ಕಸದ ವಿಚಾರದಲ್ಲಿ ದೊಡ್ಡ ಲಾಬಿಯೇ ನಡೀತಿದೆ, ವಿಪಕ್ಷಗಳ ಆರೋಪಕ್ಕೆ ಸಿಎಂ ತಿರುಗೇಟು

Spread the love

ಕಸದ ವಿಚಾರದಲ್ಲಿ ಲಾಬಿ ನಡೆಯುತ್ತಿದೆ. ಬಿಜೆಪಿಯವರಿಗೆ ನಮ್ಮ ಪಾರದರ್ಶಕ ಆಡಳಿತ ತಡೆಯೋಕೆ ಆಗ್ತಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ವಿರೋಧ ಪಕ್ಷಗಳ ಕಸದ ಟೆಂಡರ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಅವರ ಕಾಲದಲ್ಲಿ ಈ ಕೆಲಸ ಯಾಕೆ ಆಗಿಲ್ಲ.

ನೀತಿ ಆಯೋಗದ ಸಭೆ ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್‌ ಅವರು ನವದೆಹಲಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಕಸ ವಿಲೇವಾರಿ ವಿಚಾರವಾಗಿ 6 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಈ ಹಿಂದೆ ಕುಮಾರಸ್ವಾಮಿ ಅವರು ಸಹ ಇದೇ ರೀತಿ ಮಾತನಾಡಿದ್ದರು. ಅವರ ಕಾಲದಲ್ಲಿ ಯಾಕೆ ಕೆಲಸ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಹಿಂದೆ ಕೂಡ ಸುಮಾರು 14 ರಿಂದ 15 ಕಂಪನಿಗಳಿಗೆ ಕಸದಿಂದ ಪವರ್‌ ತಯಾರಿಸುವ ಯೋಜನೆಯನ್ನ ಕೊಟ್ಟಿದ್ವಿ. ಆದರೆ ಅವರ ಕೈನಲ್ಲಿ ಆಗಿಲ್ಲ. ಯಾರೂ ಯಶಸ್ಸನ್ನ ಪಡೆಯಲಿಲ್ಲ. ನಾನು ಕೂಡ ಈ ವಿಚಾರವಾಗಿ ನಿರ್ಧಾರ ಮಾಡುವಾಗ ಹೈದರಾಬಾದ್‌, ಚೆನ್ನೈ ಹಾಗೂ ದೆಹಲಿಯಲ್ಲಿ ಹೋಗಿ ನೋಡಿ ಬಂದಿದ್ದೇನೆ. ಯೋಚಿಸಿಯೇ ಈ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ಅಲ್ಲದೇ, ಈ ಯೋಜನೆಗೆ ಸರಿಯಾದ ಜಾಗ ಸಹ ಇರಲಿಲ್ಲ. ಹಾಗಾಗಿ ಚಿಕ್ಕಬಳ್ಳಾಪರದಲ್ಲಿ ಜಾಗ ಖರೀದಿಗೆ ನಿರ್ಧಾರ ಮಾಡಲಾಗಿದೆ. ಬಹುತೇಕ ಜನರು ಸುತ್ತ-ಮುತ್ತ ಕಸ ಇರುವುದು ಇಷ್ಟಪಡುವುದಿಲ್ಲ. ಇವರದ್ದೇ ಪಕ್ಷದ ಲಿಂಬಾವಳಿ ಅವರು ಸಹ ಅವರ ಜಿಲ್ಲೆಯಲ್ಲಿ ಹಾಕಲು ಬಿಟ್ಟಿರಲಿಲ್ಲ. ಮೊದಲು ಕಸವನ್ನ ಸುಡಬೇಕು, ಅದರಿಂದ ಗ್ಯಾಸ್‌ ಆಗಬೇಕು ನಂತರ ಅದರಿಂದ ಪವರ್‌ ತಯಾರಾಗಬೇಕು. ಅದು ದೊಡ್ಡ ಕೆಲಸ. ಈ ಎಲ್ಲಾ ಯೋಜನೆಗಳ ಬಗ್ಗೆ ನಾನು ಹಿಂದೆಯೇ ಅಶೋಕ್‌ ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿದ್ದೇನೆ. ಅಶೋಕ್‌ ಅವರು ಈ ಈ ಕಸ ಮಾಫಿಯಾದ ಏಜೆಂಟ್‌ ಆಗಿ ಮಾತನಾಡುತ್ತಿದ್ದಾರೆ. ನನಗೆ ಅದೇ ಶಾಕ್‌ ಆಗಿರೋದು ಎಂದು ವ್ಯಂಗ್ಯವಾಡಿದ್ದಾರೆ.

ತನಿಖೆ ಮಾಡಲಿ, ಸವಾಲು ಹಾಕಿದ ಸಿಎಂ

ಹಾಗೆಯೇ, ಆರೋಪಗಳ ಬಗ್ಗೆ ಅವರು ತನಿಖೆ ಮಾಡಲಿ. ನಾವು ಎಲ್ಲದಕ್ಕೂ ಸಿದ್ದ ಎಂದು ಸಿಎಂ ಸವಾಲು ಹಾಕಿದ್ದಾರೆ. 36 ಸಾವಿರ ಕೋಟಿ ಅಲ್ಲ, 10 ಕೋಟಿ ದುರ್ಬಳಕೆ ಮಾಡಿಕೊಂಡಿದ್ದರೆ ಅದರ ಬಗ್ಗೆ ರಿಪೋರ್ಟ್‌ ಕೊಡಲಿ, ತನಿಖೆ ಮಾಡಲಿ. ಅವರ ಕಾಲದಲ್ಲಿ ಟೆಂಡರ್‌ ಕೂಡ ಕರೆಯೋಕೆ ಬಿಡುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇಷ್ಟಕೆ ಸುಮ್ಮನಾಗದ ಅವರು, ನಾನು ಸಿಎಂ ಆಗಿರುವುದನ್ನ ಬಿಜೆಪಿಯವರ ಕೈನಲ್ಲಿ ತಡೆಯೋಕೆ ಆಗ್ತಿಲ್ಲ. ಬೇರೆ ಪಕ್ಷಗಳಲ್ಲಿ ಏನು ಆಗುತ್ತದೆ ಎನ್ನುವ ಮಾಹಿತಿ ನನಗೂ ಇದೆ. ಅವರಿಗೂ ಮಾತನಾಡುವುದು ಅನಿವಾರ್ಯ. ಮಾತನಾಡಲಿ ಬಿಡಿ. ಅಲ್ಲದೇ ಬಿಜೆಪಿಯವರಿಗೆ ನಮ್ಮ ಆಡಳಿತ ವೈಖರಿ ಡೈಜೆಸ್ಟ್‌ ಮಾಡೋಕೆ ಆಗ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

WhatsApp Group Join Now

Spread the love

Leave a Reply