ನಿಮ್ಮ ಪತ್ನಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್‌ನಲ್ಲಿ 1 ಲಕ್ಷ ಠೇವಣಿ ಇಟ್ಟರೆ ಎರಡು ವರ್ಷಗಳಲ್ಲಿ ನಿಮಗೆ ಎಷ್ಟು ಸಿಗುತ್ತದೆ?

Spread the love

ಪೋಸ್ಟ್ ಆಫೀಸ್‌ನ ಟೈಮ್ ಡಿಪಾಸಿಟ್ (TD) ಯೋಜನೆಗಳು ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಷೇರು ಮಾರುಕಟ್ಟೆ ಅಥವಾ ಇತರೆ ಅಪಾಯದ ಹೂಡಿಕೆಗಳಿಗಿಂತ ಖಚಿತ ಆದಾಯ ಬಯಸುವವರಿಗೆ ಈ ಯೋಜನೆಗಳು ಉತ್ತಮ ಪರ್ಯಾಯವಾಗಿವೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಫಿಕ್ಸ್ಡ್ ಡಿಪಾಸಿಟ್ ಬಡ್ಡಿದರಗಳನ್ನು ಕಡಿಮೆ ಮಾಡುತ್ತಿರುವ ಸಂದರ್ಭದಲ್ಲಿ, ಪೋಸ್ಟ್ ಆಫೀಸ್ ಯೋಜನೆಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರದಲ್ಲಿ ಕಡಿತ ಮಾಡಿದ ನಂತರ ಹಲವು ಬ್ಯಾಂಕ್‌ಗಳು ತಮ್ಮ FD ಬಡ್ಡಿದರಗಳನ್ನು ಇಳಿಸಿವೆ. ಆದರೆ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರಿಂದ ಖಚಿತ ಆದಾಯದೊಂದಿಗೆ ಹಣವನ್ನು ಸುರಕ್ಷಿತವಾಗಿ ಬೆಳೆಸಲು ಬಯಸುವವರು ಪೋಸ್ಟ್ ಆಫೀಸ್ ಯೋಜನೆಗಳತ್ತ ಮುಖ ಮಾಡುತ್ತಿದ್ದಾರೆ.

ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಗಳ ಬಡ್ಡಿದರ

ಪ್ರಸ್ತುತ ಪೋಸ್ಟ್ ಆಫೀಸ್‌ನಲ್ಲಿ 1 ವರ್ಷ, 2 ವರ್ಷ, 3 ವರ್ಷ ಹಾಗೂ 5 ವರ್ಷಗಳ ಅವಧಿಗೆ ಟೈಮ್ ಡಿಪಾಸಿಟ್ ಖಾತೆ ತೆರೆಯಬಹುದು. ಈ ಯೋಜನೆಗಳ ಬಡ್ಡಿದರಗಳು ಹೀಗಿವೆ:

• 1 ವರ್ಷದ ಟಿಡಿ – 6.9%
• 2 ವರ್ಷದ ಟಿಡಿ – 7.0%
• 3 ವರ್ಷದ ಟಿಡಿ – 7.1%
• 5 ವರ್ಷದ ಟಿಡಿ – 7.5%

ಈ ಖಾತೆಗಳನ್ನು ಕೇವಲ ₹1,000 ಕನಿಷ್ಠ ಮೊತ್ತದಿಂದ ಆರಂಭಿಸಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ.

₹1 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತದೆ.?

ಒಬ್ಬ ವ್ಯಕ್ತಿ ತನ್ನ ಪತ್ನಿಯ ಹೆಸರಿನಲ್ಲಿ ಅಥವಾ ತನ್ನ ಹೆಸರಿನಲ್ಲಿ ಪೋಸ್ಟ್ ಆಫೀಸ್ 2 ವರ್ಷದ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ₹1,00,000 ಹೂಡಿಕೆ ಮಾಡಿದರೆ, ಪ್ರಸ್ತುತ 7% ಬಡ್ಡಿದರದ ಆಧಾರದ ಮೇಲೆ ಅವಧಿ ಪೂರ್ಣಗೊಂಡ ಬಳಿಕ ಒಟ್ಟು ಸುಮಾರು ₹1,14,888 ಲಭಿಸುತ್ತದೆ.

ಅಂದರೆ ಹೂಡಿಕೆ ಮಾಡಿದ ಮೂಲಧನ ₹1 ಲಕ್ಷಕ್ಕೆ ಸುಮಾರು ₹14,888 ಬಡ್ಡಿ ಆದಾಯವಾಗಿ ಸಿಗುತ್ತದೆ. ಮಹಿಳೆ, ಪುರುಷ ಅಥವಾ ಹಿರಿಯ ನಾಗರಿಕ ಎಂಬ ಭೇದವಿಲ್ಲದೆ ಎಲ್ಲರಿಗೂ ಒಂದೇ ಬಡ್ಡಿದರ ಅನ್ವಯವಾಗುತ್ತದೆ.

ಸುರಕ್ಷಿತ ಹೂಡಿಕೆ ಆಯ್ಕೆ

ಹಣ ಕಳೆದುಕೊಳ್ಳುವ ಭಯವಿಲ್ಲದೆ ಖಚಿತ ಆದಾಯ ಬಯಸುವವರಿಗೆ ಪೋಸ್ಟ್ ಆಫೀಸ್ ಟಿಡಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಸರ್ಕಾರದ ಬೆಂಬಲ ಹೊಂದಿರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ. ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಸಾಧಿಸಲು ಹಾಗೂ ಉಳಿತಾಯವನ್ನು ಸುರಕ್ಷಿತವಾಗಿ ಬೆಳೆಸಲು ಈ ಯೋಜನೆ ಸಹಕಾರಿಯಾಗಬಹುದು.

WhatsApp Group Join Now

Spread the love

Leave a Reply