Crop Insurance : ನಮಸ್ಕಾರ ಸ್ನೇಹಿತರೇ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ(Prdhana Manthri Fasal Bima Yojana) ಅರ್ಹ ಫಲಾನುಭವಿ ರೈತರಿಗೆ ದೊರೆಯುವ ಬೆಳೆ ವಿಮೆ ಪರಿಹಾರದ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಕೆಲ ರೈತರು ಸರಕಾರದಿಂದ ಹಣ ಪಡೆದು ಬರಗಾಲದಿಂದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಪಡೆದಿದ್ದಾರೆ. ಇನ್ನೂ ಬೆಳೆ ವಿಮೆ ಪರಿಹಾರ ಹಣ ಸಿಗದ ಅರ್ಹ ರೈತರು ಅರ್ಜಿ ಸಲ್ಲಿಸುವಾಗ ಮಾಡಿದ ಸಣ್ಣ ಪುಟ್ಟ ತಪ್ಪುಗಳಿಂದ ಹೆಚ್ಚಿನ ರೈತರು ವಿಮಾ ಮೊತ್ತದಿಂದ ವಂಚಿತರಾಗಿದ್ದಾರೆ. ನಿಮಗೂ ಕೂಡ ಬೆಳೆ ವಿಮೆ ಪರಿಹಾರ ಸಿಗದೇ ಇದ್ದರೆ, ನೀವೇನು ತಪ್ಪು ಮಾಡಿದ್ದೀರಿ.? ಹಾಗು ನೀವು ಮಾಡಿದ ತಪ್ಪಿಗೆ ಪರಿಹಾರ ಏನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!
ಪ್ರತಿಯೊಬ್ಬ ಅರ್ಹ ರೈತರು ಬೆಳೆಗೆ ವಿಮೆ ಮಾಡಿದ ನಂತರ ಅರ್ಜಿ ಅನುಮೋದನೆ ಪ್ರಕ್ರಿಯೆ ಯಾವ ಹಂತದಲ್ಲಿದೆ.? ವಿಮಾ ಹಣವನ್ನು ಯಾವಾಗ ಠೇವಣಿ ಮಾಡಲಾಗುತ್ತದೆ.? ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಯಲು ನೀವು ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮತ್ತು ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ಒಂದೆರಡು ತಿಂಗಳಿಗೊಮ್ಮೆ ಮೊಬೈಲ್‌ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ನೀವು ಸಲ್ಲಿಸಿರುವ ಅರ್ಜಿಯನ್ನ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಾಗಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಕೂಡಲೇ ಇದನ್ನು ಪರಿಶೀಲಿಸಿ ಸರಿಪಡಿಸಿದರೆ ನಿಮಗೆ ವಿಮೆ ಹಣ ಪಡೆಯಲು ಸಹಕಾರಿಯಾಗುತ್ತದೆ.
ಮೊದಲು ನೀವು ಬೆಳೆ ವಿಮೆ ವಿವರಗಳು ಎಂಬ ಅಧಿಕೃತ ವೆಬ್‌ಸೈಟ್ ಅಥವಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ(Prdhana Manthri Fasal Bima Yojana) ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಲಭ್ಯವಿರುವ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದ ತಕ್ಷಣ ವಿಮಾ ವರ್ಷ ಮತ್ತು ಋತುವನ್ನು ಆಯ್ಕೆ ಮಾಡಲು ನಿಮಗೆ ತೋರಿಸಲಾಗುತ್ತದೆ. ಅಲ್ಲಿ ನೀವು 2023-2024 ಮತ್ತು ಖಾರಿಫ್ ಋತುವನ್ನು ನಮೂದಿಸಬೇಕು. ವರ್ಷವನ್ನು ನಮೂದಿಸಿ ಮತ್ತು ಮುಂದಿನ ಬಟನ್ ಕ್ಲಿಕ್ ಮಾಡಿ, ಎರಡನೇ ಪುಟದಲ್ಲಿ ರೈತರ ಕಾಲಮ್ ಲಭ್ಯವಿರುತ್ತದೆ. ಅಲ್ಲಿ ಕ್ರಾಪ್ ಇನ್ಸೂರೆನ್ಸ್(Crop Insurance) ಡಿಟೇಲ್ಸ್ ಆನ್ ಸರ್ವೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಯ ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ಸಂಖ್ಯೆಯನ್ನು ನಮೂದಿಸಿ ಮತ್ತು ಚೆಕ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
ನಂತರ ವಿಮಾ ಅಪ್ಲಿಕೇಶನ್ ಸಂಖ್ಯೆ ಮತ್ತು ಕ್ಯಾಪ್ಟಾ ಕೋಡ್ ಅನ್ನು ನಮೂದಿಸಲು ತೋರಿಸಲಾಗುತ್ತದೆ. ನೀವು ಅಲ್ಲಿ ಕೇಳಿರುವ ಎರಡನ್ನೂ ಸರಿಯಾದ ಕ್ರಮದಲ್ಲಿ ನಮೂದಿಸಿದರೆ ನಿಮ್ಮ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ವಿವರಗಳನ್ನು ಪ್ರಕಟಿಸಲಾಗುತ್ತದೆ. ಎರಡರಲ್ಲಿರುವ ಮಾಹಿತಿಯು ಹೊಂದಾಣಿಕೆಯಾಗಿದೆಯೇ ಎನ್ನುವುದನ್ನ ನೀವು ಪರಿಶೀಲಿಸಿಕೊಳ್ಳಿ.
ಕೆಳಗೆ ನೀಡಿರುವ ಮಾಹಿತಿ ತಪ್ಪಾಗಿದ್ದರೆ ಅರ್ಹ ಫಲಾನುಭವಿ ರೈತರಿಗೆ ಬೆಳೆ ವಿಮೆ ಹಣ ಸಿಗುವುದಿಲ್ಲ.!
ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿ ರೈತರ ಹೆಸರು ಆಧಾರ್ ಕಾರ್ಡ್(Aadhar Card) ಮತ್ತು ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಒಂದೇ ಆಗಿರಬೇಕು. ಇದರಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಕೂಡ ಬೆಳೆ ಪರಿಹಾರ ಹಣ ರೈತರಿಗೆ ಸಿಗುವುದಿಲ್ಲ. ಮತ್ತು ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಹಾಗಾದರೆ ಎರಡರಲ್ಲಿನ ಹೆಸರು ಹೊಂದಾಣಿಕೆಯಾಗಿದೆಯೇ.? ಪರಿಶೀಲಿಸಿಕೊಳ್ಳಿ. ತಪ್ಪಿದ್ದಲ್ಲಿ ಕೂಡಲೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.
ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ ಅಡಿಯಲ್ಲಿ 88,000 ಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ.!
ರೈತರು ಪಾವತಿಸಿರುವ ಬೆಳೆ ವಿಮೆ ವಿವರವನ್ನೂ ಬೆಳೆ ಸಮೀಕ್ಷೆಯಲ್ಲಿ ಸೇರಿಸಿ ಒಂದಕ್ಕೊಂದು ತಾಳೆ ಹಾಕಬೇಕು. ಹೀಗಾಗಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ವಿವರ ತಾಳೆಯಾಗದಿದ್ದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ. ಉದಾಹರಣೆಗೆ ಬೆಳೆ ವಿಮೆ ವಿವರದಲ್ಲಿ ‘ಜೋಳ’ ಬೆಳೆಯುವುದಾಗಿ ನಮೂದಿಸಿದ್ದರೂ ಬೆಳೆ ಸಮೀಕ್ಷೆ ಮಾಡುವವರು ‘ರಾಗಿ’ ಎಂದು ತಪ್ಪಾಗಿ ನಮೂದಿಸಿದ್ದರೆ ಕೂಡ ತಾಂತ್ರಿಕ ದೋಷವಿದ್ದು, ಹಣ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಅರ್ಹ ಫಲಾನುಭವಿ ರೈತರು ಕೂಡಲೇ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್ ಸಲ್ಲಿಸಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆಗೆ ತಿದ್ದುಪಡಿ ಮಾಡಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Horoscope Today : 31 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮೂಲವ್ಯಾಧಿ (Piles) ಸಮಸ್ಯೆಗೆ ಶಾಶ್ವತ ಮುಕ್ತಿ: ಖಾಲಿ ಹೊಟ್ಟೆಯಲ್ಲಿ ಈ ಬೀಜಗಳ ನೀರು ಕುಡಿದರೆ ಸಾಕು!
- ‘ಮಸೀದಿ ಕೆಡವಿದ್ರೆ ದೇಗುಲ ಸಿಕ್ಕಂತೆಯೇ ದೇಗುಲ ಕೆಡವಿದ್ರೆ ಸ್ತೂಪ ಸಿಗುತ್ತದೆ’: ಸಚಿವ ಪ್ರಿಯಾಂಕ್ ಖರ್ಗೆ
- ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಹೃದಯ, ಕಿಡ್ನಿ ಡೇಂಜರ್ನಲ್ಲಿವೆ ಎಂದರ್ಥ…
- Horoscope Today : 30 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯುವತಿಯನ್ನು ಹತ್ಯೆಗೈದು ಮೃತ ದೇಹ ಪೀಸ್ ಮಾಡಿ ಫ್ರಿಜ್ ನಲ್ಲಿಟ್ಟ ನೌಕಾಪಡೆ ಉದ್ಯೋಗಿ!
- ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!
- ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ತೆಗೆದ್ರಿ? : ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ
- ಮಕ್ಕಳ ಪಾಲಿಗೆ ಮೃತ್ಯು ಕೂಪವಾದ ಕೃಷಿ ಹೊಂಡ: ನಾಲ್ವರು ಪುಟ್ಟ ಕಂದಮ್ಮಗಳ ಬದುಕು ದಾರುಣ ಅಂತ್ಯ
- ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ.?
- ಟೆನ್ಷನ್ ಎಂದು ನೀವೇನಾದ್ರೂ ಮದ್ಯಪಾನ ಮಾಡೋ ಅಭ್ಯಾಸ ಶುರು ಮಾಡಿದ್ರೆ ಕ್ರಮೇಣ ಮೆದುಳು ದುರ್ಬಲವಾಗುತ್ತಂತೆ
- ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೀಲುಗಳು ಬಿಗಿಯಾದಂತೆ ಅನಿಸುತ್ತದೆಯೇ..! ಹಾಗಾದ್ರೆ ಎಚ್ಚರ
- Horoscope Today : 29 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!
- ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನೆಕ್ಕೋದ್ರಿಂದಲೂ ಸೋಂಕು ಹರಡುತ್ತಂತೆ.! ನಾಯಿ ನೆಕ್ಕಿದಾಗ ಏನಾಗುತ್ತದೆ.?
- ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?
- ತಂದೆಗೆ ವಿಷದ ಮಿಲ್ಕ್ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ
- Arecanut Price : ಇಂದಿನ ಅಡಿಕೆ ಧಾರಣೆ – 28 ಮಾರ್ಚ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- Horoscope Today : 28 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ



















