Horoscope Today : 26 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ಮೇಷರಾಶಿಯವರಾದ ನಿಮಗೆ ಸಾಧಾರಣ ಅದೃಷ್ಟದ ಪ್ರಭಾವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದರೂ, ಆತುರದ ನಿರ್ಧಾರ ಕೈಗೊಳ್ಳುವ ಮೂಲಕ ನಿಮ್ಮ ಆಲೋಚನಾ ರೀತಿಯನ್ನು ಜಟಿಲಗೊಳಿಸಲು ಪ್ರಯತ್ನಿಸಬೇಡಿ. ಸರಳತೆಗೆ ಬದ್ಧರಾಗಿ ಮತ್ತು ತೊಡಕಿಲ್ಲದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ಇಂದು ನೀವು ವಿಪರೀತ ಸ್ಪರ್ಧೆಯನ್ನು ಎದುರಿಸಬೇಕಾದೀತು ಆದರೂ ಸಮಾಧಾನ ತಂದುಕೊಳ್ಳಿ ಮತ್ತು ನಿಮ್ಮ ಉತ್ತಮ ಪ್ರಯತ್ನ ಮಾಡಿ. ಮಹಿಳೆಯರು ತಮ್ಮ ಜಗಳಗಂಟತನ ಹಾಗೂ … Read more

18 ವರ್ಷ ಕಿರಿಯ ಮಹಿಳೆಯ ಜೊತೆ ನಿವೃತ್ತ ಹೈಕೋರ್ಟ್‌ ಉದ್ಯೋಗಿಯ ಅಫೇರ್‌, ಕೊಲೆ ಮಾಡಿ ರೈಲ್ವೆ ಟ್ರ್ಯಾಕ್‌ಗೆ ಎಸೆದ!

ಮಂಗಳವಾರ ಬೆಳಗಿನ ಜಾವ ಕೊಟ್ಟಾಯಂನ ಚಿಂಗವನಂನ ಸುಧಾ ಬೇಬಿ (45) ಕೊಲೆಯಾದ ಕೆಲವೇ ಗಂಟೆಗಳ ನಂತರ, ಮರಡು ಪೊಲೀಸರು ನಿವೃತ್ತ ಹೈಕೋರ್ಟ್ ಉದ್ಯೋಗಿ ಮತ್ತು ಪೊನ್ನುರುನ್ನಿ ಮೂಲದ ಶಾಜಿ ಕೆವಿ (63) ಅವರನ್ನು ಕೊಲೆ ಕೇಸ್‌ನಲ್ಲಿ ಬಂಧಿಸಿದ್ದಾರೆ. ಸುಧಾ ಬೇಬಿ ಶವ ರೈಲ್ವೆ ಸಾಮಾನ್ಯವಾಗಿ ಬಳಸದ ಸಹಾಯಕ ರೈಲ್ವೆ ಹಳಿಯಲ್ಲಿ ಬಿದ್ದಿತ್ತು. ಬೇಬಿಯ ಫೋನ್ ಆಕೆಯ ದೇಹದ ಬಳಿ ಇತ್ತು. ಇದು ತ್ವರಿತ ಗುರುತಿಗೆ ಕಾರಣವಾಯಿತು ಮತ್ತು ಶಂಕಿತನನ್ನು ಗುರುತಿಸುವಲ್ಲಿ ನಿರ್ಣಾಯಕವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್ಟಿಲದಲ್ಲಿ … Read more

ಬಾಲಕಿಯನ್ನ ಮಡಿಲಲ್ಲಿ ಮಲಗಿಸಿಕೊಂಡು ಹುಚ್ಚಾಟ; ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಮಲ್ಲಿಕಾರ್ಜುನ್‌ ಮುತ್ಯಾಗೆ ಕಾನೂನು ಸಂಕಷ್ಟ

ಯಾದಗಿರಿ : ಸೋಷಿಯಲ್‌ ಮೀಡಿಯಾದಲ್ಲಿ ಮಲ್ಲಿಕಾರ್ಜುನ್‌ ಮುತ್ಯಾ ಎಂಬ ಯುವಕನ ವಿಡಿಯೊ ವೈರಲ್‌ ಆಗುವುದನ್ನ ನಿಮ್ಮಲ್ಲಿ ಅನೇಕರು ನೋಡಿರುತ್ತೀರಿ. ಅಲ್ಲಿನ ಜನರಂತೂ ಮಲ್ಲಿಕಾರ್ಜುನ್‌ ಮುತ್ಯಾರನ್ನ ಅಪ್ಪಾಜಿ ಎಂದೇ ಕರೆಯುತ್ತಾರೆ. ಅವರನ್ನ ಜನಸೇವಕ, ದೈವಾಂಶ ಸಂಭೂತ ಎಂದು ಭಾವಿಸುತ್ತಾರೆ. ಭಾರಿ ಜನಪ್ರಿಯತೆಗಳಿಸಿಕೊಂಡಿರುವ ಮಲ್ಲಿಕಾರ್ಜುನ್‌ ಮುತ್ಯಾ ವಿರುದ್ಧ ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿರುಗಿಬಿದ್ದಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ, ಯಾದಗಿರಿ ಎಸ್‌ಪಿಗೆ ಪತ್ರ ಕೂಡ ಬರೆದಿದೆ. ಮಲ್ಲಿಕಾರ್ಜುನ್‌ ಮುತ್ಯಾ ವಿರುದ್ಧ ತನಿಖೆಗೆ ಆಗ್ರಹಿಸಿದೆ. ಏನಿದು … Read more

ಮಗು ಅಳ್ತಿದೆ ಅಂತಾ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಉರಿವ ಬೆಂಕಿಯಲ್ಲಿ ಜೀವಂತ ಸುಟ್ಟ ತಾಯಿ!

ತೆಲಂಗಾಣದ ಬೌರಂಪೇಟ್‌ನಲ್ಲಿ ಎರಡು ತಿಂಗಳ ಗಂಡು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಮಗುವಿನ ವಲಸೆ ಕಾರ್ಮಿಕರಾದ ಪೋಷಕರನ್ನು ಬಂಧಿಸಲಾಗಿದೆ. ಮಗುವಿನ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಬೆಂಕಿಯ ಕುಂಡದಲ್ಲಿ ಶವವನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಕುತ್ಬುಲ್ಲಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇಲ್ಲಿ ಎರಡು ತಿಂಗಳ ಗಂಡು ಮಗುವನ್ನು ಅದರ ಪೋಷಕರೇ ಕೊಂದಿದ್ದಾರೆ ಎನ್ನಲಾಗಿದೆ. ದುಂಡಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಮಗುವಿನ ತಂದೆ-ತಾಯಿಯನ್ನು ಬಂಧಿಸಿ ತನಿಖೆ … Read more

ಕಾಫಿತೋಟ ಮನೆ ಸೇರಿದಂತೆ ಬೇಕಾದಷ್ಟು ಆಸ್ತಿ ಮಾಡಿಟ್ಟರು ಮಕ್ಕಳಿಂದ ಸಿಗದ ಪ್ರೀತಿ : ವೃದ್ಧಾಶ್ರಮದಿಂದ ಬಂದು ಸಾವಿಗೆ ಶರಣಾದ ದಂಪತಿ

ಮಕ್ಕಳಿಗಾಗಿ ಕಾಫಿತೋಟ ಮನೆ ಸೇರಿದಂತೆ ಬೇಕಾದಷ್ಟು ಆಸ್ತಿ ಮಾಡಿಟ್ಟರು ಮಕ್ಕಳು ತಮ್ಮನ್ನು ಸರಿಯಾಗಿ ನೋಡುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೊಳಗಾಗಿ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಹಾಸನದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಮಕ್ಕಳ ನಿರ್ಲಕ್ಷ್ಯದ ಕಾರಣದಿಂದ ವೃದ್ಧದಂಪತಿ ವೃದ್ಧಾಶ್ರಮವನ್ನು ಸೇರಿದ್ದರು. ಆದರೆ ಅಲ್ಲೂ ಅವರಿಗೆ ನೆಮ್ಮದಿ ಸಿಗದೇ ಅಲ್ಲಿಂದ ಹೊರಟು ಬಂದು ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಅರೇ ಹೊಸೂರು ಗ್ರಾಮದ 80 ವರ್ಷದ ಡೇನಿಯಲ್ ಹಾಗೂ 73 … Read more

ಭಾಷೆ ಯಾವುದಾದರೇನು, ಮಾಹಿತಿ ಮುಖ್ಯ: ಉರ್ದು ವಿವಾದಕ್ಕೆ ಆರೋಗ್ಯ ಸಚಿವರ ಖಡಕ್ ಪ್ರತ್ಯುತ್ತರ!

ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ಎಂಬ ನಿಯಮವಿದ್ದರೂ, ಆರೋಗ್ಯ ಇಲಾಖೆಯು ಸರ್ಕಾರಿ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ ಪ್ರಕಟಿಸಿರುವುದು ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ಮತ್ತು ಹೊಸ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗಾಗಿ ಆರೋಗ್ಯ ಇಲಾಖೆ ಇಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರಿಕೆಯನ್ನು ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಉರ್ದು ಭಾಷೆಯಲ್ಲೂ ಪ್ರಕಟಿಸಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು … Read more

ಯಾರೀ ಮಲ್ಲಿಕಾರ್ಜುನ ಮುತ್ಯಾ.? ಬಾಲಕಿ ಜೊತೆ ಮಲ್ಲಿಕಾರ್ಜುನ ಮುತ್ಯಾ ವರ್ತನೆಗೆ ಭಾರೀ ಟೀಕೆ

ಯಾದಗಿರಿ : ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿ ಇರುವ ಮಲ್ಲಿಕಾರ್ಜುನ ಮುತ್ಯಾ (Mallikarjun mutya), ಈ ಬಾರಿ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಲ್ಲಿಕಾರ್ಜುನ ಮುತ್ಯಾ ನಡೆಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಇನ್ ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಶಹಾಪುರ ತಾಲ್ಲೂಕಿನ ರೋಜಾ ಮಹಲ್ ಗ್ರಾಮದ ಮಲ್ಲಿಕಾರ್ಜುನ … Read more

ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ, ಉಗ್ರ ಹೋರಾಟದ ಎಚ್ಚರಿಕೆ!

ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಬಳಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇತ್ತೀಚೆಗೆ ಆಯೋಜಿಸಿದ್ದ ಅಧಿಕೃತ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯೊಂದಿಗೆ ಉರ್ದು ಭಾಷೆಯನ್ನೂ ಬಳಸಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆ ಮತ್ತು ವಿವಾದಕ್ಕೆ ಈಡುಮಾಡಿದೆ. … Read more

ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ

ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿ ಬಳಿ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಓಡಿಶಾಸ ಕಟಕ್‌ನ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ (Debabrata Mohanty) ಎಂಬ ಅಧಿಕಾರಿಯನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಅಧಿಕಾರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಅಧಿಕಾರಿಗಳು (Odisha Vigilance officials) ದಾಳಿ ನಡೆಸಿದ್ದರು. ಮೊಹಂತಿ ವಾಸವಿದ್ದ ಒಡಿಶಾ ವಿಜಿಲೆನ್ಸ್ ಫ್ಲಾಟ್, ಭದ್ರಕ್‌ನ ಮಠಸಾಹಿಯಲ್ಲಿರುವ ಪೋಷಕರ ಮನೆ ಮತ್ತು ಕಟಕ್‌ನಲ್ಲಿರುವ ಆಫಿಸ್‌ನ ಕೋಣೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. … Read more

ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಅವರು ವಿದ್ಯಾವಂತರು. ತುರುವೇಕೆರೆ ಬಿಇಒ ಕಚೇರಿಯ ಎಫ್ಡಿಎ (FDA) ಅಧಿಕಾರಿ. ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇತ್ತು. ಎಲ್ಲರ ಜೊತೆ ಖುಷಿ ಖುಷಿಯಾಗಿದ್ದು, ಅವರ ಆರೋಗ್ಯ ಸಹ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ರಾತ್ರಿ ಮಲಗಿದ ಅವರು ಮತ್ತೆ ಮೇಲೇಳಲೇ ಇಲ್ಲ. ಜೊತೆಗಿದ್ದ ಸಹೋದರಿ ಮತ್ತು ಸಾಕು ಮಗ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಕಣ್ಣೀರು ಹಾಕಿದ್ದರು. ಇಬ್ಬರ ಮಾತನ್ನು ನಂಬಿದ ಇಡಿ ಊರೇ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿತ್ತು. ಇನ್ನೇನು ಮೃತದೇಹ ಮಣ್ಣಿ ಗಿಡುವ ಸಮಯ, … Read more