ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ

‘ಗ್ಯಾರಂಟಿಗಳಿಗೆ ಖರ್ಚು ಮಾಡಿದ ಹಣವನ್ನು ರಾಜ್ಯ ಸರ್ಕಾರವು ಶಾಲೆ-ಆಸ್ಪತ್ರೆಗಳಿಗೆ ವಿನಿಯೋಗಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಅವಧಿ ಮುಗಿದ ಔಷಧಿ ವಿತರಿಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ‘ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಾಲ್ಲೂಕಿನ ಕೊಡಕಹಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ‍‍ಪ್ರತಿಕ್ರಿಯಿಸಿ, ‘ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಇದೇ ಮಾತನ್ನು ಆರ್‌.ವಿ. ದೇಶಪಾಂಡೆ ಹಾಗೂ ಬಸವರಾಜ ರಾಯರೆಡ್ಡಿ ಮೊದಲೇ ಹೇಳಿದ್ದರು’ ಎಂದರು. ‘ರಾಜ್ಯದ ಜನರ ಬಗ್ಗೆ ಭಯಭಕ್ತಿ ಇದ್ದರೆ, ದೇವರಾಜ ಅರಸು … Read more

Horoscope Today : 27 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಇಂದಿನ ದಿನವು ಅದೃಷ್ಟಕರವಾಗಿರುತ್ತದೆ ಮತ್ತು ವಿಶೇಷವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ಮಾನಸಿಕವಾಗಿ ಪ್ರಕ್ಷುಬ್ಧಗೊಂಡಿರುವ ಕಾರಣ ಪ್ರಮುಖ ವಿಚಾರಗಳ ಬಗ್ಗೆ ನಿಮ್ಮ ಮನಸ್ಸು ಸೂಕ್ತ ನಿರ್ಣಯ ತೆಗೆದುಕೊಳ್ಳುವುದಿಲ್ಲ ಅಥವಾ ವಿಶ್ವಾಸ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಎಲ್ಲಾ ಮುಖ್ಯವಾದ ನಿರ್ಧಾರಗಳನ್ನು ತಡೆಹಿಡಿಯಿರಿ. ವ್ಯವಹಾರದ ನಿಮಿತ್ತ ಪ್ರವಾಸ ಕೈಗೊಳ್ಳಬಹುದು. ಪತ್ರ ವ್ಯವಹಾರ ಅಥವಾ ಕರಡು ಪತ್ರ ಹಾಗೂ ದಾಖಲೆಗಳ ಕಾರ್ಯಗಳಲ್ಲಿ ಈ ಪ್ರವಾಸವನ್ನು ಬಳಸಿಕೊಳ್ಳಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಂಭಾವ್ಯತೆಯಿದೆ. ಇಂದು ಯಾವುದೇ ವ್ಯಕ್ತಿ … Read more

ಹಠಾತ್ ಹೃದಯಾಘಾತ : ಪ್ರಾಣ ಉಳಿಸಲು ಕೈಯಲ್ಲಿರಲಿ ಈ 2 ಮಾತ್ರೆಗಳು ! ತಜ್ಞ ವೈದ್ಯರ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೇವಲ ಹೃದಯಾಘಾತ (Heart Attack) ಮಾತ್ರ ಕಾರಣವಲ್ಲ, ಇದರ ಹಿಂದೆ ಹತ್ತು ಹಲವು ವೈದ್ಯಕೀಯ ಕಾರಣಗಳಿವೆ ಎಂದು ಖ್ಯಾತ ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಕ ಡಾ.ಸಿ. ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ಹಠಾತ್ ಸಾವುಗಳಿಗೆ ಪ್ರಮುಖ ಕಾರಣಗಳೇನು? ಕೇವಲ ರಕ್ತನಾಳದ ಬ್ಲಾಕ್ ಮಾತ್ರವಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಸಾವು ಸಂಭವಿಸಬಹುದು: ಪತ್ತೆಯಾಗದ … Read more

ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ – ಮುತ್ಯಾ ವಿಡಿಯೋ ರಿಲೀಸ್‌

ಯಾದಗಿರಿ: ಪೋಕ್ಸೋ (POCSO) ಕೇಸ್‌ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ (mallikarjuna Mutya) ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿರುವ ಮುತ್ಯಾ, ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ. ನಾನು ಎಲ್ಲೂ ಹೋಗಿಲ್ಲ.. ಲೋಕಲ್‌ನಲ್ಲೇ ಇದ್ದೀನಿ ಎಂದಿದ್ದಾರೆ. ವೀಡಿಯೋದಲ್ಲಿ ಮುತ್ಯಾ ಹೇಳಿದ್ದೇನು..?: ನನ್ನ ಶ್ರೀಮಠದ ಭಕ್ತಾದಿಗಳೇ ಯಾವುದೇ ಆತಂಕ ಪಡಬೇಡಿ, ನಾನು ಇಲ್ಲೇ ಲೋಕಲ್ ಅಲ್ಲೇ ಇದ್ದೀನಿ, ಮಠದಲ್ಲಿ ಸಾಮೂಹಿಕ ಮದುವೆ ಇದ್ದ ಕಾರಣ ಕಾರ್ಡ್ ಕೊಡಲು ಬಂದಿದ್ದೇನೆ … Read more

ಯಡಿಯೂರಪ್ಪ, ಬೊಮ್ಮಾಯಿಯವರೇ ನೀವು ಉರ್ದು ಜಾಹೀರಾತು ನೀಡಿಲ್ವ?: ಸಾಕ್ಷಿ ಸಹಿತ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಉರ್ದು ಭಾಷೆಯ ಜಾಹೀರಾತು ನೀಡಿ, ಈಗ ನಮ್ಮ ವಿರುದ್ಧ ಮುಗಿಬೀಳುವುದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಯಾರ ಓಲೈಕೆ ಮಾಡಲು ಉರ್ದು ಜಾಹೀರಾತು ನೀಡಿದ್ದರು? ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಉರ್ದು ಭಾಷೆಯಲ್ಲಿ ಪ್ರಕಟಗೊಂಡಿದ್ದನ್ನು ವಿರೋಧಿಸಿ ವಿಪಕ್ಷಗಳ ನಾಯಕರು ಆಡಿರುವ ವೀರಾವೇಶದ ಮಾತುಗಳನ್ನು ಆಲಿಸಿದೆ. … Read more

ಆತ LLB, ಆಕೆ ಬಿಕಾಂ… ಉನ್ನತ ಶಿಕ್ಷಣ ಪಡೆದಿದ್ರೂ ದೇವಸ್ಥಾನದ ಮುಂದೆ ಭಿಕ್ಷೆ, ಮನಕಲಕುತ್ತೆ ದಂಪತಿಯ ಕಣ್ಣೀರ ಕತೆ!

ಮಹಾಮಾರಿ ಕರೊನಾ ಸಾಂಕ್ರಾಮಿಕ ರೋಗವು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಅನೇಕ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವರು ಆರೋಗ್ಯ ಸಮಸ್ಯೆಗಳಿಂದ ತೀವ್ರವಾಗಿ ಬಳಲಿದರೆ, ಇನ್ನು ಕೆಲವರು ಉದ್ಯೋಗ ಕಳೆದುಕೊಂಡು ಜೀವನೋಪಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಈ ರೀತಿ ಅತಂತ್ರ ಸ್ಥಿತಿಗೆ ಸಿಲುಕಿದ ಜನರಲ್ಲಿ ಕೆಲವರು ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ. ಅಂಥವರಲ್ಲಿ ಜಲಂಧರ್ ರೆಡ್ಡಿ ಮತ್ತು ಸಿರಿಷಾ ದಂಪತಿ ಕೂಡ ಒಬ್ಬರು. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಮೂಲದ ಜಲಂಧರ್ ರೆಡ್ಡಿ, ಎಲ್‌ಎಲ್‌ಬಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಅವರ ಪತ್ನಿ … Read more

ಯುವಕರೇ ಎಚ್ಚರ.! ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟರೆ ಪುರುಷತ್ವದ ಶಕ್ತಿಗೆ ಸಂಚಕಾರ

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಮನುಷ್ಯನ ಕೈಯ ಆರನೇ ಬೆರಳಿನಂತಾಗಿದೆ. ವಿಶೇಷವಾಗಿ ಯುವಜನತೆ ಐದು ನಿಮಿಷ ಕೂಡ ಫೋನ್ ಬಿಟ್ಟಿರಲಾರದ ಸ್ಥಿತಿಯಲ್ಲಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಿದ್ದರೂ, 18-20 ವರ್ಷದ ಯುವಕರ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. ಈ ವಯಸ್ಸಿನ ಯುವಕರು ಫೋನ್ ಬಳಸುವುದರಿಂದ ನೇರವಾಗಿ ಸಂತಾನೋತ್ಪತ್ತಿ ಸಾಮರ್ಥ್ಯ (Fertility) ಕಡಿಮೆಯಾಗುತ್ತದೆ ಎನ್ನಲು ಯಾವುದೇ ನಿಖರವಾದ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಕೆಲವು ಪರೋಕ್ಷ ಪರಿಣಾಮಗಳಿರಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಅಂದರೆ … Read more

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!

ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗನೇ ಕೃತ್ಯಕ್ಕೆ ಸಾಥ್ ನೀಡಿ, ನಂತರ ನಾಟಕವಾಡಿದ್ದರು ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ನಂತರ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿ ತೊಡಗಿದ್ದ ಕಲ್ಮೇಶ್, ಶಿವರಾತ್ರಿ … Read more

ವಿಜಯಪುರ ಮನೆಯಲ್ಲಿ ಕಾಣಿಸಿಕೊಳ್ಳುವ ರಕ್ತದೋಕುಳಿ, ದೇಹದ ಮೇಲೆಲ್ಲಾ ಕಾಣಿಸಿಕೊಳ್ಳುವ ವಿಚಿತ್ರ ಚಿಹ್ನೆ, ಉರ್ದು ಬರಹ!

ವಿಜಯಪುರ ಜಿಲ್ಲೆಯ ಪಾಟೀಲ ಕುಟುಂಬವೊಂದು ಕಳೆದ 16 ವರ್ಷಗಳಿಂದ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಅಣ್ಣ-ತಂಗಿಯ ಮೈಮೇಲೆ ನಿಗೂಢ ಗಾಯಗಳು, ರಕ್ತದಲ್ಲಿ ಚಿಹ್ನೆಗಳು ಕಾಣಿಸಿಕೊಳ್ಳುತ್ತಿದ್ದು, ಬಟ್ಟೆಗಳಿಗೆ ಬೆಂಕಿ ತಗುಲುವಂತಹ ಘಟನೆಗಳಿಂದ ಅವರ ಬದುಕು ನರಕಸದೃಶವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಂದು ಕುಟುಂಬ ಕಳೆದ 16 ವರ್ಷಗಳಿಂದ ಅರ್ಥವಾಗದ, ಆತಂಕಕಾರಿ ಹಾಗೂ ವಿಚಿತ್ರ ಸಮಸ್ಯೆಗೆ ಒಳಗಾಗಿದ್ದು, ಅವರ ಬದುಕು ಸಂಪೂರ್ಣವಾಗಿ ಸಮಸ್ಯೆಯಿಂದ ತುಂಬಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿರುವ ಪಾಟೀಲ ಕುಟುಂಬದ ಇಬ್ಬರು ಸಹೋದರ-ಸಹೋದರಿ ಈ ವಿಚಿತ್ರ ಕಾಟಕ್ಕೆ ಬೇಸತ್ತು ನರಕ … Read more

ನೀನೇ ಖುಷಿಯಾಗಿರು..! – ಮೊಬೈಲ್ ವಾಟ್ಸ್ಯಾಪ್ ಸ್ಟೇಟಸ್ ಹಾಕಿ ವಿದ್ಯಾರ್ಥಿ ಆತ್ಮಹತ್ಯೆ

ಮೊಬೈಲ್‌ನಲ್ಲಿ ಭಾವುಕ ವಾಟ್ಸ್ಯಾಪ್ ಸ್ಟೇಟಸ್ ಹಾಕಿ 19 ವರ್ಷದ ವಿದ್ಯಾರ್ಥಿಯೊಬ್ಬನು ನೀರಿನ ಕಟ್ಟೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಧನುಷ್ (19) ಎಂದು ಗುರುತಿಸಲಾಗಿದೆ. ಇವರು ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಸಮೀಪದ ಗೋಪ್ಪೆನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ತುರುವೇಕೆರೆ ಪಟ್ಟಣದಲ್ಲಿರುವ ಡಿಪ್ಲೊಮಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಬೆಳಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆ ಆದರೂ ಪೋಷಕರ ಕರೆ ಸ್ವೀಕರಿಸಿರಲಿಲ್ಲ. ಇದರಿಂದ … Read more