45 ವರ್ಷ ಮೇಲ್ಪಟ್ಟರಿಗೆ ಎಚ್ಚರಿಕೆ: ಬದಲಾದ ಆಹಾರ ಮತ್ತು ಜೀವನಶೈಲಿ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಕಾರಣ.!

Spread the love

ಪ್ರೊಸ್ಟೇಟ್ ಕ್ಯಾನ್ಸರ್ ಈಗ ಬೆಂಗಳೂರು ಒಳಗೊಂಡು ನಗರ ಭಾರತದಲ್ಲಿ ಪುರುಷರನ್ನು ಬಾಧಿಸುತ್ತಿರುವ ಮುಂಚೂಣಿಯ ಕ್ಯಾನ್ಸರ್ ಗಳಲ್ಲಿ ಮುಂಚೂಣಿಯಲ್ಲಿದೆ, ಆದರೂ ಹೆಚ್ಚಾಗಿ ಪತ್ತೆಯಾಗುವುದಿಲ್ಲ ಮತ್ತು ಬಹಳ ಕಡಿಮೆ ತಿಳಿವಳಿಕೆ ಹೊಂದಲಾಗಿದೆ. ಪ್ರಾರಂಭಿಕ ರೋಗ ಲಕ್ಷಣಗಳ ಕೊರತೆಯಿಂದ ದೊಡ್ಡ ಪ್ರಮಾಣದ ರೋಗಿಗಳು ಮುಂದು ವರಿದ ಹಂತಗಳಲ್ಲಿ ಮಾತ್ರ ರೋಗಪರೀಕ್ಷೆಗೆ ಒಳಗಾಗುವುದು, ಚಿಕಿತ್ಸೆಯ ಫಲಿತಾಂಶ ಗಳನ್ನು ನಿಯಂತ್ರಿಸುತ್ತದೆ ಮತ್ತು ರೋಗದ ಹೊರೆಯನ್ನು ಹೆಚ್ಚಿಸುತ್ತದೆ.

ಬೆಂಗಳೂರಿನಲ್ಲಿ ತೀವ್ರವಾಗಿ ಬದಲಾಗುತ್ತಿರುವ ಆಹಾರದ ಅಭ್ಯಾಸಗಳು ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ತೊಂದರೆ ಹೆಚ್ಚಾಗುವಲ್ಲಿ ಪ್ರಮಕಾರಣವಾಗಿದ್ದು ವೈದ್ಯರು ಸಾಂಪ್ರದಾಯಿಕ ಆಹಾರಗಳಿಂದ ಸಂಸ್ಕರಿಸಿದ ಮತ್ತು ಹೆಚ್ಚಿನ ಕೊಬ್ಬಿನ ಅಂಶದ ಆಹಾರಗಳು ಮೌನವಾಗಿ ಗಮನಾರ್ಹ ಆರೋಗ್ಯದ ಕಾಳಜಿಯನ್ನು ಸೃಷ್ಟಿಸುತ್ತಿವೆ.

ಬೇಳೆ ಕಾಳು, ತರಕಾರಿಗಳು ಮತ್ತು ಅರಿಶಿನ ಹೆಚ್ಚಾಗಿ ಬಳಸುತ್ತಿದ್ದ ಸಮತೋಲನದ ಭೋಜನವು ಈಗ ಹೆಚ್ಚಾಗಿ ಕೆಂಪು ಮಾಂಸ, ಪರಿಷ್ಕರಿಸಿದ ಕಾರ್ಬೊಹೈಡ್ರೇಟ್ ಗಳು ಮತ್ತು ಪ್ಯಾಕೇಜ್ಡ್ ಫುಡ್ ಗಳಿಗೆ ಹೊರಳಿದ್ದು ಇದಕ್ಕೆ ಪೂರಕವಾಗಿ ನಿಷ್ಕ್ರಿಯ, ಮೇಜಿಗೆ ಸೀಮಿತ ವಾದ ಜೀವನಶೈಲಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರೊಸ್ಟೇಟ್ ಕ್ಯಾನ್ಸರ್ ಈಗ ಬೆಂಗಳೂರು ಒಳಗೊಂಡು ನಗರ ಭಾರತದಲ್ಲಿ ಪುರುಷರನ್ನು ಬಾಧಿಸುತ್ತಿರುವ ಮುಂಚೂಣಿಯ ಕ್ಯಾನ್ಸರ್ ಗಳಲ್ಲಿ ಮುಂಚೂಣಿಯಲ್ಲಿದೆ, ಆದರೂ ಹೆಚ್ಚಾಗಿ ಪತ್ತೆಯಾಗುವುದಿಲ್ಲ ಮತ್ತು ಬಹಳ ಕಡಿಮೆ ತಿಳಿವಳಿಕೆ ಹೊಂದಲಾಗಿದೆ. ಪ್ರಾರಂಭಿಕ ರೋಗ ಲಕ್ಷಣಗಳ ಕೊರತೆಯಿಂದ ದೊಡ್ಡ ಪ್ರಮಾಣದ ರೋಗಿಗಳು ಮುಂದು ವರಿದ ಹಂತಗಳಲ್ಲಿ ಮಾತ್ರ ರೋಗಪರೀಕ್ಷೆಗೆ ಒಳಗಾಗುವುದು, ಚಿಕಿತ್ಸೆಯ ಫಲಿತಾಂಶ ಗಳನ್ನು ನಿಯಂತ್ರಿಸುತ್ತದೆ ಮತ್ತು ರೋಗದ ಹೊರೆಯನ್ನು ಹೆಚ್ಚಿಸುತ್ತದೆ.

“ನಾವು ಗಮನಿಸುತ್ತಿರುವುದೇನೆಂದರೆ, ಜೀವನಶೈಲಿ ವಿಧಾನಗಳು ಮತ್ತು ಕ್ಯಾನ್ಸರ್ ರಿಸ್ಕ್ ನಡುವೆ ಇರುವ ನೇರ ಸಂಬಂಧ” ಎಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಡಾ.ನಿತಿ ರೈಝಾದಾ ಹೇಳುತ್ತಾರೆ. “ಸಾಂಪ್ರದಾಯಿಕ ದಕ್ಷಿಣ ಭಾರತದ ಆಹಾರದಲ್ಲಿ ಹಲವಾರು ರೋಗತಡೆಯ ಅಂಶಗಳಿವೆ, ಮುಖ್ಯವಾಗಿ ಸಸ್ಯಜನ್ಯ ಆಹಾರಗಳ ಹೆಚ್ಚಿನ ಸೇವನೆ ಮತ್ತು ಉರಿಯೂತ ನಿರೋಧಕ ಸಂಯುಕ್ತಗಳಾದ ಕರ್ಕ್ಯುಮಿನ್ ಮತ್ತು ನೈಸರ್ಗಿಕ ಮೂಲಗಳನ್ನು ಹೊಂದಿರುತ್ತವೆ.

ಸಂಸ್ಕರಿಸಿದ ಆಹಾರದ ಮೇಲೆ ಹೆಚ್ಚಿನ ಆಧಾರಪಡುವಿಕೆ, ಕೆಂಪು ಮಾಂಸದ ಹೆಚ್ಚಿನ ಸೇವನೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಕುಂಠಿತದಿಂದ ಪುರುಷರು ಕಾಲ ಕಳೆದಂತೆ ಹೆಚ್ಚಿನ ರಿಸ್ಕ್ ಗೆ ಒಳಗಾಗುತ್ತಾರೆ. ನಿಜವಾದ ಪ್ರಗತಿ ಎಂದರೆ ಅದು ಮೌನವಾಗಿರುತ್ತದೆ ಮತ್ತು ತಡವಾಗಿ ಪತ್ತೆಯಾಗುತ್ತದೆ” ಎಂದರು.

ವೈಜ್ಞಾನಿಕ ಸಾಹಿತ್ಯವು ಈ ಪ್ರವೃತ್ತಿಯನ್ನು ಬೆಂಬಲಿಸುತ್ತದೆ. ಕರ್ಕ್ಯುಮಿನ್ ನೈಸರ್ಗಿಕ ಮೂಲಗಳಿಂದ ಬರುತ್ತದೆ, ಅರಿಶಿನದಲ್ಲಿ ಈ ಬಯೋಆಕ್ಟಿವ್ ಸಂಯುಕ್ತವಿದ್ದು ಇದು ಪ್ರೊಸ್ಟೇಟ್ ಕ್ಯಾನ್ಸರ್ ಜೀವಕಣ ಬೆಳೆಯುವುದನ್ನು ತಡೆಯುವುದಲ್ಲದೆ ಬ್ರೊಕೊಲಿ ಮತ್ತು ಕ್ಯಾಬೇಜ್ ಗಳಂತಹ ತರಕಾರಿಗಳು ಹೆಚ್ಚಿನ ರಕ್ಷಣಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಇದಕ್ಕೆ ಭಿನ್ನವಾಗಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಪ್ರಾಣಿಯ ಪ್ರೊಟೀನ್ ಹೊಂದಿ ರುವ ಆಹಾರವು ಸತತವಾಗಿ ಪ್ರೊಸ್ಟೆಟ್ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಭಾರತವು ವಾರ್ಷಿಕ ಹೊಸ 47,000 ಪ್ರೊಸ್ಟೇಟ್ ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡು ತ್ತಿದ್ದು ಅದರಲ್ಲಿ ಬಹಳಷ್ಟು ಪ್ರಮಾಣವು ಚಿಕಿತ್ಸೆಯ ಹಂತ ದಾಟಿ ಹೋಗಿರುತ್ತದೆ. ಪ್ರಾರಂಭಿಕ ಹಂತದ ಪ್ರೊಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಸಾಧ್ಯವಾಗಿದ್ದು ಅದು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಜೀವನದ ಗುಣಮಟ್ಟ ಸಂರಕ್ಷಿಸು ತ್ತದೆ.

ಮೊದಲೇ ರೋಗಪರೀಕ್ಷೆ ಮಾಡುವ ಪ್ರಾಮುಖ್ಯತೆ ಕುರಿತು ಡಾ.ರೈಝಾದಾ, “ಸೆರಂ ಪಿ.ಎಸ್.ಎ. ಟೆಸ್ಟಿಂಗ್ ಮತ್ತು ಡಿಜಿಟಲ್ ರೆಕ್ಟಲ್ ಎಕ್ಸಾಮಿನೇಷನ್ (ಡಿ.ಆರ್.ಇ.)ಗಳ ಸಂಯೋಜನೆಯಿಂದ ರೋಗಲಕ್ಷಣಗಳು ಉಂಟಾಗುವ ಎಷ್ಟೋ ಮೊದಲು ಪ್ರೊಸ್ಟೇಟ್ ಸಮಸ್ಯೆಗಳನ್ನು ಕಂಡುಕೊಳ್ಳಬಹುದು.

45 ವರ್ಷ ವಯಸ್ಸು ದಾಟಿದ ಪುರುಷರು ಅಥವಾ ಕುಟುಂಬದ ಇತಿಹಾಸ ಹೊಂದಿದವರು ನಿಯಮಿತ ಪರೀಕ್ಷೆಗೆ ಒಳಪಡಬೇಕು. ಸಕಾಲಿಕ ರೋಗಪರೀಕ್ಷೆಯು ಫಲಿತಾಂಶಗಳನ್ನು ಸುಧಾರಿಸುತ್ತದೆ ಮತ್ತು ರೋಗ ವಿಸ್ತರಿಸುವ ಹೊರೆಯನ್ನು ಕಡಿಮೆ ಮಾಡುತ್ತದೆ” ಎಂದರು.

ಬೆಂಗಳೂರು ವೇಗದ ನಗರ ಕೇಂದ್ರವಾಗಿ ವಿಕಾಸಗೊಳ್ಳುತ್ತಿದ್ದು ಪರಿಣಿತರು ಪುರುಷರ ಆರೋಗ್ಯ, ರೋಗ ತಡೆಯ ಪರೀಕ್ಷೆ ಮತ್ತು ಸಮತೋಲನದ ಆಹಾರದ ರೂಢಿಗಳಿಗೆ ವಿವೇಚನಾಯುಕ್ತ ಮರಳುವಿಕೆ ಸುತ್ತಲೂ ಹೆಚ್ಚಿನ ಅರಿವು ಅಗತ್ಯ ಎಂದು ಹೇಳುತ್ತಾರೆ.

WhatsApp Group Join Now

Spread the love

Leave a Reply