ಸಾಮಾನ್ಯವಾಗಿ ನಾವು ಮದ್ಯ ಸೇವಿಸಿದಾಗ ಅದು ಬಾಯಿಯ ಮೂಲಕ ಜಠರವನ್ನು ತಲುಪಿ, ಅಲ್ಲಿಂದ ರಕ್ತಪ್ರವಾಹಕ್ಕೆ ಸೇರುತ್ತದೆ. ನಾವು ಆಹಾರ ಸೇವಿಸಿ ಮದ್ಯಪಾನ ಮಾಡಿದರೆ, ಜಠರದಲ್ಲಿರುವ ಆಹಾರವು ಆಲ್ಕೋಹಾಲ್ ರಕ್ತಕ್ಕೆ ಸೇರುವ ವೇಗವನ್ನು ತಡೆಯುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿದಾಗ, ಆಲ್ಕೋಹಾಲ್ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಸಣ್ಣ ಕರುಳನ್ನು ತಲುಪುತ್ತದೆ ಮತ್ತು ಕೇವಲ 5 ರಿಂದ 10 ನಿಮಿಷಗಳಲ್ಲೇ ರಕ್ತದ ಮೂಲಕ ಮೆದುಳಿಗೆ ಲಗ್ಗೆ ಇಡುತ್ತದೆ.
ಇದರಿಂದ ವ್ಯಕ್ತಿಗೆ ಅತಿಯಾದ ಅಮಲು ಏರುವುದಲ್ಲದೆ, ತಲೆತಿರುಗುವಿಕೆ ಮತ್ತು ವಾಂತಿಯಂತಹ ಸಮಸ್ಯೆಗಳು ತಕ್ಷಣವೇ ಕಾಣಿಸಿಕೊಳ್ಳುತ್ತವೆ.
ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಹೊಟ್ಟೆ ತುಂಬ ಆಹಾರ ಸೇವಿಸಿದ ನಂತರ ಮದ್ಯಪಾನ ಮಾಡುವುದರಿಂದ ದೇಹವು ಆಲ್ಕೋಹಾಲ್ ಹೀರಿಕೊಳ್ಳುವ ಪ್ರಮಾಣವು ಶೇಕಡಾ 75 ರಷ್ಟು ಕಡಿಮೆಯಾಗುತ್ತದೆ. ಹೊಟ್ಟೆ ಖಾಲಿ ಇದ್ದಾಗ ಮದ್ಯವು ನೇರವಾಗಿ ಜಠರದ ಒಳಪದರದ ಮೇಲೆ ಪರಿಣಾಮ ಬೀರಲಾರಂಭಿಸುತ್ತದೆ, ಇದು ದೀರ್ಘಕಾಲದ ಗ್ಯಾಸ್ಟ್ರಿಟಿಸ್ ಮತ್ತು ಅಲ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇದರೊಂದಿಗೆ ಮದ್ಯಪಾನವು ಯಕೃತ್ತು, ಮೂತ್ರಪಿಂಡ ಮತ್ತು ಶ್ವಾಸಕೋಶದಂತಹ ಪ್ರಮುಖ ಅಂಗಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಒಬ್ಬ ವ್ಯಕ್ತಿಯ ವಯಸ್ಸು, ತೂಕ ಮತ್ತು ಚಯಾಪಚಯ ಕ್ರಿಯೆಯ ಆಧಾರದ ಮೇಲೆ ಈ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ.
ಹೀಗಾಗಿ ಮದ್ಯಪಾನ ಮಾಡುವವರು ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಉತ್ತಮ. ಎಣ್ಣೆಯುಕ್ತ ಅಥವಾ ಅತಿಯಾದ ಮಸಾಲೆ ಪದಾರ್ಥಗಳ ಬದಲು ಹಿತವಾದ ಆಹಾರವನ್ನು ಸೇವಿಸುವುದರಿಂದ ಜಠರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಮದ್ಯಪಾನದ ಸಮಯದಲ್ಲಿ ಅತಿಯಾದ ಅಸ್ವಸ್ಥತೆ ಅಥವಾ ವಾಕರಿಕೆ ಕಂಡುಬಂದರೆ ತಕ್ಷಣವೇ ಅದನ್ನು ನಿಲ್ಲಿಸುವುದು ಆರೋಗ್ಯದ ದೃಷ್ಟಿಯಿಂದ ಕ್ಷೇಮ. ಅಂತಿಮವಾಗಿ, ಮದ್ಯಪಾನವು ಆರೋಗ್ಯಕ್ಕೆ ಎಂದಿಗೂ ಹಾನಿಕಾರಕವಾಗಿದ್ದು, ಇಂತಹ ಅಪಾಯಕಾರಿ ಅಭ್ಯಾಸಗಳಿಂದ ದೂರವಿರುವುದೇ ಸದೃಢ ಆರೋಗ್ಯಕ್ಕೆ ದಾರಿಯಾಗಿದೆ.
ಮದ್ಯ ಪ್ರಿಯರೇ.. ಖಾಲಿ ಹೊಟ್ಟೆಯಲ್ಲಿ ಎಣ್ಣೆ ಹಾಕುವ ಅಭ್ಯಾಸ ನಿಮಗಿದೆಯೇ? ಹಾಗಿದ್ರೆ ಮನೆ ಮುಂದೆ ಹೊಗೆ ಫಿಕ್ಸ್
WhatsApp Group
Join Now