ಮಕ್ಕಳ ಮೇಲೆ ಮನೆಯ ಗೇಟ್ ಬಿದ್ದು ಐದು ವರ್ಷದ ಮಗು ಸಾವು, ಮತ್ತೊಂದು ಮಗು ಗಂಭೀರ ಗಾಯ

Spread the love

ಬೆಂಗಳೂರು ಉತ್ತರ ತಾಲೂಕಿನ ದ್ವಾರಕಾ ನಗರದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆಯ ಗೇಟ್ ಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಐದು ವರ್ಷದ ಗೌಸಿಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ವರ್ಷದ ಸುಮಯ್ಯಾ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಮೃತ ಗೌಸಿಯಾ ಇಮಾಮ್ ಮತ್ತು ರಮೀಜಾ ದಂಪತಿಗಳ ಮಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಸುಮಯ್ಯಾ ಇಮಾಮ್ ಅವರ ತಂಗಿ ಶಕೀಲಾ ಅವರ ಮಗಳು ಆಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅವಘಡ ಮನೆ ಮಾಲೀಕ ರವಿಶಂಕರ್ ಅವರಿಗೆ ಸೇರಿದ ಮನೆಯಲ್ಲಿ ನಡೆದಿದೆ. ಇಮಾಮ್–ರಮೀಜಾ ದಂಪತಿಗಳು ಕಳೆದ ಐದು ತಿಂಗಳ ಹಿಂದೆ ಈ ಬಾಡಿಗೆ ಮನೆಗೆ ಬಂದಿದ್ದರು. ದಂಪತಿಗಳು ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆ ಮಾಲೀಕರ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ Victoria Hospital ಗೆ ರವಾನಿಸಲಾಗಿದೆ. ಈ ಸಂಬಂಧ Chikkabanavara Police Station ನಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now

Spread the love

Leave a Reply