ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದೆ ಇಂದು ಎಂಬ ತಪ್ಪು ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಆದರೆ ಈ ರೀತಿ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇನ್ನೂನಡೆಯುತ್ತಿದೆ. ಇದನ್ನು ಪೂರ್ಣಗೊಳ್ಳಲು ಕಾಲಾವಕಾಶ ಬೇಕಿದೆ. ಹೀಗಾಗಿ 10ನೇ ತರಗತಿ ಫಲಿತಾಂಶದ ಬಗ್ಗೆ ಮಂಡಳಿ ಅಧಿಕೃತ ಮಾಹಿತಿ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದೆ.
SSLC ರಿಸಲ್ಟ್ ಯಾವಾಗ?
ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಗಳ ಪ್ರಕಾರ, ವಿದ್ಯಾರ್ಥಿಗಳು ಬರೆದಿರುವ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ನಡೆಯುತ್ತಿದೆ. ಫಲಿತಾಂಶ ಪ್ರಕಟವಾಗಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿದೆ ಎಂದು ಹೇಳಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ, ಏಪ್ರಿಲ್ 23ರ ನಂತರವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಇದೀಗ ಹರಿದಾಡುತ್ತಿರುವ ವಿಚಾರಗಳು ಸಂಪೂರ್ಣ ಸುಳ್ಳು ಆಗಿದ್ದು, ಇದಕ್ಕೆ ವಿದ್ಯಾರ್ಥಿಗಳು ಅತವಾ ಪೋಷಕರು ಯಾವುದೇ ರೀತಿಲ್ಲಿ ತಲೆಕೊಡಬಾರದು ಎಂದು ಮಂಡಳಿ ಮನವಿ ಮಾಡಿದೆ. ಇನ್ನು., ಫಲಿತಾಂಶ ಒಮ್ಮೆ ಘೋಷಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಲು ಮತ್ತು ಡಿಜಿಲಾಕರ್ ಮತ್ತು ಉಮಂಗ್ ಅಪ್ಲಿಕೇಶನ್ ಮೂಲಕ ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
SSLC ಫಲಿತಾಂಶ ನೋಡುವುದು ಹೇಗೆ?
* ಮೊದಲಿಗೆ CBSE ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಲಾಗ್ ಇನ್ ಆಗಿ.
* ಇದೀಗ ಈ ವೆಬ್‌ಸೈಟ್ ಓಪನ್ ಆದ ತಕ್ಷಣ ಕಾಣುವ ‘Secondary School Examination (Class X) Results 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಂತರ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ರೋಲ್ ನಂಬರ್, ಸ್ಕೂಲ್ ನಂಬರ್ ಮತ್ತು ಐಡಿ ಕಾರ್ಡ್ ಐಡಿಅನ್ನು ನಮೂದಿಸಿ.
* ಇದೀಗ ತುಂಬಿದ ನಂತರ ಒಮ್ಮೆ ಎಲ್ಲವೂ ಸರಿಯಾಗಿದೆಯೇ ಎಂದು ಚೆಕ್ ಮಾಡಿ ನಂತರ ಕೆಳಗಿನ ಸಬ್ಲಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
* ಇದೀಗ ನಿಮ್ಮ SSLC ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ.
* ನಂತರ ಮುಂದಿನ ಯಾವುದೇ ಬಳಕೆಗಾಗಿ ಅಂಕಪಟ್ಟಿಯನ್ನು ಡೌನ್‌ಲೌಡ್ ಮಾಡಿಟ್ಟುಕೊಳ್ಳಿ.
ರಿಸಲ್ಟ್ ಚೆಕ್ ಮಾಡಲಿರುವ ಅಧಿಕೃತ ವೆಬ್‌ಸೈಟ್‌ಗಳು:
ಕರ್ನಾಟಕ ಶಿಕ್ಷಣ ಇಲಾಖೆ ಮಕ್ಕಳಿಗೆ SSLC ಫಲಿತಾಂಶ ತಿಳಿದುಕೊಳ್ಳಲು 2 ಅಧಿಕೃತ ಲಿಂಕ್‌ಗಳನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ಕೆಳಗಿನ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾತ್ರ ತಮ್ಮ ಫಲಿತಾಂಶ ಪಡೆಯುವ ಮೂಲಕ ಯಾವುದೇ ಅನಧಿಕೃತ ಲಿಂಕ್‌ಗಳಿಂದಾಗುವ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.
karresults.nic.in
kseab.karnataka.gov.in
ಡಿಜಿಲಾಕರ್‌ನಲ್ಲಿ SSLC ಫಲಿತಾಂಶ 2026 ಅನ್ನು ಹೇಗೆ ಪರಿಶೀಲಿಸುವುದು?
* ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಗಳನ್ನು ಡಿಜಿಲಾಕರ್ ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು
* ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ತೆರೆಯಿರಿ.
* ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಬಳಸಿ ಸೈನ್ ಇನ್ ಮಾಡಿ.
* “ಶಿಕ್ಷಣ” ವಿಭಾಗಕ್ಕೆ ಹೋಗಿ.
* ನಿಮ್ಮ ರಾಜ್ಯ ಮಂಡಳಿಯನ್ನು ಆಯ್ಕೆಮಾಡಿ
* ನಿಮ್ಮ ರೋಲ್ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ
* ಡಿಜಿಲಾಕರ್ ಹೆಚ್ಚಿನ ಅಧ್ಯಯನಗಳಿಗೆ ಮಾನ್ಯವಾಗಿರುವ ಅಧಿಕೃತವಾಗಿ ಪರಿಶೀಲಿಸಿದ ಅಂಕಪಟ್ಟಿಗಳನ್ನು ಒದಗಿಸುತ್ತದೆ.
SSLC Results 2026 : ವಿದ್ಯಾರ್ಥಿಗಳ ಗಮನಕ್ಕೆ… ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಗ್ಗೆ KSEAB ಮಹತ್ವದ ಮಾಹಿತಿ
WhatsApp Group
Join Now