ಲಿವರ್ ಸಂಬಂಧಿತ ಕಾಯಿಲೆಯ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆಯೇ.?

Spread the love

ಇತ್ತೀಚಿನ ವರ್ಷಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರೂ ಇದರಿಂದ ಪ್ರಭಾವಿತರಾಗುತ್ತಿದ್ದಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಂದಿನ ದೊಡ್ಡ ಅನಾಹುತವನ್ನು ತಡೆಯಬಹುದಾಗಿದೆ.

ಅದರಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚು ಕಂಡು ಬರುತ್ತಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವುದು ಮುಖ್ಯವಾಗಿದೆ. ತಜ್ಞರು ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಕೆಲವು ಕಾರಣಗಳಿಂದ ಲಿವರ್ ರೋಗದ ಅಪಾಯ ಹೆಚ್ಚಾಗಬಹುದು ಎನುತ್ತಾರೆ. ಹಾಗಾದರೆ ಈ ರೀತಿ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗುವುದಕ್ಕೆ ಕಾರಣವೇನು, ಲಕ್ಷಣಗಳು ಪುರುಷರಿಗಿಂತ ಹೇಗೆ ಭಿನ್ನವಾಗಿರುತ್ತದೆ. ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಲಿವರ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಲು ಕಾರಣಗಳೇನು?

ಮಹಿಳೆಯರಲ್ಲಿ ಮೆನೋಪಾಸ್, ಹಾರ್ಮೋನ್ ಬದಲಾವಣೆಗಳು, ಬೊಜ್ಜು ಮತ್ತು ಡಯಾಬಿಟಿಸ್ ಮುಂತಾದ ಕಾರಣಗಳು ಲಿವರ್ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾರ್ಮೋನಲ್ ಅಸಮತೋಲನ ದೇಹದ ಮೆಟಾಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಲಿವರ್ ಕಾರ್ಯಕ್ಷಮತೆ ಕಡಿಮೆಯಾಗಬಹುದು.

ಲಕ್ಷಣಗಳು ಪುರುಷರಿಗಿಂತ ಭಿನ್ನವೇ?

ತಜ್ಞರು ಹೇಳುವಂತೆ, ಲಿವರ್ ಸಂಬಂಧಿತ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿಯಲ್ಲಿರುತ್ತವೆ. ಆದರೆ ಮಹಿಳೆಯರಲ್ಲಿ ಕೆಲವು ವಿಶೇಷ ಸೂಚನೆಗಳು ಕಾಣಿಸಬಹುದು. ಉದಾಹರಣೆಗೆ, ಮಾಸಿಕ ಚಕ್ರದಲ್ಲಿ ಅಸಮರ್ಪಕತೆ, ನಿರಂತರ ದಣಿವು, ದುರ್ಬಲತೆ, ಹೊಟ್ಟೆಯಲ್ಲಿ ಉಬ್ಬರ ಅಥವಾ ಭಾರವಾಗಿರುವ ಭಾವನೆ, ಕಣ್ಣುಗಳಲ್ಲಿ ಹಳದಿ ಬಣ್ಣ (ಜಾಂಡಿಸ್) ಮತ್ತು ತೂಕ ಕಡಿಮೆಯಾಗುವುದು ಇವು ಸಾಮಾನ್ಯ ಲಕ್ಷಣಗಳಾಗಿವೆ. ಹಲವಾರು ಮಹಿಳೆಯರು ಈ ಲಕ್ಷಣಗಳನ್ನು ಸಾಮಾನ್ಯ ದಣಿವು ಅಥವಾ ಹಾರ್ಮೋನಲ್ ಬದಲಾವಣೆ ಎಂದು ನಿರ್ಲಕ್ಷಿಸುತ್ತಾರೆ.

ಲಿವರ್ ಒಂದು ಪ್ರಮುಖ ಅಂಗವಾಗಿದ್ದು, ಇದು ಹೆಚ್ಚು ಸಮಯದವರೆಗೆ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಕಾರ್ಯನಿರ್ವಹಿಸಬಹುದು. ಇದರಿಂದ ಕಾಯಿಲೆ ತಡವಾಗಿ ಪತ್ತೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಇದು ಲಿವರ್ ಸಿರೋಸಿಸ್ ನಂತಹ ಗಂಭೀರ ಹಂತಕ್ಕೆ ತಲುಪಬಹುದು. ಆದ್ದರಿಂದ ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ತಡೆಗಟ್ಟಲು ಏನು ಮಾಡಬೇಕು?

ಲಿವರ್ ಆರೋಗ್ಯ ಕಾಪಾಡಲು ಸಮತೋಲನಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ತೂಕ ನಿಯಂತ್ರಣ ಬಹಳ ಮುಖ್ಯ. ವಿಶೇಷವಾಗಿ ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಮಯದಲ್ಲಿ ಹೆಚ್ಚುವರಿ ಗಮನ ಕೊಡಬೇಕು. ಒಟ್ಟಿನಲ್ಲಿ, ಮಹಿಳೆಯರು ತಮ್ಮ ದೇಹದ ಸಣ್ಣ ಬದಲಾವಣೆಗಳನ್ನೂ ಗಮನಿಸಿ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಲಿವರ್ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿದೆ.

WhatsApp Group Join Now

Spread the love

Leave a Reply