ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರ್ನಾಟಕದಲ್ಲಿ (Karnataka) ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಗಳನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದ್ರೆ ಕರ್ನಾಟಕದಲ್ಲಿ ಈ ಯೋಜನೆ ವಿಫಲವಾಗಿದ್ದು, HSRP ನಂಬರ್ ಪ್ಲೇಟ್ ಅಳವಡಿಕೆಯನ್ನೇ ಕೈ ಬಿಡಲಾಗಿದೆ.
ಬೇರೆ ರಾಜ್ಯಗಳಲ್ಲಿ ಸಕ್ಸಸ್ ಕಂಡ ಈ ಯೋಜನೆ ಕರ್ನಾಟಕದಲ್ಲಿ ಫ್ಲಾಪ್ ಆಗಿದ್ದು ಯಾಕೆ?
ರಾಜ್ಯದ ವಾಹನ ಸವಾರರಿಗೆ ರಿಲೀಫ್!
ವಾಹನಗಳ ಅಧಿಕೃತತೆ ಹಾಗೂ ಯಾವುದೇ ವಂಚನೆ ಚಟುವಟಿಕೆಗಳನ್ನು ತಡೆಯುವುದು ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿತ್ತು. ಆದ್ರೆ ಈ ನಿಯಮಕ್ಕೆ ಬ್ರೇಕ್ ಬಿದ್ದಿದ್ದು, ಇನ್ಮೇಲೆ HSRP ನಂಬರ್ ಪ್ಲೇಟ್ ಕಡ್ಡಾಯವಿಲ್ಲ ಎಂದು ಇಲಾಖೆ ಸೂಚನೆ ನೀಡಿದೆ.
ಡೆಡ್ಲೈನ್ ಕೊಟ್ಟರೂ ನೋ ಯೂಸ್
ಸಾರಿಗೆ ಇಲಾಖೆಯ ‘ಬ್ರಹ್ಮಾಸ್ತ್ರ’ಕ್ಕೆ ರಾಜ್ಯದ ಜನರು ಮಣೆ ಹಾಕಿಲ್ಲ. HSRP ಆಳವಡಿಕೆಗೆ 1.41 ಕೋಟಿ ವಾಹನ ಸವಾರರ ನಿರಾಸಕ್ತಿ ತೋರಿದ ಹಿನ್ನೆಲೆ HSRP ಜಾರಿಯಲ್ಲಿ ರಾಜ್ಯ ಸರ್ಕಾರ ಫೈಲ್ಯೂರ್ ಆಗಿದೆ ಎನ್ನಲಾಗ್ತಿದೆ. ಎಂಟು ಬಾರಿ ಡೆಡ್ ಲೈನ್ ಕೊಟ್ಟರೂ ಪ್ರಯೋಜನವಾಗಿಲ್ಲ. ಬಹುತೇಕರು ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಮುಂದಾಗಿಲ್ಲ ಎಂದು ವರದಿ ಹೇಳ್ತಿದೆ.
ಕರ್ನಾಟಕದಲ್ಲಿ ಮಾತ್ರ ಫ್ಲಾಪ್
ಬೇರೆ ರಾಜ್ಯಗಳಲ್ಲಿ ಸಕ್ಸಸ್ ಕಂಡಿರೋ ಈ ಯೋಜನೆ ಕರ್ನಾಟಕದಲ್ಲಿ ಮಾತ್ರ ಫ್ಲಾಪ್ ಆಗಿದೆ. ಯೋಜನೆಯ ಜಾರಿಯಲ್ಲೂ ಕೆಲ ಗೊಂದಲವಿದ್ದು, ಅನುಷ್ಠಾನದಲ್ಲೂ ವಿಫಲವಾಗಿದೆ. ಇದನ್ನ ವಾಹನ ಸವಾರರ ಗೆಲುವು, ಇಲಾಖೆಯ ಸೋಲು ಅಂದ್ರು ತಪ್ಪಾಗೋದಿಲ್ಲ.
ಸಾರಿಗೆ ಇಲಾಖೆ ಆದೇಶ ವಾಪಸ್
ಸಾರಿಗೆ ಇಲಾಖೆಯ ಎರಡು ವರ್ಷದ ಪ್ರಯತ್ನಕ್ಕೆ ತಣ್ಣೀರು ಎರಚಿದಂತಾಗಿದೆ. HSRP ಗುಡ್ ಬೈ ಹೇಳಿದ ಸಾರಿಗೆ ಇಲಾಖೆ ತನ್ನ ಆದೇಶವನ್ನ ವಾಪಸ್ ಪಡೆದಿದೆ. ಎಷ್ಟೇ ಡೆಡ್ ಡೈನ್ ಕೊಟ್ಟರು HSRP ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋರಿಸಿಲ್ಲ.
ಸಾರಿಗೆ ಇಲಾಖೆ ಎಡವಿದ್ದೆಲ್ಲಿ?
HSRP ಆಳವಡಿಕೆ ಕಡ್ಡಾಯ ಮಾಡೋದ್ರಲ್ಲಿ ಸಾರಿಗೆ ಇಲಾಖೆ ಎಡವಿದ್ದೆಲ್ಲಿ ಎನ್ನುವ ಪ್ರಶ್ನೆ ಮೂಡಿದೆ. ಪದೇ ಪದೆ ಹೆಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಮಾಡಲಾಯ್ತು, ಹೀಗಾಗಿ ಹೆಚ್‌ಎಸ್ ಆರ್ಪಿ ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋರಲಿಲ್ಲ. 2019 ಏಪ್ರಿಲ್-1 ರ ಮೊದಲು ನೋಂದಣಿಯಾದ ವಾಹನಕ್ಕೆ ಹೆಚ್‌ಎಸ್‌ಆರ್ಪಿ ಕಡ್ಡಾಯ ಎಂದು ಇಲಾಖೆ ಹೇಳಿತ್ತು.
1.41ಕೋಟಿ ವಾಹನಗಳು ಆಳವಡಿಸಿಲ್ಲ
2 ಕೋಟಿ ಹಳೆ ವಾಹನಗಳಲ್ಲಿ 59 ಲಕ್ಷ ವಾಹನಗಳು ಅಷ್ಟೇ ಹೆಚ್‌ಎಸ್‌ಆರ್ಪಿ ಆಳವಡಿಕೆ ಮಾಡಿದೆ. ಇನ್ನೂ 1.41ಕೋಟಿ ವಾಹನಗಳು ಆಳವಡಿಸಿಲ್ಲ. ಹೀಗಾಗಿ ಈ ಯೋಜನೆಯನ್ನ ಕೈಬಿಡಲಾಗಿದೆ. ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ತಡೆಗಟ್ಟಬಹುದು ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇಲಾಖೆ ಮುಂದಾಗಿತ್ತು. ಆದ್ರೆ ಇದೀಗ ಆದೇಶ ವಾಪಸ್ ಪಡೆಯಲಾಗಿದೆ ಎಂದು ಸಾರಿಗೆ ಇಲಾಖೆ ಅಪರ ಆಯುಕ್ತರ ಮಾಹಿತಿ ನೀಡಿದ್ದಾರೆ.
ರಾಜ್ಯದ ವಾಹನ ಸವಾರರಿಗೆ ಬಿಗ್ ರಿಲೀಫ್; ಇನ್ಮುಂದೆ ಈ ನಂಬರ್ ಪ್ಲೇಟ್ಗಳು ಕಡ್ಡಾಯವಲ್ಲ
WhatsApp Group
Join Now