Yeshasvini Scheme : ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದಿಂದ ಇಲ್ಲಿದೆ ಗುಡ್ ನ್ಯೂಸ್.!

Spread the love

Yeshasvini Scheme : ನಮಸ್ಕಾರ ಸ್ನೇಹಿತರೇ, ಸರ್ಕಾರವು ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ‘ಯಶಸ್ವಿನಿ’ ಯೋಜನೆಯಡಿ 200ಕ್ಕೂ ಅಧಿಕ ಚಿಕಿತ್ಸೆಗಳ ದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಯೋಜನೆಯಡಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಒಲವು ತೋರುತ್ತಿದ್ದು, ಆಸ್ಪತ್ರೆಗಳ ಜಾಲ ರಾಜ್ಯದಾದ್ಯಂತ ವಿಸ್ತರಣೆಯಾಗುತ್ತಿದೆ.

WhatsApp Group Join Now

ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್

ಸರ್ಕಾರವು ಹಲವು ಚಿಕಿತ್ಸೆಗಳ ದರವನ್ನು ಪರಿಷ್ಕರಿಸಿ, ಶೇ.300 ರವರೆಗೂ ದರ ಹೆಚ್ಚಳ ಮಾಡಿದೆ. ಪರಿಣಾಮ ಯೋಜನೆ ಪ್ರಾರಂಭವಾದಾಗ 370 ಇದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ, ಈಗ 600ರ ಗಡಿ ದಾಟಿದೆ. ಅಂಕಿ-ಅಂಶಗಳು 637 ಯೋಜನೆಯಡಿ ನೋಂದಾಯಿತ ನೆಟ್ವರ್ಕ್ ಆಸ್ಪತ್ರೆಗಳು 602 ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು 2,128 ಯೋಜನೆಯಡಿ ಲಭ್ಯವಾಗುವ ಚಿಕಿತ್ಸೆಗಳು 206 ದರ ಪರಿಷ್ಕರಣೆಗೆ ಒಳಗಾದ ಚಿಕಿತ್ಸೆಗಳು ‘ಯಶಸ್ವಿನಿ’ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ ₹ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು.

WhatsApp Group Join Now

ಇದನ್ನೂ ಕೂಡ ಓದಿ : PM Fasal Bima Yojana : ರೈತರೇ ಈ ಯೋಜನೆಗೆ ಈ ಕೂಡಲೇ ಹೆಸರು ನೊಂದಾಯಿಸಿ ಹಣ ಪಡೆಯಿರಿ !

ಹೇಗೆ ಯಶಸ್ವಿನಿ ಯೋಜನೆ ಸದಸ್ಯತ್ವ ಪಡೆದುಕೊಳ್ಳುವುದು.?

ಗ್ರಾಮೀಣ ಸಹಕಾರ ಸಂಘಗಳ/ ಸ್ವ-ಸಹಾಯ ಗುಂಪುಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ₹500 ಗಳ ವಂತಿಗೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ₹100 ಗಳನ್ನು ಪಾವತಿಸುವುದು. ಹಾಗೆಯೇ ನಗರ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ₹1000 ಗಳ ವಂತಿಗೆಯನ್ನು ಮತ್ತು 4 ಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ₹200 ಗಳನ್ನು ಪಾವತಿಸಿ, ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ಹತ್ತಿರದ ಸಹಕಾರ ಸಂಘಗಳಿಗೆ ನೀಡಿ ಈ ಯೋಜನೆ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗುವುದು.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

mahima bhat - kannada news time

ಕಂಟೆಂಟ್ ರೈಟರ್,
SDM ಉಜಿರೆ ಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಳೆದ 4 ವರ್ಷದಿಂದ ಕಟೆಂಟ್ ರೈಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕನ್ನಡ ಹಾಗು ಪತ್ರಿಕೋದ್ಯಮ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾಟಕ, ಸಾಹಿತ್ಯ, ಭರತನಾಟ್ಯ, ಯಕ್ಷಗಾನ ಇವರ ಹವ್ಯಾಸ.


Spread the love

Leave a Reply