ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟ ಮಹಿಳೆ, ಗಂಡ ಬಚಾವ್, ಹೆಂಡತಿ ಜೈಲು ಪಾಲು

ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ(Murder) ಮಾಡಲು ಹಂತಕರಿಗೆ ಸುಪಾರಿ ನೀಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸುಪೌಲ್ನಲ್ಲಿ ಘಟನೆ ನಡೆದಿದೆ. ಪೊಲೀಸರು ಈ ಕೊಲೆ ಸಂಚನ್ನು ಬಯಲು ಮಾಡಿದ್ದಾರೆ. ಮಹಿಳೆ ಬಾಲ್ಯದ ಗೆಳೆಯ ಮತ್ತು ಪ್ರೇಮಿ ಬ್ರಜೇಶ್ ಜೊತೆ ಸೇರಿ ಈ ಕೊಲೆ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. 1.5 ಲಕ್ಷ ರೂ. ಕೊಟ್ಟು ಹಂತಕರನ್ನು ನೇಮಿಸಿಕೊಂಡಿದ್ದರು, ಆದರೆ ಕೊಲೆ ಪ್ರಯತ್ನ ವಿಫಲವಾಯಿತು. ಮಹಿಳೆಯ ಪತಿ ಶಶಿರಂಜನ್ ಚೌಧರಿಗೆ ಗುಂಡೇಟಿನ ಗಾಯಗಳಾಗಿದ್ದು, ಅವರು ಬದುಕುಳಿದಿದ್ದಾರೆ, ಪ್ರಸ್ತುತ ಆಸ್ಪತ್ರೆಯಲ್ಲಿದ್ದು … Read more

ಗಂಡು ಮಗುವಿನಾಸೆಗೆ ಮಾಟಗಾತಿಯ ಮಾತು ಕೇಳಿ ಹೆಂಡತಿ ತಲೆ ಕೂದಲನ್ನೇ ಕತ್ತರಿಸಿದ ಪತಿ!

ಮಾಟಗಾತಿಯ ಮಾತು ಕೇಳಿ ಮಹಿಳೆಯ ಕೂದಲು ಕತ್ತರಿಸಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂರು ಹೆಣ್ಣು ಮಕ್ಕಳನ್ನು ಹೆತ್ತ ಮಹಿಳೆ ನಾಲ್ಕನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಲಿ ಎಂಬ ಕಾರಣಕ್ಕೆ ಆಕೆಯ ಪತಿ ಮತ್ತು ಅತ್ತೆ ಸೇರಿ ಈ ಕೃತ್ಯ (Black magic) ಎಸಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡು ಮಗು ಹೆರದ ಕಾರಣಕ್ಕೆ ಪತ್ನಿಗೆ ಕಿರುಕುಳ ಈ ಅಮಾನವೀಯ ಕೃತ್ಯಕ್ಕೊಳಗಾದ ಮಹಿಳೆಯ ಹೆಸರು … Read more

ಡಿಕೆಶಿ ನನ್ನ ತಂದೆಯ ಸ್ಥಾನದಲ್ಲಿದ್ದಾರೆ, ಕ್ಷಮೆ ಕೇಳ್ತೀನಿ – ಸೋನು ಶೆಟ್ಟಿ

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಸೋನು ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆ ಡಿಕೆ ಶಿವಕುಮಾರ್ ಒಬ್ಬ ಹೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಸೋನುಶೇಟ್ಟಿ ಟಿಕಿಸಿದ್ದರು. ಇದರಿಂದ ಆಕ್ರೋಶಗೊಂಡ ಕೆಪಿಸಿಸಿ ಲೀಗಲ್ ಟೀಮ್, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಸೋನು ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಪೊಲೀಸರು ಸೋನು ಶೆಟ್ಟಿಯನ್ನ ವಶಕ್ಕೆ ಪಡೆದು ಹೇಳಿಕೆ ದಾಖಲಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ … Read more

ಅತಿ ನಿದ್ದೆಯೂ ಅಪಾಯಕಾರಿ ; ನಿಮ್ಮ ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಹೊತ್ತು ಮಲಗ್ಬೇಕು ಗೊತ್ತಾ.?

ಆರೋಗ್ಯಕರ ಮನಸ್ಸು ಮತ್ತು ದೇಹಕ್ಕೆ ಉತ್ತಮ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಸಾಕಷ್ಟು ನಿದ್ರೆ ಪಡೆಯುವುದು ಅಷ್ಟೇ ಮುಖ್ಯ. ಸಾಕಷ್ಟು ನಿದ್ರೆ ಇಲ್ಲದೆ, ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸರಿಯಾದ ನಿದ್ರೆ ಇಲ್ಲದೆ, ನೀವು ದಿನವಿಡೀ ಆಲಸ್ಯ ಮತ್ತು ಕಿರಿಕಿರಿಯನ್ನ ಅನುಭವಿಸುವಿರಿ. ಏಕಾಗ್ರತೆಯೂ ತೊಂದರೆಗೊಳಗಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ನೀವು ಎಷ್ಟು ಸಮಯ ಮಲಗಬೇಕು? ಇದಕ್ಕೆ ಉತ್ತರವೆಂದರೆ ನೀವು ಪಡೆಯುವ ನಿದ್ರೆಯ ಪ್ರಮಾಣವು ನಿಮ್ಮ ವಯಸ್ಸನ್ನು ಅವಲಂಬಿಸಿ ಬದಲಾಗುತ್ತದೆ. ವಯಸ್ಸಿನ ಪ್ರಕಾರ ನಿದ್ರೆಯ ಅವಶ್ಯಕತೆಗಳು.!ನಿದ್ರೆಯ ಅಗತ್ಯಗಳು … Read more

ಕುಟುಂಬ ನ್ಯಾಯಾಲಯದ ಆವರಣದಲ್ಲಿಯೇ ಮಹಿಳೆಗೆ ಅಮಲು ನೀಡಿ ಸಾಮೂಹಿಕ ಅತ್ಯಾಚಾರ : ಓರ್ವನ ಬಂಧನ

ಥಾಣೆ ಜಿಲ್ಲಾ ಸೆಷನ್ಸ್ ಮತ್ತು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರು ಮಹಿಳೆಯ ಮೇಲೆ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 2024 ರಲ್ಲಿ ನಡೆದಿದೆ. ಆದಾಗ್ಯೂ, ಇಬ್ಬರು ಆರೋಪಿಗಳು ತಾವು ರೆಕಾರ್ಡ್ ಮಾಡಿದ ವೀಡಿಯೊವನ್ನು ಬಳಸಿಕೊಂಡು ತಿಂಗಳುಗಳ ಕಾಲ ಪದೇ ಪದೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಂತರ ಮಹಿಳೆ ಡಿಸೆಂಬರ್ 5, 2025 ರಂದು ದೂರು ದಾಖಲಿಸಿದ್ದಾಳೆ. ಆಗಸ್ಟ್ 2024 ರಲ್ಲಿ … Read more

ದೇವರ ದರುಶನಕ್ಕೆ ಬಂದಿದ್ದ ಭಕ್ತನ ದಾರುಣ ಅಂತ್ಯ : ಬೆಟ್ಟ ಹತ್ತುವ ವೇಳೆ ಕಾಲು ಜಾರಿ ಬಿದ್ದು ವೃದ್ಧ ಸಾವು

ರೇವಣಸಿದ್ದೇಶ್ವರ ಬೆಟ್ಟದಲ್ಲಿ ದೇವರ ದರುಶನಕ್ಕಾಗಿ ಬಂದಿದ್ದ ವೃದ್ಧನೊಬ್ಬರು ಬೆಟ್ಟ ಹತ್ತುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಿಡದಿ ಹೋಬಳಿಯ ಕೆಂಪನಹಳ್ಳಿ ನಿವಾಸಿ ರೇವಣ್ಣ (65) ಮೃತ ವ್ಯಕ್ತಿ. ಕುಟುಂಬದವರ ಜೊತೆಗೂಡಿ ಪೂಜಾ ಕಾರ್ಯಕ್ಕಾಗಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಅವರು, ಮೆಟ್ಟಿಲು ಮೂಲಕ ಮೇಲಕ್ಕೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎತ್ತರದಿಂದ ಬಿದ್ದ ಪರಿಣಾಮವಾಗಿ ಅವರಿಗೆ ಗಂಭೀರ ಗಾಯಗಳಾಗಿದ್ದು, ರಕ್ಷಿಸುವಷ್ಟರಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ … Read more

ಮಹಿಳೆಯನ್ನ ಕೊಂದಿದ್ದ ರಾಟ್ವೀಲರ್ ನಾಯಿಗಳೂ ಸಾವು : ಶ್ವಾನದ ಮಾಲೀಕ ಅರೆಸ್ಟ್

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಯಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ದಯವಾಗಿ ಬಿಟ್ಟು ಹೋಗಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಎರಡೂ ರಾಟ್‌ವೀಲರ್ ನಾಯಿಗಳು ಸೆರೆ ಕಾರ್ಯಾಚರಣೆಯ ವೇಳೆ ಮೃತಪಟ್ಟಿರುವ ದುರಂತ ಘಟನೆಯೂ ನಡೆದಿದೆ. ನಾಯಿಗಳನ್ನು ಬಿಟ್ಟುಹೋಗಿದ್ದ ಆರೋಪಿ ಬಂಧನ ಪೊಲೀಸರಿಂದ ಬಂಧಿತನಾದ ಆರೋಪಿಯು ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿ ಶೈಲೇಶಕುಮಾರ್ ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ತಾಲ್ಲೂಕಿನ … Read more

7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ: ಈಗ ತಾನೇ ಕಣ್ಬಿಟ್ಟು ನೋಡುತ್ತಿರುವಾಗಲೇ ಅನಾಥವಾದ ಮಗು

ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ (Couple) ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಫರಿಜಾ(22), ರೆಹಮಾನ್(28) ಆತ್ಮಹತ್ಯೆಗೆ ಶರಣಾದ ದಂಪತಿ. ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು.ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದ್ರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ.ಆದ್ರೆ, ಆತ್ಮಹತ್ಯೆಗೆ ನಿಖರವಾದ … Read more

ಇನ್ಮುಂದೆ ಅಪಘಾತವಾದ್ರೆ ಪೊಲೀಸ್ ಠಾಣೆಗೆ ಹೋಗೋ ಅವಶ್ಯಕತೆ ಇಲ್ಲ, ಜಸ್ಟ್ ಹೀಗೆ ಮಾಡಿ

ಬೆಂಗಳೂರು ನಗರದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ (Tech Tips) ರಸ್ತೆ ಅಪಘಾತಗಳ (Accident) ಪ್ರಮಾಣವೂ ಏರಿಕೆಯಾಗಿದ್ದು, ಸಣ್ಣಪುಟ್ಟ ಗುದ್ದಾಟಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗೆ (Police Station) ಹೋಗಿ ಅಪಘಾತ ದಾಖಲಿಸುವುದು ಜನರಿಗೆ ಸಮಯ ಖರ್ಚು ಮತ್ತು ತೊಂದರೆ. ಈ ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಇಲಾಖೆ ಹೊಸ ಸುಲಭ ವಿಧಾನವನ್ನು ಪರಿಚಯಿಸಿದೆ. ಇದೀಗ, ಇ-ಆಕ್ಸಿಡೆಂಟ್ ರಿಪೋರ್ಟ್ ಮೂಲಕ ಸಣ್ಣ ಅಪಘಾತಗಳನ್ನು ನೀವು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಯಾವಾಗ, ಎಲ್ಲಲ್ಲಿ ಅಪಘಾತವಾಗಿದೆ … Read more

ಧ್ವಂಸಗೊಂಡಿದ್ದು ಬಾಬ್ರಿ ಮಸೀದಿಯಲ್ಲ, ಭಾರತದ ಭ್ರಾತೃತ್ವ ಭಾವನೆ : ಬಾನು ಮುಷ್ತಾಕ್

ಡಿಸೆಂಬರ್ 6 ಭಾರತವು ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾತೃತ್ವವನ್ನು ಕಳೆದುಕೊಂಡ ದಿನವಾಗಿದ್ದು, ಇದು ಭಾರತೀಯರಿಗೆ ಕರಾಳ ದಿನವಾಗಿದೆ ಎಂದು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ, ವಕೀಲೆ ಮತ್ತು ಕಾರ್ಯಕರ್ತೆಯೂ ಆಗಿರುವ ಬಾನು ಮುಷ್ತಾಕ್ ಶನಿವಾರ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ (ಬಿಎಲ್‌ಎಫ್) 14 ನೇ ಆವೃತ್ತಿಯಲ್ಲಿ ಆಶಯ ನುಡಿಗಳ ಜತೆಗೆ, ‘ಬಾನು ಬಾನುವಾಗಿ, ಬಾನು ಬಂಡಾಯವಾಗಿ’ ಗೋಷ್ಠಿಯನ್ನು ಉದ್ದೇಶಿಸಿ ಬಾನು ಮುಷ್ತಾಕ್ ಅವರು ಮಾತನಾಡಿದರು. ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ … Read more