ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ಕಾಲದ ಪರಸ್ಪರ ವೈರಿಗಳು ಇಂದು ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯನ್ನು ಕಂಡು ಸಾಮಾನ್ಯ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ, ಅಂದರೆ 2016ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಕ್ಯಾಮೆರಾ ಮುಂದೆ ಲಂಚ ಪಡೆಯುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸುವೇಂದು ಅಧಿಕಾರಿಯವರನ್ನು ಮೋದಿ ಅಂದು ಲೇವಡಿ ಮಾಡಿದ್ದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮಾತುಗಳನ್ನಾಡುತ್ತಾ ಮೋದಿಯವರು ಅಂದು ಸುವೇಂದು ವಿರುದ್ಧ ಹರಿಹಾಯ್ದಿದ್ದರು. ಇದೀಗ ಸುವೇಂದು ಪಶ್ಚಿಮ ಬಂಗಾಳದ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿಯ ವಿಡಿಯೋ ಮುನ್ನಲೆಗೆ ಬಂದಿದೆ.
ಆದರೆ ಕಾಲಚಕ್ರ ಉರುಳಿದಂತೆ ಇಂದು ಎಲ್ಲವೂ ಉಲ್ಟಾ ಹೊಡೆದಿದೆ. ಅಂದು ಯಾರನ್ನು ಭ್ರಷ್ಟ ಎಂದು ಕರೆದು ಟೀಕಿಸಿದ್ದರೋ, ಇಂದು ಅದೇ ನಾಯಕನಿಗೆ ಮೋದಿಯವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಲು ಹಸಿರು ನಿಶಾನೆ ತೋರಿದ್ದಾರೆ.
ಒಬ್ಬ ನಾಯಕನ ನೈತಿಕತೆಯ ಮೇಲೆ ಪ್ರಶ್ನೆ ಎತ್ತಿದ್ದ ಪ್ರಧಾನಿಯೇ, ಈಗ ಅದೇ ನಾಯಕನ ಹೆಗಲ ಮೇಲೆ ರಾಜ್ಯದ ಜವಾಬ್ದಾರಿ ಹೊರಿಸಿರುವುದು ಒಂದು ವಿಪರ್ಯಾಸವೇ ಸರಿ. ಹತ್ತು ವರ್ಷಗಳ ಹಿಂದೆ ಇದ್ದ ಭ್ರಷ್ಟಾಚಾರದ ಆರೋಪಗಳು ಈಗ ಮಾಯವಾಗಿವೆಯೇ ಅಥವಾ ರಾಜಕೀಯ ಲಾಭದ ಮುಂದೆ ತತ್ವಗಳು ಗೌಣವಾಗಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಒಟ್ಟಿನಲ್ಲಿ ರಾಜಕೀಯ ಪಕ್ಷಗಳ ಸಿದ್ಧಾಂತಗಳು ಮತ್ತು ಆರೋಪಗಳು ಕೇವಲ ಚುನಾವಣಾ ಕಾಲದ ಮಾತಿನ ದಾಟಿಯಾಗಿರುತ್ತವೆಯೇ ಹೊರತು, ಅಧಿಕಾರ ಪ್ರಾಪ್ತಿಯಾದಾಗ ಇವೆಲ್ಲವೂ ಮರೆತು ಹೋಗುತ್ತವೆ ಎಂಬುದಕ್ಕೆ ಈ ಘಟನೆ ಒಂದು ಕನ್ನಡಿಯಂತಿದೆ. ಸದ್ಯ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವುದು ರಾಜ್ಯದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಸದ್ಯ ಪ್ರಧಾನಿ ಮೋದಿ ಅವರ ಈ ಭಾಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಕ್ಯಾಮೆರಾ ಎದುರು ಲಂಚ ತೆಗೆದುಕೊಳ್ಳುವ ಕಳ್ಳ ಸುವೇಂದು ಅಧಿಕಾರಿ – ಮೋದಿ ಹಳೆಯ ಭಾಷಣ ವೈರಲ್!
WhatsApp Group
Join Now