ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ; ಸಿಕ್ಕಿಬಿದ್ದ ಯುವಕನಿಗೆ ಅಲ್ಲೇ ಮದುವೆ ಮಾಡಿಸಿದ ಗ್ರಾಮಸ್ಥರು

Spread the love

ಸುಪೌಲ್ (ಬಿಹಾರ): ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಚಿತ್ರ ಘಟನೆಗಳು ವೈರಲ್ ಆಗುತ್ತಿರುತ್ತವೆ. ಆದರೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಮಾತ್ರ ನೆಟ್ಟಿಗರನ್ನು ಬೆಚ್ಚಿಬೀಳಿಸುವ ಜೊತೆಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿವಾಹಿತ ಮಹಿಳೆಯೊಬ್ಬಳ ಜೊತೆ ಕೋಣೆಯಲ್ಲಿ ಸಿಕ್ಕಿಬಿದ್ದ ಯುವಕನಿಗೆ ಗ್ರಾಮಸ್ಥರೇ ಸೇರಿ ಬಲವಂತವಾಗಿ ಮದುವೆ ಮಾಡಿಸಿರುವ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.
ಕೋಣೆಯಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು!

ಸ್ಥಳೀಯ ಮೂಲಗಳ ಪ್ರಕಾರ, 24 ವರ್ಷದ ಯುವಕನೊಬ್ಬ ಊರಿನ ವಿವಾಹಿತ ಮಹಿಳೆಯೊಬ್ಬಳನ್ನು ಭೇಟಿಯಾಗಲು ಆಕೆ ಯಾರು ಇಲ್ಲದ ಸಮಯದಲ್ಲಿ ಮನೆಗೆ ಬಂದಿದ್ದ ಎನ್ನಲಾಗಿದೆ. ಇವರಿಬ್ಬರ ನಡೆ ನುಡಿಯ ಮೇಲೆ ನಿಗಾ ಇಟ್ಟಿದ್ದ ಸ್ಥಳೀಯರು ಹಾಗೂ ನೆರೆಹೊರೆಯವರು, ಇಬ್ಬರೂ ಒಟ್ಟಿಗೆ ಇರುವುದನ್ನು ನೋಡಿ ತಕ್ಷಣವೇ ಕೋಣೆಗೆ ಬೀಗ ಹಾಕಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಪತಿ ಮತ್ತು ಊರಿನ ಹಿರಿಯರ ಸಮ್ಮುಖದಲ್ಲೇ ಮದುವೆ!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳೆಯ ಪತಿ ಹಾಗೂ ಊರಿನ ಹಿರಿಯರು ಪಂಚಾಯಿತಿ ನಡೆಸಿದ್ದಾರೆ. ತಪ್ಪು ಮಾಡಿದ ಯುವಕನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಿರ್ಧರಿಸಿದ ಗ್ರಾಮಸ್ಥರು, ಕಾನೂನನ್ನು ಕೈಗೆತ್ತಿಕೊಂಡು ಸ್ಥಳದಲ್ಲೇ ಅವರಿಬ್ಬರಿಗೂ ಮದುವೆ ಮಾಡಲು ಮುಂದಾಗಿದ್ದಾರೆ. ಯುವಕ ಎಷ್ಟೇ ಬೇಡಿಕೊಂಡರೂ ಕೇಳದ ಜನ, ಆತನಿಗೆ ಹಿಗ್ಗಾಮುಗ್ಗಾ ಥಳಿಸಿ, ಬಲವಂತವಾಗಿ ಮಹಿಳೆಗೆ ಸಿಂಧೂರ ಇಡಿಸಿ ಮದುವೆ ಮುಗಿಸಿದ್ದಾರೆ.

ಜಾಲತಾಣಗಳಲ್ಲಿ ವಿಡಿಯೋ ವೈರಲ್: ತನಿಖೆ ಕೈಗೆತ್ತಿಕೊಂಡ ಪೊಲೀಸ್

ಮದುವೆ ನಡೆಯುವಾಗ ಹಾಗೂ ಮದುವೆಯ ನಂತರ ಯುವಕ ಅಸಹಾಯಕನಾಗಿ ತಲೆ ಕೈ ಹೊತ್ತು ಜೋರಾಗಿ ಅಳುತ್ತಿರುವ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರದಲ್ಲಿ ಕಾಣುವಂತೆ “ಅವರು ಮಾಡಿದ್ದು ಸರಿನಾ ತಪ್ಪಾ..?” ಎಂಬ ಪ್ರಶ್ನೆಯೊಂದಿಗೆ ಈ ಸುದ್ದಿ ಡಿಜಿಟಲ್ ವೇದಿಕೆಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಯುವಕನ ಕುಟುಂಬಸ್ಥರು ಬಲವಂತದ ಮದುವೆ ಹಾಗೂ ಹಲ್ಲೆಯ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply