ನನ್ನ ಮಗನಿಗೆ ಹೃದಯಾಘಾತ ಆಗಿಲ್ಲ, ಇದು ಕೊಲೆ? : ಬಾಬಾಜಾನ್ ಸಾವಿಗೆ ಬಿಗ್ ಟ್ವಿಸ್ಟ್, ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು

2025 ನವೆಂಬರ್ 11 ರಂದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರದಲ್ಲಿ ಬಾಬಾಜಾನ್ ಚಿನ್ನೂರು(51) ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯವರು ಇದು ಹೃದಯಾಘಾತವಲ್ಲ, ಕೊಲೆ ಎಂದು ಹೇಳಿದರು. ಇದೀಗ ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. NWKSRTC (ವಾಯುವ್ಯ ಕರ್ನಾಟಕ ರಸ್ತೆ … Read more

ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ : ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ

ಯುವತಿಯೋರ್ವಳು ಕೆಲಸ ಹುಡುಕಲು ಮನೆಯಿಂದ ಹೋಗಿದ್ದವಳು ಶವವಾಗಿ ಪತ್ತೆಯಾಗಿದ್ದಾಳೆ. ಪ್ಯಾರಾಮೆಡಿಕಲ್ ಪೂರ್ಣಗೊಳಸಿದ್ದ ಧಾರವಾಡದ ಗಾಂಧಿ ಚೌಕ್ನ ನಿವಾಸಿ 21 ವರ್ಷ ಝಕಿಲಾ ಮುಲ್ಲಾ, ಕೆಲಸ ಹುಡುಕಲೆಂದು ನಿನ್ನೆ(ಜನವರಿ 20) ಮನೆಯಿಂದ ಹೋಗಿದ್ದವಳು. ಆದ್ರೆ, ಇಂದು (ಜನವರಿ 21) ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಝಕಿಲಾ ಮುಲ್ಲಾ ಮೃತದೇಹ ಪತ್ತೆಯಾಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಹುಟ್ಟುಕೊಂಡಿದೆ. ಇನ್ನು ಈ ಘಟನೆಯಿಂದ ಧಾರವಾಡ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಧಾರವಾಡದ … Read more

ಮೊಟ್ಟೆ ಸಾಂಬರ್ ಸಂಬಂಧ ಗಲಾಟೆ; ಪತಿಯ ನಾಲಿಗೆಯನ್ನೇ ಕಚ್ಚಿ ಕಟ್ ಮಾಡಿದ ಪತ್ನಿ ; ಘಟನೆ ಕೇಳಿದ್ರೆ ನೀವೇ ದಂಗಾಗ್ತೀರಾ!

ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೊಟ್ಟೆ ಸಾಂಬರ್ ವಿಚಾರಕ್ಕೆ ನಡೆದ ಕೌಟುಂಬಿಕ ಜಗಳ ಹಿಂಸಾಚಾರದ ರೂಪ ಪಡೆದಿದ್ದು, ಈ ವೇಳೆ ಪತ್ನಿಯೊಬ್ಬರು ತನ್ನ ಪತಿಯ ಮೇಲೆ ಹಲ್ಲೆ ಮಾಡಿ ಆತನ ನಾಲಿಗೆಯನ್ನು ಕಚ್ಚಿ ಕಟ್ ಮಾಡಿ ಶಾಶ್ವತವಾಗಿ ಮೂಗನಾಗಿರುವಂತೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಬೇಗುಮಾಬಾದ್ ಪ್ರದೇಶದ ಸಂಜಯ್ಪುರಿಯಲ್ಲಿ ಸೋಮವಾರ(ಜ. 19) ರಾತ್ರಿ ಈ ಘಟನೆ ನಡೆದಿದೆ. ಪತಿ ವಿಪಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಶ್ವತವಾಗಿ ಮೂಖನಾಗಿದ್ದಾನೆ. ವೈದ್ಯರು ಮತ್ತೆ ಶಸ್ತ್ರ ಚಿಕಿತ್ಸೆ ಬಳಿಕವೂ ನಾಲಿಗೆಯನ್ನು ಮತ್ತೆ ಜೋಡಿಸಲು … Read more

ತೆಂಗಿನ ಮರದಿಂದ ಬಿದ್ದು ನರಳಾಡಿದ ಯುವಕನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ್ರು : ಸ್ನೇಹಿತರ ರಾಕ್ಷಸಿ ಕೃತ್ಯಕ್ಕೆ ಬೆಚ್ಚಿ ಬಿದ್ದ ಮಾಗಡಿ.!

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿಯಲ್ಲಿ ನಡೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಇದೀಗ ಬಯಲಿಗೆ ಬಂದಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಯುವಕರ ಗುಂಪು ಈ ಕೃತ್ಯ ಎಸಗಿದ್ದು, ಯುವಕನ ಸಾವಿನ ರಹಸ್ಯ ತಡವಾಗಿ ಬಯಲಿಗೆ ಬಂದಿದೆ. ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಹಾಗೂ ಬಂಧಿತರನ್ನು ಸುದೀಪ್, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಮೂವರು ಮಾಗಡಿ … Read more

ಚಿನ್ನದ ಕುರಿತು ‘ಬಾಬಾ ವಂಗಾ’ ಭವಿಷ್ಯವಾಣಿ ವೈರಲ್! ಬಂಗಾರದ ಬೆಲೆ ಎಷ್ಟು ಹೆಚ್ಚಾಗುತ್ತೆ ಗೊತ್ತಾ?

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಚಿನ್ನ ಮತ್ತು ಬೆಳ್ಳಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಈ ಸಂದರ್ಭದಲ್ಲಿ, ಪ್ರಸಿದ್ಧ ಅತೀಂದ್ರಿಯ ಮತ್ತು ಬಲ್ಗೇರಿಯನ್ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಬಾಬಾ ವಂಗಾ ಹಿಂದೆ ಚಿನ್ನದ ಬೆಲೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿಯನ್ನ ತಿಳಿದು ಅನೇಕ ಜನರು ಈಗ ಆಘಾತಕ್ಕೊಳಗಾಗಿದ್ದಾರೆ. ಯಾಕಂದ್ರೆ, ವಂಗಾ ಅವರ ಭವಿಷ್ಯವಾಣಿಗಳು ಅಕ್ಷರಶಃ ನಿಜವಾಗಿವೆ. ಚಿನ್ನದ ಬೆಲೆ ಎಷ್ಟು ಮತ್ತು ಯಾವಾಗ ಹೆಚ್ಚಾಗುತ್ತದೆ ಎಂದು ಬಾಬಾ … Read more

ಚಿನ್ನದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ! ಭದ್ರಾವತಿ ದಂಪತಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್.!

ಉಕ್ಕಿನ ನಗರಿ ಭದ್ರಾವತಿಯನ್ನು ಬೆಚ್ಚಿಬೀಳಿಸಿದ ವೃದ್ಧ ದಂಪತಿಗಳ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಭೀಕರ ಸತ್ಯವನ್ನು ಹೊರಗೆಳೆದಿದ್ದಾರೆ. ಹಣ ಹಾಗೂ ಚಿನ್ನದ ಲಾಲಸೆಗೆ ಸ್ವಂತ ದೊಡ್ಡಪ್ಪ-ದೊಡ್ಡಮ್ಮನನ್ನೇ ವೈದ್ಯನೊಬ್ಬ ಕೊಂದಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಭದ್ರಾವತಿಯ ಭೂತನ್ ಗುಡಿ ಪ್ರದೇಶದಲ್ಲಿ ವಾಸವಾಗಿದ್ದ ಚಂದ್ರಪ್ಪ (68) ಮತ್ತು ಅವರ ಪತ್ನಿ ಜಯಮ್ಮ (65) ಅವರು ಜನವರಿ 20ರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯೊಳಗೆ ಯಾವುದೇ ಗಲಾಟೆ ಅಥವಾ ಹೋರಾಟದ ಗುರುತುಗಳಿರಲಿಲ್ಲ. … Read more

ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ‘ಬಯೋಮೆಟ್ರಿಕ್’ ಬರದಿದ್ದರೆ ಮ್ಯಾನುವಲ್ ಆಗಿ ಬರೆದು ಪಡಿತರ ವಿತರಣೆ.!

ಆಹಾರ ಭದ್ರತಾ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾಲ್ಕು ದಿನಗಳ ಜಿಲ್ಲಾ ಭೇಟಿ ಕೈಗೊಂಡಿದ್ದು ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ತಿಳಿಸಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಆಹಾರ ಆಯೋಗದ ಜಿಲ್ಲೆಯ ಭೇಟಿ ಮತ್ತು ಪರಿಶೀಲನೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು … Read more

ಮದುವೆಯಾಗದ ಮೊಮ್ಮಗಳಿಗೆ ಹುಟ್ಟಿದ ಮಗು ; ಒಂದೇ ನಿಮಿಷಕ್ಕೆ ಹಸುಗೂಸಿನ ಕುತ್ತಿಗೆ ಹಿಸುಕಿ ತಿಪ್ಪೆಗೆಸೆದ ಅಜ್ಜಿ!

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾದ ವಿಷಯ ಹೊರಗೆ ತಿಳಿದರೆ ಎಲ್ಲಿ ಗೌರವ ಹೋಗುತ್ತದೋ ಎಂಬ ಭಯಕ್ಕೆ, ಹುಟ್ಟಿದ ಕೇವಲ ಒಂದು ನಿಮಿಷಕ್ಕೆ ಗಂಡು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ತಾನೇ ಹೆತ್ತು, ತಾನೇ ಕೊಂದ ನರ್ಸ್! ಕೊಲೆಯಾದ ಮಗುವಿನ ತಾಯಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ. … Read more

ಶಬರಿಮಲೆ ಪ್ರಸಾದ ನೀಡಲು ಹೋಗುತ್ತಿರುವ ವೇಳೆ ಭೀಕರ ಅಪಘಾತ – ಮಗ ಸಾವು ತಂದೆಗೆ ಗಂಭೀರ ಗಾಯ

ಶಬರಿಮಲೆಯ ಪ್ರಸಾದವನ್ನು ಸಂಬಂಧಿಕರಿಗೆ ನೀಡಲು ತೆರಳುತ್ತಿರುವ ವೇಳೆ ಅಪಾಯಕಾರಿ ತಿರುವಿನಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಮಗ ಮೃತಪಟ್ಟು ಸಹಸವಾರ ತಂದೆ ತಂದೆ ಗಂಭೀರ ಗಾಯಗೊಂಡ ಘಟನೆ ಬೆಳ್ಳಾರೆ – ಸುಳ್ಯ ಮುಖ್ಯ ರಸ್ತೆಯ ಕಲ್ಲೋಣಿ ಎಂಬಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೊಲ್ಯ ಮೋನಪ್ಪ ಅವರ ಪುತ್ರ ನಿಶಾಂತ್ (24) ಎಂದು ಗುರುತಿಸಲಾಗಿದೆ. ನಿಶಾಂತ್ ತಂದೆ … Read more

ಯುವಕನ ಕಿರುಕುಳಕ್ಕೆ ಬಲಿಯಾದಳೇ 15ರ ಬಾಲಕಿ? ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ!

ಬೀದರ್ : ಯುವಕನ ಕಿರುಕುಳಕ್ಕೆ ಬಲಿಯಾಯಿತೇ ಬಾಲಕಿಯ ಬಾಳು. ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಚ್ಚಿಬೀಳಿಸಿದೆ. ಬಾಲಕಿಯ ಸಾವಿಗೆ ಕೃಷ್ಣ ಎಂಬ ಯುವಕ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಶಾಲೆಗೆ ಹೋಗುವಾಗಲೂ ಬಿಡದ ಕಾಮುಕ: ಮೃತ ಬಾಲಕಿಯು ದಿನನಿತ್ಯ ಶಾಲೆಗೆ ತೆರಳುವಾಗ ಕೃಷ್ಣ ಎಂಬಾತ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಬಾಲಕಿಯ ಕುಟುಂಬಸ್ಥರು, ಈ … Read more