ಎದೆ ನಡುಗಿಸುವ ಸಂಚು.. 32 ಕಾರುಗಳಲ್ಲಿತ್ತು ಬಾಂಬ್.: ಸ್ಪೋಟವಾಗಿದ್ದು ಒಂದು ಮಾತ್ರ!
ಇಲ್ಲಿನ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಹಲವು ಅಂಶಗಳನ್ನು ಬಹಿರಂಗ ಮಾಡುತ್ತಿದೆ. ಕಳೆದ ಸೋಮವಾರ ಸಂಜೆ ವೇಳೆಗೆ ಕೆಂಪುಕೋಟೆ ಮೆಟ್ರೋ ಸ್ಟೇಶನ್ ಬಳಿ ಐ20 ಕಾರಿನಲ್ಲಿ ಸ್ಪೋಟವಾಗಿತ್ತು. ಆದರೆ ಇದೀಗ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿದ್ದು, ಸುಮಾರು 32 ಕಾರುಗಳಲ್ಲಿ ಬಾಂಬ್ ಇರಿಸಲಾಗಿತ್ತು ಎನ್ನಲಾಗಿದೆ. ಮಾರುತಿ ಸುಜುಕಾ ಬ್ರೆಝಾ, ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸ್ಫೋಟಕ ವಸ್ತುಗಳನ್ನು ಸಾಗಿಸಲು ಮತ್ತು ಬಾಂಬ್‌ಗಳನ್ನು ತಲುಪಿಸಲು … Read more