YouTube ನೋಡಿ ಹೆತ್ತ ತಂದೆಯನ್ನೇ ಕತ್ತರಿಸಿ ಬಕೆಟ್‌ನಲ್ಲಿಟ್ಟಿದ್ದ ಮಕ್ಕಳಿಗೆ ಗಲ್ಲು ಶಿಕ್ಷೆ: ಕೋರ್ಟ್‌ನಿಂದ ಐತಿಹಾಸಿಕ ತೀರ್ಪು.!

Spread the love

ಹೈದರಾಬಾದ್: ಆಸ್ತಿ ಮತ್ತು ಹಣದ ಆಸೆಗಾಗಿ ಹೆತ್ತ ತಂದೆಯನ್ನೇ ಅತ್ಯಂತ ಭೀಕರವಾಗಿ ಕೊಲೆ(YouTube) ಮಾಡಿ, ಶವವನ್ನು ಮುಕ್ಕಾಲು ತುಂಡುಗಳಾಗಿ ಕತ್ತರಿಸಿ ಬಕೆಟ್‌ನಲ್ಲಿ ತುಂಬಿ ಪೂಜೆ ಕೋಣೆಯಲ್ಲಿ ಬಚ್ಚಿಟ್ಟಿದ್ದ ಮಗ ಮತ್ತು ಮಗಳಿಗೆ ಕೋರ್ಟ್ ಮರಣದಂಡನೆ (ಉರಿಶಿಕ್ಷೆ) ವಿಧಿಸಿದೆ.

ಕೊಲೆಗೆ ಸಾಥ್ ನೀಡಿದ್ದ ತಾಯಿಗೆ ವಯಸ್ಸಿನ ಕಾರಣದಿಂದಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣದ ಮೇಡ್ಚಲ್ ಮಲ್ಕಾಜಿಗಿರಿ ಜಿಲ್ಲಾ ನ್ಯಾಯಾಲಯ ಈ ಐತಿಹಾಸಿಕ ತೀರ್ಪನ್ನು ನೀಡಿದೆ.

ಕೊಲೆಗೆ ಕಾರಣವೇನು?

ಮಹಾರಾಷ್ಟ್ರ ಮೂಲದ ಕಿಶನ್ ಮಾರುತಿ ಸುತಾರ ಎಂಬುವವರು ರೈಲ್ವೆಯಲ್ಲಿ ಗೂಡ್ಸ್ ಟ್ರೈನ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದಿಂದ ನಿವೃತ್ತಿ ಪಡೆದ ನಂತರ ಮಲ್ಕಾಜಿಗಿರಿಯ ಕೃಷ್ಣಾನಗರದಲ್ಲಿ ಮನೆ ಖರೀದಿಸಿ, ಪತ್ನಿ ಗಂಗಾಬಾಯಿ, ಮಗ ಕಿಶನ್ (47) ಮತ್ತು ಮಗಳು ಪ್ರಫುಲ್ಲಾ (36) ಅವರೊಂದಿಗೆ ವಾಸವಾಗಿದ್ದರು. ಮಗ ಕಿಶನ್ ಯಾವುದೇ ಕೆಲಸ ಮಾಡದೆ ಮೋಜು ಮಾಡುತ್ತಾ ಹಣಕ್ಕಾಗಿ ತಂದೆಗೆ ಪೀಡಿಸುತ್ತಿದ್ದ. ಇತ್ತ ಮಗಳು ಪ್ರಫುಲ್ಲಾ ಪೋಸ್ಟ್ ಗ್ರಾಜುಯೇಷನ್ (PG) ಮುಗಿಸಿದ್ದರೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಖಾಲಿ ಕುಳಿತಿದ್ದಳು. ತಂದೆ ಇವರನ್ನು ಮಂದಲಿಸುತ್ತಿದ್ದರಲ್ಲದೆ, ತನ್ನ ಪೆನ್ಷನ್ ಹಣವನ್ನು ಮಗಳ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ತಂದೆಯನ್ನು ಮುಗಿಸಲು ಇಡೀ ಕುಟುಂಬ ಸ್ಕೆಚ್ ಹಾಕಿತ್ತು.

ಯೂಟ್ಯೂಬ್ ನೋಡಿ ಹತ್ಯೆಯ ಪ್ಲಾನ್!

ತಂದೆಯನ್ನು ಹೇಗೆ ಕೊಲ್ಲಬೇಕು ಎಂದು ಮಗಳು ಪ್ರಫುಲ್ಲಾ ಯೂಟ್ಯೂಬ್‌ನಲ್ಲಿ (YouTube) ಸರ್ಚ್ ಮಾಡಿ ಒಂದು ಪ್ಲಾನ್ ಮಾಡಿದ್ದಳು. ಅದರಂತೆ ಉಮ್ಮತ್ತಿ ಗಿಡದ ಬೀಜಗಳನ್ನು ತಂದು, ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ತಂದೆ ತಿನ್ನುವ ಅನ್ನಕ್ಕೆ ಬೆರೆಸಿದ್ದಾಳೆ. ಹೀಗೆ ಹಲವು ಬಾರಿ ವಿಷದ ಪುಡಿಯನ್ನು ಆಹಾರದಲ್ಲಿ ನೀಡಿದ್ದರಿಂದ ತಂದೆ ಮಾರುತಿ ಅವರು 2019ರ ಆಗಸ್ಟ್ 16 ರಂದು ಮನೆಯಲ್ಲೇ ಮೃತಪಟ್ಟಿದ್ದಾರೆ.

ಶವವನ್ನು ತುಂಡು ಮಾಡಿ ಪೂಜೆ ರೂಮಲ್ಲಿಟ್ಟರು

ಕೊಲೆಯ ನಂತರ ಶವವನ್ನು ಯಾರಿಗೂ ತಿಳಿಯದಂತೆ ವಿಲೇವಾರಿ ಮಾಡಲು, ಮಗ ಮತ್ತು ಮಗಳು ಸೇರಿ ತಂದೆಯ ಶವವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ್ದಾರೆ. ಬಳಿಕ ಆ ಮಾಂಸದ ತುಂಡುಗಳನ್ನು ಬಕೆಟ್‌ಗಳಲ್ಲಿ ತುಂಬಿ ಮನೆಯ ಪೂಜೆ ಕೋಣೆಯಲ್ಲಿ ಬಚ್ಚಿಟ್ಟಿದ್ದಾರೆ. ಹೊರಗಡೆ ಜನರ ಓಡಾಟ ಹೆಚ್ಚಾಗಿದ್ದರಿಂದ ಎರಡು ದಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು. ಶವ ಕೊಳೆತು ವಾಸನೆ ಬರದಂತೆ ತಡೆಯಲು ದಿನವಿಡೀ ರೂಮಿನಲ್ಲಿ ಅಗರಬತ್ತಿಗಳನ್ನು ಹಚ್ಚಿ, ಸೆಂಟ್ (Perfume) ಸ್ಪ್ರೇ ಮಾಡುತ್ತಿದ್ದರು.

ರಹಸ್ಯ ಬಯಲಾಗಿದ್ದು ಹೇಗೆ?

ಆಗಸ್ಟ್ 18 ರಂದು ಕತ್ತಲಾಗುತ್ತಿದ್ದಂತೆ ಬಕೆಟ್‌ಗಳನ್ನು ಮನೆಯಿಂದ ಹೊರಗೆ ತಂದು ಚರಂಡಿಗೆ ಎಸೆಯಲು ಮುಂದಾಗಿದ್ದಾರೆ. ಆದರೆ ಬಕೆಟ್ ಹೊರತರುತ್ತಿದ್ದಂತೆ ಭೀಕರವಾದ ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಅಲ್ಲಿಗೆ ಧಾವಿಸಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಇಡೀ ಕುಟುಂಬವನ್ನು ಬಂಧಿಸಿದ್ದರು.

ಐತಿಹಾಸಿಕ ತೀರ್ಪು

ಸುದೀರ್ಘ ಏಳು ವರ್ಷಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆ ಮುಗಿದಿದ್ದು, ಜಡ್ಜ್ ವಿ. ಬಾಲಭಾಸ್ಕರ್ ರಾವ್ ಅವರು ಸೋಮವಾರ ಭೀಕರ ತೀರ್ಪು ಪ್ರಕಟಿಸಿದ್ದಾರೆ. ಹೆತ್ತ ತಂದೆಯನ್ನು ಕ್ರೂರಿಯಂತೆ ಕೊಂದ ಮಗ ಕಿಶನ್ ಮತ್ತು ಮಗಳು ಪ್ರಫುಲ್ಲಾಗೆ ಗಲ್ಲು ಶಿಕ್ಷೆ (Death Penalty) ವಿಧಿಸಲಾಗಿದೆ. ಕೊಲೆಗೆ ವತ್ತಾಸು ನೀಡಿದ್ದ 65 ವರ್ಷದ ತಾಯಿ ಗಂಗಾಬಾಯಿಗೆ ವಯಸ್ಸಿನ ಕಾರಣದಿಂದಾಗಿ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

WhatsApp Group Join Now

Spread the love

Leave a Reply