ಸಾನ್ವಿ ಸುದೀಪ್‌ ಬೆನ್ನ ಮೇಲೆ ಅರಳಿದ ಗಣಪತಿ ದೇವರ ಟ್ಯಾಟೂ.. ಇದಕ್ಕಾಗಿ ಹೋಗಿದ್ದು ಯಾವ ನಗರಕ್ಕೆ? ವಿಡಿಯೋ

Spread the love

ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ ಅವರು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಫುಲ್‌ ಬ್ಯುಸಿ ಇದ್ದಾರೆ. ಈಗಾಗಲೇ ಅವರ ಮಾರ್ಕ್‌ ಸಿನಿಮಾ ಬಿಗ್‌ ಸಕ್ಸಸ್‌ ಕಂಡಿದೆ. ಈ ಸಿನಿಮಾದಲ್ಲಿ ಸುದೀಪ್‌ ಅವರ ಮುದ್ದಿನ ಮಗಳು ಹಾಡೊಂದನ್ನು ಹಾಡಿದ್ದು ಇದು ಕೂಡ ದೊಡ್ಡ ಯಶಸ್ಸು ಕಂಡಿತು.

ಹೈದರಾಬಾದ್‌ನಲ್ಲಿ ಶಿಕ್ಷಣ ಅಭ್ಯಾಸವನ್ನು ಮುಗಿಸಿರುವ ಸಾನ್ವಿ ಅವರು, ಮ್ಯೂಸಿಕ್‌, ಪೇಟಿಂಗ್‌ ಹಾಗೂ ಗಾಯನದಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಗಣಪತಿ ದೇವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಈ ಗಣಪತಿ ಫೋಟೋ ಅತ್ಯಂತ ಸುಂದರವಾಗಿ ಅರಳಿದೆ.

ಸಾನ್ವಿ ಸುದೀಪ್‌ ಅವರು ಗಣಪತಿ ಟ್ಯಾಟೂ ಹಾಕಿಸಲೆಂದು ಹೈದರಾಬಾದ್‌ಗೆ ತೆರಳಿದ್ದರು. ನಾನು ಟ್ಯಾಟೂ ಹಾಕಿಸುವುದಕ್ಕೆ ತುಂಬಾ ಎಕ್ಸೈಟ್‌ಮೆಂಟ್‌ ಆಗಿದ್ದೇನೆ. ತುಂಬಾ ಖುಷಿ ಇದೆ. ಭಾರತದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಬೇರೆ ಬೇರೆ ಬ್ರ್ಯಾಂಚ್‌ಗಳು ಇವೆ. ಆದರೆ ನಾನು ಹೈದರಾಬಾದ್‌ನಲ್ಲಿರುವ ಬ್ರ್ಯಾಂಚ್‌ ಆಯ್ಕೆ ಮಾಡಿದೆ. ಏಕೆಂದರೆ ಈ ಆರ್ಟಿಸ್ಟ್‌ ಟ್ಯಾಟೂನಲ್ಲಿ ಸಾಕಷ್ಟು ಪಳಗಿದ್ದು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಯಾರೇ ಬಂದರೂ ದೀಪ್‌ ಅವರು ತುಂಬಾ ಖುಷಿಯಿಂದ ಸ್ವಾಗತ ಮಾಡುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ವಿಡಿಯೋದಲ್ಲಿ ಸಾನ್ವಿ ಸುದೀಪ್‌ ಅವರು ಹೇಳಿದ್ದಾರೆ.

ಸಾನ್ವಿ ಸುದೀಪ್‌ ಅವರು ಗಣಪತಿ ದೇವರ ಟ್ಯಾಟೂ ಹಾಕಿಸಿಕೊಳ್ಳಲು ಬರೋಬ್ಬರಿ ಎಂಟು ಗಂಟೆಗಳನ್ನು ಕಳೆದಿದ್ದಾರೆ. ಸಾನ್ವಿ ಅವರ ಬೆನ್ನಿನ ಮೇಲೆ ಗಣಪತಿ ದೇವರ ಟ್ಯಾಟೂ ತುಂಬಾ ಆಕರ್ಷಣೆಯಾಗಿ ಬಂದಿದೆ. ನೋಡುಗರಿಗೂ ಟ್ಯಾಟೂ ಬೇಗನೇ ಇಷ್ಟವಾಗುತ್ತದೆ. ಇಂಥಹ ಅಂದವಾದ ಗಣಪತಿ ಟ್ಯಾಟೂ ಹಾಕಿದ್ದಕ್ಕೆ‌ ಆರ್ಟಿಸ್ಟ್‌ ದೀಪ್ ಅವರಿಗೆ ಸಾನ್ವಿ ಅವರು ಬಿಗ್‌ ಥ್ಯಾಂಕ್ಸ್‌ ಹೇಳಿದ್ದಾರೆ. ಇದೊಂದು ಅದ್ಭುತವಾದ ಅನುಭವವಾಗಿತ್ತು. ಹಚ್ಚೆ ಹಾಕಿಸುವುದು ಎಂದರೆ ನನಗೆ ಹೆಚ್ಚು ಇಷ್ಟ ಎಂದು ಸಾನ್ವಿ ಅವರು ಹೇಳಿದ್ದಾರೆ.

ಕಿಚ್ಚ ಸುದೀಪ್‌ ಅವರ ಮಾರ್ಕ್‌ ಸಿನಿಮಾದಲ್ಲಿ ಸಾನ್ವಿ ಅವರು ಮಸ್ತ್‌ ಮಲೈಕಾ ಹಾಡನ್ನು ಹಾಡಿದ್ದರು. ಸಿನಿಮಾ ರಿಲೀಸ್‌ ಆದ ಮೇಲೆ ಈ ಸಾಂಗ್‌ ಬಿಗ್‌ ಹಿಟ್‌ ಆಗಿತ್ತು. ವಿಶೇಷ ಎಂದರೆ ಈ ಸಾಂಗ್‌ಗಾಗಿ ಸಾನ್ವಿ ಸುದೀಪ್‌ ಅವರು ಚಂದನವನ ಫಿಲಂ ಕ್ರಿಟಿಕ್ಸ್‌ ಅವಾರ್ಡ್ಸ್‌ ಕೂಡ ಒಲಿದು ಬಂದಿತ್ತು. ಪ್ರಶಸ್ತಿ ಬಂದ ಅಮೂಲ್ಯ ಕ್ಷಣವನ್ನು ಸಾನ್ವಿ ಅವರು, ತಂದೆ, ತಾಯಿಯೊಂದಿಗೆ ಸಂಭ್ರಮಿಸಿದ್ದರು. ಪ್ರಶಸ್ತಿ ಹಿಡಿದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದರು. ಇದಕ್ಕೆ ಶುಭಾಶಯಗಳು ಕೂಡ ಹರಿದು ಬಂದಿದ್ದವು.

WhatsApp Group Join Now

Spread the love

Leave a Reply