ಹಂಪಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮಿನಿ ಬಸ್ ಪಲ್ಟಿ – ಶಿಕ್ಷಕಿ, ಮಕ್ಕಳು ಸೇರಿ ನಾಲ್ವರಿಗೆ ಗಾಯ.!

ಹಂಪಿಗೆ ಶೈಕ್ಷಣಿಕ ಪ್ರವಾಸಕ್ಕೆ ಕೇರಳದಿಂದ ಬರುತ್ತಿದ್ದ ವಿದ್ಯಾರ್ಥಿಗಳಿದ್ದ ಮಿನಿ ಬಸ್ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಳಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ, ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿಕ್ಷಕಿಯೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ವಿಜಯನಗರ (ಫೆ.04): ಐತಿಹಾಸಿಕ ನಗರಿ ಹಂಪಿಯನ್ನು ನೋಡಲು ಕೇರಳದಿಂದ ಉತ್ಸಾಹದಿಂದ ಬರುತ್ತಿದ್ದ ವಿದ್ಯಾರ್ಥಿಗಳ ತಂಡವೊಂದು ಮಾರ್ಗಮಧ್ಯೆ ಅಪಘಾತಕ್ಕೀಡಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಮಿನಿ ಬಸ್ … Read more

ಅಮ್ಮನನ್ನು ಓಡಿಸಿಕೊಂಡು ಹೋಗಿದ್ದ ವ್ಯಕ್ತಿಯನ್ನ 10 ವರ್ಷದ ಬಳಿಕ ನಡುರಸ್ತೆಯಲ್ಲೇ ಕೊಚ್ಚಿಕೊಂದ ಮಗ!

ಹೆತ್ತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಧಕ್ಕೆ ಬಂದಾಗ ಮನುಷ್ಯ ಎಂತಹ ಘೋರ ಕೃತ್ಯಕ್ಕೂ ಇಳಿಯಬಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ದ್ವೇಷದ ಕಿಡಿ 10 ವರ್ಷಗಳ ಬಳಿಕ ಜ್ವಾಲೆಯಾಗಿ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲ, ಸಿನಿಮಾ ಶೈಲಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ಬೆನ್ನಿನ ಮೇಲೆ ಕಾಲಿಟ್ಟು ನಿಂತು ಹಂತಕ ವಿಕೃತಿ ಮೆರೆದಿದ್ದಾನೆ. ಬೆಚ್ಚಿಬಿದ್ದ ಸವದತ್ತಿ: ಬೆಳಗಾವಿ … Read more

ಪ್ರೀತಿ ಹೆಸರಲ್ಲಿ ವಿವಾಹಿತ ಮಹಿಳೆ ಜೊತೆ ಚಕ್ಕಂದ: ನಂಬಿಸಿ ಗರ್ಭಪಾತ ಮಾಡಿಸಿದ್ನಾ ಯುವಕ.?

ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ಮದುವೆಯಾಗೋದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿದ್ದಲ್ಲದೆ, ಬಳಿಕ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಪ್ರಿಯಕರ ಊಟದಲ್ಲಿ ಗರ್ಭಪಾತದ ಮಾತ್ರೆ‌ಕೊಟ್ಟಿರುವ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ. ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ. ಘಟನೆ ಏನು? ಗಂಡನಿಂದ … Read more

ಜೇನು ದಾಳಿಯಿಂದ 20 ಮಕ್ಕಳನ್ನು ರಕ್ಷಿಸಿ ತಾನೇ ಪ್ರಾಣ ಕಳೆದುಕೊಂಡ ಅಂಗನವಾಡಿ ಸಹಾಯಕಿ.!

ಜೇನು ದಾಳಿಯಿಂದ (Bee Attck) ಅಂಗನವಾಡಿಯ ಸಹಾಯಕಿಯೊಬ್ಬಳು 20 ಮಕ್ಕಳ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ರಣಪುರ್ ಗ್ರಾಮದಲ್ಲಿ ನಡೆದಿದೆ. ಮಡವಾಡ ಪಂಚಾಯತ್‌ನ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜೇನುನೊಣಗಳ ಒಂದು ದೊಡ್ಡ ಹಿಂಡು ಇದ್ದಕ್ಕಿದ್ದಂತೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ನಡೆಸಿದೆ. ಆ ವೇಳೆ ಅಂಗನವಾಡಿಯ ಕಾಂಚನ್ ಬಾಯಿ ಮೇಘವಾಲ್, ತನ್ನ ಸುರಕ್ಷತೆಯ ಬಗ್ಗೆ ಯೋಚಿಸದೆ, ಹತ್ತಿರದಲ್ಲಿ ಬಿದ್ದಿದ್ದ ಟಾರ್ಪಲ್‌ಗಳು ಮತ್ತು ಚಾಪೆಗಳನ್ನು … Read more

ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?

ಉತ್ತರ ಕನ್ನಡ : ಜಿಲ್ಲೆಯ ಸಿದ್ದಾಪುರದ ವಾಸವಾಗಿದ್ದ ಸುಂದರ ಕುಟುಂಬವನ್ನು ಸಾಕುವುದಕ್ಕೆ ಗಂಡ ಬೆಂಗಳೂರಿಗೆ ಹೋದರೆ, ಸಮಾಜ ಸೇವೆ ಮಾಡುವುದಾಗಿ ಹಾಗೂ ಜ್ಯೋತಿಷ್ಯ ಹೇಳಿ ಉದ್ಧಾರ ಮಾಡುವುದಾಗಿ ನಂಬಿಸಿದ ಗುರೂಜಿ ಕಮಲಾಕರ್ ಭಟ್ ಇಡೀ ಸುಸಂಸ್ಕೃತ ಕುಟುಂಬದ ಸುಂದರ ಮಹಿಳೆಯನ್ನು ಬುಟ್ಟಿಗೆ ಬೀಳಿಸಿಕೊಂಡು ಸಂಸಾರ ಆರಂಭಿಸಿದ್ದಾನೆ. ಜೊತೆಗೆ, ಆಕೆಯ ಇಬ್ಬರು ಮಕ್ಕಳಿಗೆ ಕಿರುಕುಳ ಕೊಟ್ಟಾಗ ರಕ್ಷಣೆಗೆ ಬಂದ ಅಪ್ಪ, ದೊಡ್ಡಪ್ಪನ ಮೇಲೆ ಹಲ್ಲೆ ಮಾಡಿದ್ದು, ಚಾಕು ಇರಿತಕ್ಕೆ ಮಹಿಳೆಯ ಗಂಡನ ಅಣ್ಣ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಇದೀಗ … Read more

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ.?

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ದರೆ ನೀವು ಅತೀವ ಎಚ್ಚರಿಕೆ ವಹಿಸಬೇಕು. ಕಾರಣ ಒಂದು ಸಣ್ಣ ಎಡವಟ್ಟಾದರೂ ಗ್ರಾಹಕರಿಗೆ ಸಮಸ್ಯೆ ತೀವ್ರಗೊಳ್ಳಲಿದೆ. ಏನಿದು ಮೆಸೇಜ್.? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಹಲವು ರೀತಿಯಲ್ಲಿ ವಂಚನೆಗಳು ನಡೆಯುತ್ತಿದೆ. ಬ್ಯಾಂಕ್ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಎಸ್‌ಬಿಐ ಈ ಎಚ್ಚರಿಕೆ ನೀಡಿದೆ. ಎಸ್‌ಬಿಐ ಗ್ರಾಹಕರಿಗೆ ವಂಚಕರು ಇತ್ತೀಚೆಗೆ ಮೆಸೇಜ್ ಮಾಡುತ್ತಿದ್ದಾರೆ. ಈ ಮೆಸೇಜ್ ಅಪಾಯಕಾರಿಯಾಗಿದೆ. ಎಸ್‌ಬಿಐ … Read more

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್ ಶಾಕ್.! ಉಸ್ತುವಾರಿ ಹುದ್ದೆಗೆ ಅಣ್ಣಾಮಲೈ ಗುಡ್ ಬೈ

ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳ ಅಂತರದಲ್ಲಿ ಕೆ. ಅಣ್ಣಾಮಲೈ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ತಂದೆಯ ಅನಾರೋಗ್ಯದ ಕಾರಣ ಅವರು ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ. ಆದರೆ ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಜೊತೆಗೆ ಆರು ಕ್ಷೇತ್ರಗಳಿಗೆ ಸೀಮಿತಗೊಳಿಸಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಉಸ್ತುವಾರಿ ತೊರೆದಿದ್ದಾರೆ ಎಂದು ಹೇಳಲಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ವಹಿಸಿದ್ದ 6 … Read more

‘ಪ್ರಧಾನಿ ಮೋದಿ ದೇಶವನ್ನೇ ಮಾರಿದ್ದಾರೆ’ : ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ.!

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಪ್ರಧಾನಿ ಮೋದಿ ಅವರು ರಾಜಿಯಾಗಿದ್ದಾರೆ” ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಚೀನಾ ಗಡಿ ವಿವಾದ ಮತ್ತು ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅವರ ಜೀವನಚರಿತ್ರೆಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಸತ್ತಿನ ಹೊರಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ಪ್ರಧಾನಿ ಮೋದಿ ರಾಜಿಯಾಗಿದ್ಧಾರೆ. ಅವರನ್ನು ಯಾರು ಮತ್ತು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ದೇಶದ ಜನರು … Read more

ಅಧಿಕಾರದ ದಾಹಕ್ಕೆ ಅಪ್ಪನೇ ಆದ ಕಟುಕ : ಇಬ್ಬರು ಮಕ್ಕಳಿರಬೇಕು ಎಂಬ ನಿಯಮಕ್ಕಾಗಿ ಆರು ವರ್ಷದ ಮಗಳ ಹತ್ಯೆ

ಅಧಿಕಾರದ ಆಸೆ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡಬಲ್ಲದು ಎಂಬುದಕ್ಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವ ಸಲುವಾಗಿ, ತಂದೆಯೊಬ್ಬ ತನ್ನ ಆರು ವರ್ಷದ ಮಗಳನ್ನೇ ಕಾಲುವೆಗೆ ನೂಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೇರೂರ್ ಗ್ರಾಮದ ನಿವಾಸಿ ಪಾಂಡುರಂಗ ಕೊಂಡಮಂಗಲೆ ಎಂಬಾತ ಗ್ರಾಮದಲ್ಲಿ ಸಲೂನ್ ನಡೆಸುತ್ತಿದ್ದ. ಈತನಿಗೆ ಒಬ್ಬ ಮಗ ಮತ್ತು ಆರು ವರ್ಷದ ಅವಳಿ … Read more

ಹೆಂಡತಿಯ ತಲೆ ಬೋಳಿಸಿದ ಗಂಡ.! ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಗಂಡನೊಬ್ಬ ತನ್ನ ಹೆಂಡತಿಯ ತಲೆ ಬೋಳಿಸಿ, ವಿಕೃತಿ ಮೆರೆದಿದ್ದಾನೆ. ಹೆಂಡತಿಯ ಶೀಲ, ನಡತೆ ಮೇಲೆ ಸಂಶಯಗೊಂಡ ಪತಿ, ತಾನೇ ತನ್ನ ಕೈಯಾರೆ ತನ್ನ ಪತ್ನಿಯ ತಲೆ ಬೋಳಿಸಿದ್ದಾನೆ. ಪತಿ, ಪತ್ನಿ ನಡುವಿನ ಜಗಳಕ್ಕೆ ತಾರಕಕ್ಕೇರಿದ್ದು, ಆಕೆಯ ನಡತೆ ಮೇಲೆ ಸಂಶಯಗೊಂಡ ಗಂಡ, ಇಂತಹ ಅಮಾನವೀಯ ಕೃತ್ಯ ಎಸಗಿದ್ದಾನೆ. ಜೊತೆಗೆ ಕೊಲೆ ಮಾಡಲು ಕೂಡ ಯತ್ನಿಸಿದ್ದಾನಂತೆ. ಸದ್ಯ ಪೊಲೀಸರು ಆ ಗಂಡನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. … Read more