ಜಮೀರ್ ಅಹ್ಮದ್ ಖಾನ್ ಅವರು ಇಲ್ಲದ ಸರ್ಕಾರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಅವರು ಇಲ್ಲದಿದ್ದರೆ ಅದು ಸರ್ಕಾರವೇ ಅಲ್ಲ ಎಂದು ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಡಳಿತ ವೈಖರಿ ಮತ್ತು ಸಮಾಜದ ಎಲ್ಲ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಅವರ ಗುಣಕ್ಕೆ ಮಠಾಧೀಶರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯ ರಾಜಕಾರಣದಲ್ಲಿ ಜಮೀರ್ ಅಹ್ಮದ್ ಅವರ ಸ್ಥಾನ ಮತ್ತು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸ್ವಾಮೀಜಿ, ಸಚಿವರು ಸದಾ ಜನರ ಮಧ್ಯೆ ಇದ್ದು ಕೆಲಸ ಮಾಡುವ ನಾಯಕ ಎಂದು ಬಣ್ಣಿಸಿದರು. ಸಮಾಜದ ಪ್ರತಿಯೊಬ್ಬರಿಗೂ ಸ್ಪಂದಿಸುವ ಇಂತಹ ನಾಯಕರ ಉಪಸ್ಥಿತಿ ಇವತ್ತಿನ ಸರ್ಕಾರಕ್ಕೆ ಅತ್ಯಂತ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಹೊಸ ಸಂಪುಟ ರಚನೆ ಆಗಿದೆ. 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಡಿಕೆಶಿ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಅವಕಾಶ ಸಿಕ್ಕಿಲ್ಲ. ಇದು ಜಮೀರ್ ಅವರನ್ನು ಉದ್ದೇಶಪೂರ್ವಕವಾಗಿ ಮಾಡಿರುವ ಕಡೆಗಣನೆ ಎಂದೇ ಕಾಂಗ್ರೆಸ್ ಪಕ್ಷದ ಮುಸ್ಲಿಂ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಪ್ರಭಾವಿ ನಾಯಕರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲೂ ಜಮೀರ್ ಪಾತ್ರ ಮಹತ್ವದ್ದಾಗಿತ್ತು. ಮುಸ್ಲಿಂ ಬೆಲ್ಟ್ ನಲ್ಲಿ ಜಮೀರ್ ಪ್ರಚಾರ ನಡೆಸಿದ್ದರು. ಆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಮೀರ್ ನಡೆ ಇದೀಗ ಅವರ ರಾಜಕೀಯ ಬೆಳವಣಿಗೆಗೆ ಹಿನ್ನಡೆಯನ್ನು ಉಂಟು ಮಾಡಿದೆ. ಡಿಕೆಶಿ ಸಂಪುಟದಲ್ಲಿ ಜಮೀರ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಭಾವಿ ಸಚಿವರಾಗಿದ್ದ ಇವರ ಸ್ಥಾನಕ್ಕೆ ಯುಟಿ ಖಾದರ್ ಅವರಿಗೆ ಎಂಟ್ರಿ ಸಿಕ್ಕಿದೆ.
ಜಮೀರ್ ಅಹ್ಮದ್ ಇಲ್ಲದ ಸರಕಾರ ಸರಕಾರವೇ ಅಲ್ಲ : ಕೋಡಿಮಠ ಶ್ರೀ
WhatsApp Group
Join Now