ಒಟ್ಟಿಗೆ ಮಕ್ಕಳು ಮಾಡಿಕೊಂಡು ಈಗ ರೇಪ್‌ ಎಂದರೆ ಹೇಗೆ? ಲಿವಿನ್ ಸಂಬಂಧದಲ್ಲಿದ್ದ ಯುವತಿಗೆ ಸುಪ್ರೀಂ ಕೋರ್ಟ್ ಚಾಟಿ!

Spread the love

ಸಹಜೀವನ ಕಡಿದುಕೊಳ್ಳುವುದು ತನ್ನಷ್ಟಕ್ಕೆ ತಾನೇ ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮದುವೆಯ ಭರವಸೆ ನೀಡಿ ಅತ್ಯಾಚಾರ ಮತ್ತು ಹಲ್ಲೆ ನಡೆಸಲಾಗಿದೆ ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠವು, ಮದುವೆಯ ಬಂಧವಿಲ್ಲದ ಇಂತಹ ಸಂಬಂಧಗಳಲ್ಲಿ ಅಂತರ್ಗತವಾಗಿ ಕೆಲವು ಅಪಾಯಗಳಿರುತ್ತವೆ ಎಂದು ಎಚ್ಚರಿಸಿದೆ.

ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, “ಮಹಿಳೆಯು ಮದುವೆಯಿಲ್ಲದೆಯೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ಮಗುವನ್ನೂ ಪಡೆದಿದ್ದಾರೆ, ಆದರೆ ಈಗ ಸಂಬಂಧ ಮುರಿದುಬಿದ್ದ ಮೇಲೆ ಅತ್ಯಾಚಾರ ಮತ್ತು ಹಲ್ಲೆಯ ಆರೋಪ ಮಾಡುತ್ತಿದ್ದಾರೆ, ಇದೇನಿದು?” ಎಂದು ಪ್ರಶ್ನಿಸಿದ್ದಾರೆ.

ವಯಸ್ಕರು ಸಮ್ಮತಿಯಿಂದ ದೀರ್ಘಕಾಲ ಒಟ್ಟಿಗೆ ವಾಸಿಸಿದ ನಂತರ ಸಂಬಂಧ ಹಳಸಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಮದುವೆಯ ಹೊರಗಿನ ಸಂಬಂಧಗಳು ಕಡಿದುಕೊಂಡಾಗ ಮಹಿಳೆಯರು ಪುರುಷರ ಮೇಲೆ ಇಂತಹ ದೂರು ದಾಖಲಿಸುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ, ಸಮ್ಮತಿಯ ಸಂಬಂಧ ಮತ್ತು ಕ್ರಿಮಿನಲ್ ಅಪರಾಧದ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದೆ.

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “ಮದುವೆಯಾಗದೆ ವ್ಯಕ್ತಿಯೊಂದಿಗೆ ವಾಸಿಸಲು ಮತ್ತು ಮಗು ಪಡೆಯಲು ಮಹಿಳೆಯು ಏಕೆ ನಿರ್ಧರಿಸಿದರು?” ಎಂದು ಪ್ರಶ್ನಿಸಿದರು. ಆರೋಪಿಯು ಇತರ ಮಹಿಳೆಯರಿಗೂ ಇದೇ ರೀತಿ ವಂಚಿಸಿದ್ದಾನೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ, “ನ್ಯಾಯಾಲಯವು ಕೇವಲ ಈ ಅರ್ಜಿದಾರರ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ಗಮನ ಹರಿಸುತ್ತದೆ” ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

WhatsApp Group Join Now

Spread the love

Leave a Reply