ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದೆ. ಸರ್ಕಾರ ರಚನೆ, ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆಗಳು, ಸ್ಪರ್ಧಗಳು ತೀವ್ರಗೊಳ್ಳುತ್ತಿದೆ. ಇದರ ನಡುವೆ ಕೇರಳ ಕಾಂಗ್ರೆಸ್ ಮುಖಂಡನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಮುಖ್ಯ ಕಚೇರಿಗೆ ಆಗಮಿಸಿದ ಮಹಿಳಾ ಶಾಸಕಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಮುಖಂಡನ ವಿಡಿಯೋ ಭಾರಿ ವೈರಲ್ ಆಗಿದೆ. ಬೇಡ ಬೇಡ ಎಂದು ಕೈಯಿಂದ ಕಾಂಗ್ರೆಸ್ ಮುಖಂಡನ ದೂರ ತಳ್ಳಿದರೂ ಸಿನಿಮಾ ಶೈಲಿಯಲ್ಲಿ ರೊಮ್ಯಾಂಟಿಕ್ ಆಗಿ ತಬ್ಬಿಕೊಳ್ಳಲು ಪ್ರಯತ್ನಿಸಿದ ಘಟನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಅವರು, ಹೊಸದಾಗಿ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಯತ್ನಿಸುವುದು ಕಾಣಿಸುತ್ತದೆ. ಆದರೆ, ಬಿಂದು ಕೃಷ್ಣ ಅವರು ಮುಜುಗರದಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿಯಲ್ಲಿ ಶಾಸಕರ ಸಭೆ ನಡೆಯುವಾಗ ಈ ಘಟನೆ ನಡೆದಿದೆ. ಕ್ಯಾಮೆರಾಗಳು, ಪತ್ರಕರ್ತರು ಮತ್ತು ಪಕ್ಷದ ನಾಯಕರ ಮುಂದೆಯೇ ನಡೆದ ಈ ಘಟನೆ, ಈಗ ರಾಜಕೀಯದಲ್ಲಿ ಘನತೆ, ಮಹಿಳಾ ಗೌರವ ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಕ್ಯಾಮೆರಾದಲ್ಲಿ ಸೆರೆಯಾಯ್ತು ಇಡೀ ಘಟನೆ
ವೈರಲ್ ಆಗಿರುವ ವಿಡಿಯೋದಲ್ಲಿ, ಕೊಲ್ಲಂನಿಂದ ಆಯ್ಕೆಯಾದ ಶಾಸಕಿ ಬಿಂದು ಕೃಷ್ಣ ಗೆಲುವಿನ ಸಂಭ್ರಮದೊಂದಿಗೆ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ. ಬಿಳಿ ಹಾಗೂ ಹಳದಿ ಸೀರೆ ಉಟ್ಟು ಬೆಂಬಲಿಗರತ್ತ ಕೈಬೀಸುತ್ತಾ ಆಗಮಿಸಿದ ಶಾಸಕಿಯನ್ನು ಕಾಂಗ್ರೆಸ್ ಹಿರಿಯ ನಾಯಕ ಚೆರಿಯನ್ ಪಿಲಿಪ್ ಬರಮಾಡಿಕೊಳ್ಳುವ ನೆಪದಲ್ಲಿ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿಂದು ಕೃಷ್ಣ ಶೇಕ್‌ಹ್ಯಾಂಡ್ ಮಾಡಲು ಕೈ ಮುಂದೆ ಚಾಚಿದರೆ, ಅದೇ ಕೈಗಳನ್ನು ಹಿಡಿದು ಎಳೆದು ತಬ್ಬಿಕೊಳ್ಳಲು ಪಿಲಿಪ್ ಪ್ರಯತ್ನಿಸಿದ್ದಾರೆ.
ಪಿಲಿಪ್ ಕೈಗಳನ್ನು ದೂರ ತಳ್ಳಿದರೂ ಕೆಲ ಸೆಕೆಂಡ್‌ಗಳ ಕಾಲ ಪಿಲಿಪ್ ಬಲವಾಗಿ ಶಾಸಕಿಯನ್ನು ಕೈಗಳನ್ನು ಹಿಡಿದು ಆಕೆಯನ್ನು ಎಳೆದು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದರ ನಡುವೆ ಕುತ್ತಿಗೆ ಕೈಹಾಕಿ ತಬ್ಬಿಕೊಂಡು ಬರ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಪಿಲಿಪ್ ಅವರ ಬಳಿ ಬೇಡ ಬೇಡ ಎಂದು ದೂರ ತಳ್ಳಿದರೂ ಪಿಲಿಪ್ ಮಾತ್ರ ಒಂದು ಬಾರಿ ತಬ್ಬಿಕೊಳ್ಳಲೇಬೇಕು ಎಂಬ ಹಠದಲ್ಲಿ ಈ ಕೃತ್ಯ ಮಾಡಿದಂತಿದೆ. ತಬ್ಬಿಕೊಳ್ಳುವ ಮೊದಲ ಪ್ರಯತ್ನ ವಿಫಲವಾದ ಬೆನ್ನಲ್ಲೇ ಪಿಲಿಪ್ ಎರಡನೇ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಬಿಂದು ಕೃಷ್ಣ ಕೈಮುಗಿದು ನಮಸ್ಕರಿಸಿ ಸಾಗಿದ್ದಾರೆ.
ಗೆದ್ದ ಶಾಸಕಿಯನ್ನು ಬೇಡ ಬೇಡ ಎಂದರೂ ಬಿಡದೆ ತಬ್ಬಿ ಮುದ್ದಾಡಲು ಯತ್ನಿಸಿದ ಕಾಂಗ್ರೆಸ್ ನಾಯಕ
WhatsApp Group
Join Now