‘ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ, ನಾನು ಮೊದಲ ಕಲಿತ ಭಾಷೆ ತಮಿಳು’ ಎಂದು ಪೋಸ್ಟ್ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ದೇಶಾದ್ಯಂತ ಚಾಲ್ತಿಯಲ್ಲಿ ಇದೆ. ಅವರು ಇತ್ತೀಚೆಗೆ ‘ಪುಷ್ಪ 2’ ಚಿತ್ರದಿಂದ ಅವರು ದೊಡ್ಡ ಗೆಲುವು ಪಡೆದರು. ಆ ಬಳಿಕ ‘ಛಾವಾ’ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈಗ ರಶ್ಮಿಕಾ ಮಂದಣ್ಣ ಅವರು ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ. ‘ವಾರಿಸು’ ಬಳಿಕ ಅವರು ಮತ್ತೆ ತಮಿಳು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ರಶ್ಮಿಕಾ ಮಂದಣ್ಣಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, ಈಗ ವೈರಲ್ ಆಗಿದೆ. ಈ ಫೋಟೋಗೆ ಚೆನ್ನೈ ಹಾಗೂ ತಮಿಳು ಭಾಷೆ ಬಗ್ಗೆ … Read more

ಬೆಂಗಳೂರು ಕಾಲ್ತುಳಿತದಲ್ಲಿ 11 ಮಂದಿ ಸಾವು : ರಾಹುಲ್ ಗಾಂಧಿಗೆ ಐದು ಪ್ರಶ್ನೆಗಳು, ಹೆದರದೇ ಉತ್ತರಿಸಿ..!

ಕ್ರೆಡಿಟ್‌ಗಾಗಿ ಹಪಾಹಪಿಸುವ ನಿಮ್ಮ ಪಕ್ಷದ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಈಗ ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರಿ ಪ್ರಾಯೋಜಿತ ಕಾಲ್ತುಳಿತದ ಕುರಿತು ನಾವು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದೇವೆ ಆದರೆ ಅವರಲ್ಲಿ ಉತ್ತರವೇ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. 1. ಕರ್ನಾಟಕದಲ್ಲಿ 11 ಯುವಜನರ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡ, ನಿಮ್ಮ ಕಾಂಗ್ರೆಸ್ ಸರ್ಕಾರ ತಪ್ಪಿಸಬಹುದಾಗಿದ್ದ ಭೀಕರ ದುರಂತಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ? 2. ವಿಧಾನಸೌಧದಲ್ಲಿ ಇಂತಹ … Read more

ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

ಉತ್ತರಪ್ರದೇಶದ ಗಾಜಿಯಾಬಾದ್‌ನ ಸೂಟ್‌ಕೇಸ್‌ವೊಂದರಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ವಯಸ್ಸು ಸುಮಾರು 25-28 ಎಂದು ಅಂದಾಜಿಸಲಾಗಿದ್ದು, ಸಿಂಧೂರ ಹಾಗೂ ಕಾಲು ಉಂಗುರ ಧರಿಸಿರುವುದು ಕಂಡುಬಂದಿದೆ ಎಂದಿದ್ದಾರೆ. ಗಾಜಿಯಾಬಾದ್‌ನ ಲೋನಿ ಗಡಿ ಪ್ರದೇಶದ ಕಾಲುವೆಯಲ್ಲಿ ಮಹಿಳೆಯ ಛಿದ್ರಗೊಂಡ ಮೃತದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ. ಈ ಕುರಿತು ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೂಟ್‌ಕೇಸ್‌ನಲ್ಲಿ ಕಾಲುಗಳನ್ನು ಅಡ್ಡಲಾಗಿ ಇರಿಸಲಾಗಿದ್ದು, ಕೈ … Read more

Fact Check : ಚಿನ್ನಸ್ವಾಮಿ ಕಾಲ್ತುಳಿತದ ಒತ್ತಡಕ್ಕೆ ಹೆದರಿ ಖಾತೆ ಬದಲಿಸಿ ಇಲ್ಲ ರಾಜೀನಾಮೆ ಕೊಡ್ತೀನಿ ಎಂದ ಪರಮೇಶ್ವ‌ರ್!

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವ‌ರ್ ಅವರು ತಮ್ಮ ಖಾತೆ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ”ನಾನು ಯಾವತ್ತೂ ನಿರ್ಧಿಷ್ಟವಾಗಿ ಯಾವ ಖಾತೆ ಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ವದಂತಿ ಮತ್ತು ವಿಪಕ್ಷದವರು ಹಬ್ಬಿಸುತ್ತಿರುವ ಸುದ್ದಿ” ಎಂದು ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳ ಪ್ರಕಾರ ಗೃಹ ಸಚಿವರಾಗಿರುವ ಡಾ. ಪರಮೇಶ್ವರ್ ಅವರು ತಮ್ಮ … Read more

ಕಾಲ್ತುಳಿತ ದುರಂತ : ಐವರು ಪೊಲೀಸ್ ಅಧಿಕಾರಿಗಳ ಅಮಾನತು, ಸಿಎಂಗೆ ಭಾರತೀಯ ಪೊಲೀಸ್ ಒಕ್ಕೂಟ ಖಡಕ್ ಪತ್ರ.!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಆರ್‌ಸಿಬಿಯ 11 ಅಭಿಮಾನಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ತವ್ಯ ಲೋಪದ ಕಾರಣ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿಂದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮಾಡಿದ ತಪ್ಪಿಗೆ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆಯಾಗುತ್ತಿದೆ. ಸರ್ಕಾರದ … Read more

2 ಮಕ್ಕಳ ತಾಯಿ ಮೇಲಿನ ಹುಚ್ಚು ಪ್ರೀತಿ ; ಓಯೊ ರೂಮ್‌ನಲ್ಲಿ ಬೆತ್ತಲೆಗೊಳಿಸಿ 17 ಬಾರಿ ಚುಚ್ಚಿ ಕೊಲೆ.!

ಎರಡು ಮಕ್ಕಳ ತಾಯಿಯ ಮೇಲಿನ ಹುಚ್ಚು ಪ್ರೀತಿಗೆ ಪಾಗಲ್ ಪ್ರೇಮಿಯೊಬ್ಬ ಬರ್ಬರ ಹತ್ಯೆ ನಡೆಸಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. 25 ವರ್ಷದ ಇಂಜಿನಿಯರ್ ಯಶಸ್ ಕೊಲೆ ಆರೋಪಿಯಾಗಿದ್ದು, 33 ವರ್ಷದ ಹರಿಣಿ ಮೃತ ಮಹಿಳೆ. ಇಬ್ಬರೂ ಸಹ ಕೆಂಗೇರಿ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಯಶಸ್‌ ಸ್ನೇಹಿತರ ಸಂಬಂಧಿಯಾಗಿರುವ ಹರಿಣಿ ಜಾತ್ರೆಯೊಂದರಲ್ಲಿ ಯಶಸ್‌ಗೆ ಪರಿಚಯವಾಗಿ ನಂಬರ್‌ ಬದಲಿಸಿಕೊಂಡಿದ್ದರು. ಹೀಗೆ ಶುರುವಾದ ಸ್ನೇಹ ಕಾಮಕ್ಕೆ ತಿರುಗಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇತ್ತ ಯಶಸ್‌ ಹರಿಣಿಯ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದ. … Read more

ಥಿಯೇಟರ್‌ಗೆ ಬೆಂಕಿ ಹಾಕಿದರೆ ಅಗ್ನಿಶಾಮಕ ಬಳಸಿ ಎಂದ ಸುಪ್ರೀಂ ಕೋರ್ಟ್ – ವಿಚಾರಣೆ ಮುಂದೂಡಿಕೆ

ಕನ್ನಡ ಭಾಷೆ ಕುರಿತ ನಟ ಕಮಲ್ ಹಾಸನ್ ಅವರ ಹೇಳಿಕೆಯಿಂದ ವಿವಾದಕ್ಕೊಳಗಾಗಿರುವ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬೇಕು ಹಾಗೂ ಚಿತ್ರ ಪ್ರದರ್ಶನದ ವೇಳೆ ರಕ್ಷಣೆ ನೀಡಬೇಕು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಆದರೆ ಇದೇ ವೇಳೆ, ‘ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಕೆಲವು ಸಂಘಟನೆಗಳು ಬೆದರಿಕೆ ಹಾಕುತ್ತಿವೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ‘ಬೆಂಕಿ ನಂದಿಸುವ ಉಪಕರಣಗಳನ್ನು … Read more

RCB ಗೆದ್ದ ನಂತ್ರ ಮೆರವಣಿಗೆಗೆ ಅವಕಾಶ ನೀಡುವಂತೆ ಬಿಜೆಪಿ, ಜೆಡಿಎಸ್ ಕೇಳಿತ್ತು, ಈಗ ಯೂಟರ್ನ್ : ಡಿಕೆಶಿ ಕಿಡಿ

ಆರ್ಸಿಬಿ ಗೆದ್ದ ನಂತರ ಬಿಜೆಪಿ ಹಾಗೂ ದಳದ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವಿಟ್) ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ” ಎಂದು ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಉತ್ತರಿಸಿದರು. ಬಿಜೆಪಿಯವರು ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ … Read more

ಕಾಲ್ತುಳಿತ ಪ್ರಕರಣದಲ್ಲಿ ನಮ್ಮ ಸರಕಾರದ್ದೇನೂ ತಪ್ಪಿಲ್ಲ, ಮುಜುಗರ ಯಾಕೆ.? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನಸೌಧದ ಬಳಿ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್)ಯವರು. ಕೆಎಸ್‌ಸಿಎ ಕಾರ್ಯದರ್ಶಿ ಮತ್ತು ಖಜಾಂಚಿ ಅವರು ವಿಧಾನಸೌಧದ ಬಳಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ನಾನು ಕಾರ್ಯಕ್ರಮಕ್ಕೆ ಹೋದೆ ಅಷ್ಟೇ. ಇಷ್ಟು ಬಿಟ್ಟರೆ ಬೇರೇನೂ ನನಗೆ ಗೊತ್ತಿಲ್ಲ. ಇದರಲ್ಲಿ ಸರಕಾರದ ತಪ್ಪಿಲ್ಲ. ಸ್ಟೇಡಿಯಂ ಕಾರ್ಯಕ್ರಮಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ , ಕಾಲ್ತುಳಿತ ಪ್ರಕರಣದಲ್ಲಿ ಸರಕಾರ ತಪ್ಪೇ ಮಾಡದ ಮೇಲೆ ಮುಜುಗರ … Read more

Pan Card Rules : ಪ್ಯಾನ್ ಕಾರ್ಡ್’ ಹೊಂದಿರುವವರೇ ಗಮನಿಸಿ : ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ ಫಿಕ್ಸ್.!

Pan Card Rules : ಭಾರತದಲ್ಲಿ ಹಲವು ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತವೆ. ಈ ಕ್ರಮದಲ್ಲಿ, ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಬಗ್ಗೆ ಒಂದು ಪ್ರಮುಖ ನವೀಕರಣವಿದೆ. ಪ್ಯಾನ್‌ ಆಧಾ‌ರ್ ಅನ್ನು ಲಿಂಕ್ ಮಾಡಲು ಪ್ರಸ್ತುತ ಡಿಸೆಂಬ‌ರ್ 31, 2025 ರವರೆಗೆ ಗಡುವು ಇದೆ. ಈ ಸಮಯದೊಳಗೆ ನೀವು ಪ್ಯಾನ್ ಮತ್ತು ಆಧಾ‌ರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದಾಗ್ಯೂ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೂ ಸಹ ನೀವು ಅದನ್ನು ಬಳಸುವುದನ್ನು … Read more