ಟ ಗುದ್ದಾಟಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗೆ (Police Station) ಹೋಗಿ ಅಪಘಾತ ದಾಖಲಿಸುವುದು ಜನರಿಗೆ ಸಮಯ ಖರ್ಚು ಮತ್ತು ತೊಂದರೆ.

ಈ ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಇಲಾಖೆ ಹೊಸ ಸುಲಭ ವಿಧಾನವನ್ನು ಪರಿಚಯಿಸಿದೆ.

ಇದೀಗ, ಇ-ಆಕ್ಸಿಡೆಂಟ್ ರಿಪೋರ್ಟ್ ಮೂಲಕ ಸಣ್ಣ ಅಪಘಾತಗಳನ್ನು ನೀವು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಯಾವಾಗ, ಎಲ್ಲಲ್ಲಿ ಅಪಘಾತವಾಗಿದೆ ಎಂಬ ಮಾಹಿತಿ ಹಾಗೂ ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ ಸಾಕು ಥಾಣೆಗೆ ಹೋಗಬೇಕಾಗಿಲ್ಲ.

ಸಣ್ಣಪುಟ್ಟ ಅಪಘಾತಗಳು ನಡೆದಾಗಲೂ ಪೊಲೀಸ್ ಠಾಣೆಗೆ ತೆರಳಿ ಆ ಬಗ್ಗೆ ದೂರು ನೀಡುವುದು ಬಹಳ ತ್ರಾಸದಾಯಕ ಮತ್ತು ಸಮಯ ವ್ಯರ್ಥಕ್ಕೆ ಕಾರಣವಾಗಲಿದೆ. ಹೀಗಾಗಿ BTP ASTraM ಆಯಪ್ನಲ್ಲಿ ಇ-ಆಯಕ್ಸಿಡೆಂಟ್ ರಿಪೋರ್ಟ್ ಎಂಬ ಆಯ್ಕೆಯನ್ನು ಪೊಲೀಸ್ ಇಲಾಖೆ ಹೊಸದಾಗಿ ಪರಿಚಯಿಸಿದೆ.

ಈ ಮೂಲಕ, ಅಪಘಾತ ಸಂಭವಿಸಿದ ಸ್ಥಳದಲ್ಲೇ ನೀವು ತಕ್ಷಣ ದೂರು ದಾಖಲಿಸಬಹುದು. ಜೊತೆಗೆ, ನಿಮ್ಮ ಕಂಪ್ಲೇಂಟ್ ಸ್ವೀಕರಿಸಲಾಗಿದೆ ಎಂಬ ದೃಢೀಕರಣವೂ ಕೂಡಲೇ ಲಭ್ಯವಾಗುತ್ತದೆ.

ಇ-ಆಕ್ಸಿಡೆಂಟ್ ರಿಪೋರ್ಟ್ ದಾಖಲಿಸುವ ವಿಧಾನ ಸರಳ:

ಮೊದಲು BTP ASTraM ಆಪ್‌ನ್ನು ನಿಮ್ಮ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿ.
ಆಪ್ ತೆರೆಯುತ್ತಿದ್ದಂತೇ ಕಾಣುವ E-Accident Report ಆಯ್ಕೆಯನ್ನು ಟ್ಯಾಪ್ ಮಾಡಿ.
ಅಪಘಾತದ ಸ್ಥಳದ ಫೋಟೋ ಜೊತೆಗೆ ಬೇಕಾದ ಮೂಲಭೂತ ಮಾಹಿತಿಗಳನ್ನು ತುಂಬಿ ಸಲ್ಲಿಸಿ.
ದೂರು ಸಲ್ಲಿಸಿದ ಕೂಡಲೇ, ಅದು ಸ್ವೀಕರಿಸಲಾಗಿದೆ ಎಂಬ ದೃಢೀಕರಣ ನಿಮ್ಮ ಫೋನ್‌ಗೇ ಬರುತ್ತದೆ.
ನಿಮ್ಮ ವಾಹನಗಳು ಅಪಘಾತವಾದಾಗ ಮಾತ್ರವಲ್ಲದೆ ಇತರ ಅಪಘಾತಗಳಿಗೆ ನಾವು ಸಾಕ್ಷಿಯಾದಾಗಲೂ ಆ ಬಗ್ಗೆ ದೂರು ದಾಖಲಿಸಬಹುದಾಗಿದೆ. Report My Accident ಮತ್ತು Report Accident I Witnesses ಎಂಬ ಎರಡು ಆಯ್ಕೆಯನ್ನು ಇಲ್ಲಿ ನೀಡಲಾಗಿದೆ. ದೂರು ದಾಖಲಿಸುವವರು ಅಪಘಾತವಾದ ವಾಹನಗಳ ರಿಜಿಸ್ಟ್ರೇಶನ್ ನಂಬರ್ ಜೊತೆಗೆ ಅಪಘಾತದ ಸ್ಥಳವನ್ನ ಆಯ್ಕೆ ಮಾಡಬೇಕಾಗುತ್ತದೆ.

ಅಪಘಾತದ ದಿನಾಂಕ, ಘಟನೆ ಹೇಗೆ ಆಯಿತು ಎಂಬ ವಿವರಣೆ ಒಳಗೊಂಡ ಅಪಘಾತವಾದ ವಾಹನಗಳ ಫೋಟೋ ಅಪ್ಲೋಡ್ ಮಾಡಬೇಕು. ಹೆಸರು, ದೂರವಾಣಿ ಸಂಪರ್ಕ ಸಂಖ್ಯೆಯನ್ನು ದಾಖಲಿಸಿ ರಿಪೋರ್ಟ್ ಸಬ್ಮಿಟ್ ಮಾಡಿದರೆ ನಿಮ್ಮ ದೂರು ದಾಖಲಾಗಲಿದೆ.

WhatsApp Group Join Now

Spread the love

Leave a Reply