ನನ್ನ ಜೊತೆಗೂ ಬಾ : ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ : ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ

ಮಹಿಳೆಯ ವಿಚಾರಕ್ಕೆ ಸ್ನೇಹಿತನ ಕತೆ ಮುಗಿಸಿದ ಗೆಳೆಯ : ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರಿಬ್ಬರ ಮಧ್ಯೆ ಕಾದಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಸ್ನೇಹಿತನ ಶವವನ್ನು ಹಲವು ಭಾಗಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ಬೋರ್‌ವೆಲ್‌ಗೆ ಎಸೆದಿದ್ದಾನೆ. ಗುಜರಾತ್‌ನ ಮುರು ಗ್ರಾಮದಲ್ಲಿ ಈ ಭಯಾನಕ ಕೊಲೆ ಪ್ರಕರಣ ನಡೆದಿದೆ. 20 ವರ್ಷದ ರಮೇಶ್ ಮಹೇಶ್ವರಿ ಕೊಲೆಯಾದ ಯುವಕ, ಕಳೆದ ಆರು ದಿನಗಳಿಂದ ನಖತ್ರಾಣದ ಸಮೀಪದ ಮುರು ಗ್ರಾಮದ ರಮೇಶ್ ಮಹೇಶ್ವರ್ ಕಾಣೆಯಾಗಿದ್ದ. ಪುತ್ರ ಕಾಣೆಯಾದ … Read more

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು ; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ

ಬೀದರ್ : ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೀದರ್‌ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ ಬಾಲಕಿ. ಜನವಾಡದಲ್ಲಿರುವ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಇನ್ನೇನು ಬಸ್ ಇಳಿದು ಮನಗೆ ಹೋಗಬೇಕೆನ್ನುವಷ್ಟರಲ್ಲೇ ವಿಧಿ ಬಲಿಪಡೆದುಕೊಂಡಿದೆ. ಹೌದು… ಗಡಿಕುಶನೂರು ಗ್ರಾಮದ ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ … Read more

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯದ ಹೊಸ್ತಿಲ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿರುವ ಹಿಂದೂ ಮಠ ಮಾನ್ಯಗಳು ಕೇವಲ ವೀರಶೈವ- ಲಿಂಗಾಯತ ಮಕ್ಕಳಿಗಷ್ಟೇ ಶಿಕ್ಷಣ ನೀಡಿಲ್ಲ. ಅಲ್ಲಿ ಮುಸ್ಲಿಂ, ಕಾಡು ಕುರುಬರು ಸೇರಿದಂತೆ ಎಲ್ಲಾ ಸಮುದಾಯದ ಮಕ್ಕಳಿಗೂ ಅವಕಾಶ ಮಾಡಿಕೊಡಲಾಗಿದೆ. … Read more

ರಾಜಧಾನಿಯಲ್ಲಿ ಹೆಚ್ಚಾಯ್ತು ರೋಡ್‌ ರೇಜ್‌ – ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಕ್ಯಾಬ್‌ ಡ್ರೈವರ್‌!

ರಾಜಧಾನಿಯಲ್ಲಿ ರೋಡ್‌ ರೇಜ್‌ (Road rage) ಘಟನೆಗಳು ದಿನೇ ದಿನೇ ಹೆಚುತ್ತಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಕ್ಯಾಬ್‌ ಗೆ ಬಸ್‌ ತಗುಲಿತೆಂಬ ಕಾರಣಕ್ಕೆ ಡ್ರೈವರ್‌ ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ನಡೆದಿದೆ. ಶಿವಾಜಿನಗರದಿಂದ ಯಲಹಂಕ ಕಡೆಗೆ ತೆರಳುತ್ತಿದ್ದ ಬಸ್ ಗೆ ಕ್ಯಾಬ್‌ ಟಚ್‌ ಆಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಿಂಬಾಲಿಸಿಕೊಂಡು ಹೋಗಿ ಗಲಾಟೆ ನಡೆಸಿದ ಕ್ಯಾಬ್‌ ಚಾಲಕ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ. ಹೆಗಡೆ ನಗರದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಿಎಂಟಿಸಿ ಬಸ್ … Read more

ದಿನಭವಿಷ್ಯ : ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಸುದ್ದಿಯಿಂದ ಮನಸ್ಸಿಗೆ ನೋವುಂಟಾಗಲಿದೆ.

ಮೇಷ ರಾಶಿ : ದಾಂಪತ್ಯದಲ್ಲಿ ಆತ್ಮೀಯತೆ ಉಂಟಾಗಲು ಅವಕಾಶವಾಗಲಿದೆ. ವ್ಯವಹಾರದಲ್ಲಿ ಲಾಭ. ಸಂಬಂಧಗಳಲ್ಲಿ ಚೈತನ್ಯ. ಆಧ್ಯಾತ್ಮದ ಆಸಕ್ತಿ. ಅತಿವಿಶ್ವಾಸ ಅತಿಯಾಗುವುದು ಬೇಡ. ಸ್ಥಾನದ ಮಹತ್ತ್ವವನ್ನು ಅರಿತು ಮಾತನಾಡಬೇಕು. ಅವಸರವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ವ್ಯಾಯಾಮ‌ ಮುಂತಾದ ದೈಹಿಕ ಕಸರತ್ತನ್ನು ಮಾಡಲು ಯೋಚಿಸುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ನಿಮ್ಮ ಕಾರಣಕ್ಕೆ … Read more

ನಿವೃತ್ತ ಸಿಜೆಐ ಬಿ.ಆರ್ ಗವಾಯಿ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್‌ಗೆ ಚಪ್ಪಲಿ ಏಟು!

ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ಇಂದು ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯದ ಆವರಣದಲ್ಲಿ ಚಪ್ಪಲಿಯಿಂದ ಥಳಿಸಲಾಯಿತು. ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ಇಂದು ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯದ ಆವರಣದಲ್ಲಿ ಚಪ್ಪಲಿಯಿಂದ ಥಳಿಸಲಾಯಿತು. ಆದಾಗ್ಯೂ, ದಾಳಿಕೋರನ ಗುರುತು ಮತ್ತು ದಾಳಿಯ ಹಿಂದಿನ ಕಾರಣವನ್ನು ಬಹಿರಂಗವಾಗಿಲ್ಲ. ದೆಹಲಿಯ ಕರ್ಕಾರ್ಡೂಮ … Read more

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ  : ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು

ತನ್ನ ಮಗಳನ್ನು ಅಸಭ್ಯವಾಗಿ ಸ್ಪರ್ಶಿಸಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಲೀವ್ ಇನ್ ಪಾರ್ಟನರ್‌ನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಆದರೆ ಕೊಲೆಯಾದ ಲೀವಿಂಗ್ ಪಾರ್ಟನರ್‌ನ ತಂದೆ ಬೇರೆಯದೇ ಆರೋಪ ಮಾಡಿದ್ದು, ಆತನ ಹೆಸರಿನಲ್ಲಿದ್ದ ಮನೆಯನ್ನು ವಶಕ್ಕೆ ಪಡೆದುಕೊಳ್ಳುವುದಕ್ಕಾಗಿ ಆಕೆ ಹಾಗೂ ಮಕ್ಕಳು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 46 ವರ್ಷದ ರತ್ನ ಕೊಲೆ ಮಾಡಿದ ಮಹಿಳೆ 33 ವರ್ಷದ ಇಂಜಿನಿಯರ್ ಸೂರ್ಯ ಪ್ರತಾಪ್ ಸಿಂಗ್ ಕೊಲೆಯಾದ ಆರೋಪಿ. … Read more

‘ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ’ : ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಕಾಂತಾರ ನಟ ರಿಷಬ್ ಶೆಟ್ಟಿ ಇತ್ತೀಚೆಗೆ ನಡೆಸಿದ ಹರಕೆಯ ನೇಮೋತ್ಸವ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನೇಮೋತ್ಸಲದ ಸಂದರ್ಭ ದೈವ ನರ್ತಕರು ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದಕ್ಕೆ ಅಪಸ್ವರ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂತಾರ ಚಾಪ್ಟರ್ 1 ಚಿತ್ರದ ಯಶಸ್ವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ತಂಡ ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವ ನಡೆಸಿದೆ. ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ … Read more

ಕುಡಿದ ಮತ್ತಿನಲ್ಲಿ ‘ಬೈಕ್ ಟ್ಯಾಕ್ಸಿ’ ಹತ್ತಿದ ಯುವತಿ ರಂಪಾಟ : ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಮದ್ಯದ ವ್ಯಸನಿಗಳಾಗುತ್ತಿದ್ದಾರೆ. ಕೆಲವು ಮಹಿಳೆಯರು ಕುಡಿದು ರಸ್ತೆಯಲ್ಲಿ ಜಗಳವಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ, ಯುವತಿಯೊಬ್ಬಳು ಕುಡಿದು ಬೈಕ್ ಟ್ಯಾಕ್ಸಿ ಹತ್ತಿದಳು. ರಾಪಿಡೋ ಬೈಕ್ ಸವಾರನಿಗೆ ದೌರ್ಜನ್ಯದ ಲಕ್ಷಣಗಳು ಕಂಡುಬಂದವು. ಇದನ್ನು ಗಮನಿಸಿದ ಜನರು ಯುವತಿಯ ಮೇಲೆ ಕೋಪ ವ್ಯಕ್ತಪಡಿಸಿದರು. ಯುವತಿಯೊಬ್ಬಳು ಕ್ಲಬ್ ನಿಂದ ಕುಡಿದು ಹೊರಬಂದಳು. ತನ್ನ ಸ್ಥಳಕ್ಕೆ ಹೋಗಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದಳು. ಸ್ವಲ್ಪ ಸಮಯದ ನಂತರ ಬೈಕ್ ಟ್ಯಾಕ್ಸಿ ಅಲ್ಲಿಗೆ ಬಂದಿತು. ಯುವತಿ ಬೈಕ್ … Read more

ಕೆಕೆಆರ್‌ಟಿಸಿ ಬಸ್ ಪಲ್ಟಿ : ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ : ಕಂಡಕ್ಟರ್ ಸ್ಥಿತಿ ಗಂಭೀರ.!

ರಾಯಚೂರು ಜಿಲ್ಲೆಯ ದೇವದುರ್ಗ ಬಳಿ ಕೆಕೆಆರ್‌ಟಿಸಿ ಬಸ್ ಅತಿವೇಗದಿಂದಾಗಿ ಪಲ್ಟಿಯಾಗಿದ್ದು, 15 ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಬಸ್ ನಿರ್ವಾಹಕನ ಸ್ಥಿತಿ ಚಿಂತಾಜನಕವಾಗಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಂಚೆಸುಗೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್ಸೊಂದು ಪಲ್ಟಿಯಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 15 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಬಸ್‌ನ ನಿರ್ವಾಹಕನ ಸ್ಥಿತಿ ಚಿಂತಾಜನಕವಾಗಿದೆ ಎಂದು … Read more