Crop Relief Payment : ಬೆಳೆ ಪರಿಹಾರ ಹಣದ ಹೊಸ ಲಿಂಕ್ ! ಇನ್ನೂ ಹಣ ಸಿಗದಿದ್ದವರು ಈ ರೀತಿ ಚೆಕ್ ಮಾಡಿ

Crop Relief Payment : ನಮಸ್ಕಾರ ಸ್ನೇಹಿತರೇ, ರೈತರು ಈ ದೇಶದ ಪ್ರಮುಖ ಭಾಗವಾಗಿದ್ದು, ರೈತರ ವೃತ್ತಿ ಬೆಳವಣಿಗೆಯೂ ಬಹಳ ಮುಖ್ಯ. ಆದರೆ ರೈತರು ಬೆಳೆದ ಬೆಳೆಗಳಲ್ಲಿ ಫಸಲು ಇಲ್ಲದೇ ಕಂಗಾಲಾಗಿದ್ದಾರೆ. ಈ ಬಾರಿ ಮಳೆಯಿಲ್ಲದೇ ತೀವ್ರ ಬರಗಾಲದ ಪರಿಣಾಮ ನೀರಿನ ಸಮಸ್ಯೆ ಎಲ್ಲೆಡೆ ವ್ಯಾಪಿಸಿದೆ ಹಾಗೂ ಕೃಷಿಗೂ ಸಾಕಷ್ಟು ಹಾನಿಯಾಗಿದೆ.

ಇದಕ್ಕಾಗಿ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಹಲವು ರೈತರಿಗೆ ಈ ಬೆಳೆ ಪರಿಹಾರದ ಬಗ್ಗೆ ಮಾಹಿತಿ ಇಲ್ಲ. ಇದೀಗ ಕಂದಾಯ ಇಲಾಖೆಯ ಪರಿಹಾರ ಎಂಬ ವೆಬ್ ಸೈಟ್ ತಾಂತ್ರಿಕ ತೊಂದರೆಯಿಂದ ಬೆಳೆ ಪರಿಹಾರದ ಹಣ ಸಿಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಿಂದ ರೈತರು ಈ ಬಗ್ಗೆ ಮಾಹಿತಿ ಪಡೆಯಬಹುದು.

WhatsApp Group Join Now

ಇದನ್ನೂ ಕೂಡ ಓದಿ : Solar Pumpset : ಸರ್ಕಾರದಿಂದ ಉಚಿತ ಸೋಲಾರ್ ಪಂಪ್ ಸೆಟ್ ವಿತರಣೆ ಆರಂಭ.! ಈಗಲೇ ಅರ್ಜಿ ಸಲ್ಲಿಸಿ

ಬೆಳೆ ಪರಿಹಾರ ಹಣ ಏಕೆ ಇನ್ನೂ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ.?

ರೈತರು ಬೆಳೆ ವಿಮೆಯ ಹಣವನ್ನು ಪಡೆದುಕೊಳ್ಳಬೇಕಾದರೆ ಫ್ರೋಟ್ ಐಡಿಯು(FID) ಹೊಂದಿರಬೇಕಾಗುತ್ತದೆ, ಈ ಒಂದು ದಾಖಲೆಯು ಇಲ್ಲದಿದ್ದರೆ ಹಣವನ್ನು ಸ್ವೀಕರಿಸಲಾಗುವುದು ಇಲ್ಲ. ಅದೇ ರೀತಿ ಎಫ್ಐಡಿ(FID)ಯಲ್ಲಿ ಹೆಸರು ನೋಂದಾಯಿಸಿದರೆ ವಿವಿಧ ಕೃಷಿ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ ಇತ್ಯಾದಿ ಸೌಲಭ್ಯ ಸಿಗಲಿದ್ದು, ಇದರಲ್ಲಿ ನಿಮ್ಮ ಮಾಹಿತಿಯನ್ನು ಕಡ್ಡಾಯವಾಗಿ ಸೇರಿಸಬೇಕು. ಮತ್ತು ನಿಮ್ಮ ಆಧಾರ್ ಪಹಣಿ ದಾಖಲೆ ಸರಿಯಾಗಿರಬೇಕು

WhatsApp Group Join Now

ಪರಿಹಾರ ಹಣ ಸಿಗದ ರೈತರ ಪಟ್ಟಿಯನ್ನು ತಿಳಿಯಿರಿ :-

ಪರಿಹಾರ ಹಣ ಸಂದಾಯ ವರದಿ (Parihara Payment Report) ವೆಬ್ ಸೈಟ್ ಗೆ ಭೇಟಿ ನೀಡಿ. ಮೊದಲು ನೀವು ಪರಿಹಾರ ಪಾವತಿ ನಿಲ್ಲಿಸಿದ ರೈತರ ಪಟ್ಟಿಯನ್ನು ಹುಡುಕಿ. ನಂತರ ಪರಿಹಾರ ಆಯ್ಕೆಗಳನ್ನು ಆಯ್ಕೆಮಾಡಿ. ಇದರ ನಂತರ ವಿಲೇಜ್ ವೈಸ್ ಲಿಸ್ಟ್ ಬಟನ್ ಕ್ಲಿಕ್ ಮಾಡಿ. ನೀವು ಪರಿಹಾರ ವರದಿ ವರ್ಷವನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ನೀವು ವರ್ಷ ಮಾನ್ಸೂನ್ 27 ಪ್ರಕಾರ ಆಯ್ಕೆಯನ್ನು ಮಾಡಬೇಕು. ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು, ಹೋಬಳಿಯನ್ನು ಆಯ್ಕೆ ಮಾಡಿ ವರದಿಯನ್ನು ಪಡೆಯಿರಿ.

ಇದನ್ನೂ ಕೂಡ ಓದಿ : Bele Parihara : ರೈತರ ಬ್ಯಾಂಕ್ ಖಾತೆಗೆ ಸಂಪೂರ್ಣ ಬೆಳೆಹಾನಿ ಪರಿಹಾರ ಹಣ ಜಮಾ : ಸಚಿವ ಕೃಷ್ಣಭೈರೇಗೌಡ

ನಿಮ್ಮ ಹತ್ತಿರದ ಗ್ರಾಮ ಲೆಕ್ಕಿಗರ ಭೇಟಿ :-

ಬೆಳೆ ಪರಿಹಾರ ಹಣದ ಈ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಕಲು ಮತ್ತು ಜಮೀನು ಪಹಣಿ ಇತ್ಯಾದಿಗಳನ್ನು ಪಡೆದು ನಿಮ್ಮ ಗ್ರಾಮದ ಗ್ರಾಮ ಲೆಕ್ಕಿಗರನ್ನು ಭೇಟಿ ಮಾಡಿ ಹಣ ಜಮಾ ಆಗದಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಯಾವ ತಾಂತ್ರಿಕ ಸಮಸ್ಯೆಯಿಂದ ನೀವು ಈ ಹಣವನ್ನು ಸ್ವೀಕರಿಸಿಲ್ಲ ಎನ್ನುವ ಬಗ್ಗೆ ತಿಳಿದು ಸರಿಯಾದ ದಾಖಲೆಯನ್ನು ಸರಿಪಡಿಸಿಕೊಳ್ಳಿ.

WhatsApp Group Join Now

ಬೆಳೆ ಪರಿಹಾರದ ಅಧಿಕೃತ ವೆಬ್‌ಸೈಟ್ ಲಿಂಕ್ :- ಪರಿಹಾರ ಹಣ ಸಂದಾಯ ವರದಿ (Parihara Payment Report)

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply