ಅದಾನಿ ಜೀ ಕಂಪನಿಗೆ ಹೋಗಿ ನೋಡಿ. ಅಲ್ಲಿ ಯಾರೊಬ್ಬರೂ ದಲಿತರು ಮೇಲ್ದರ್ಜೆಯ ಅಧಿಕಾರದಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ. ಖಾನ್ಸಿ ರಾಮ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಮಾತನಾಡಿದ್ದರು.
ಈ ವೇಳೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಆಡಳಿತವಿದೆ ಎಂದಿದ್ದಾರೆ.
‘ಅದಾನಿ ಕಂಪನಿಯನ್ನೇ ತೆಗೆದುಕೊಳ್ಳಿ. ಅಲ್ಲಿ ಯಾರಾದರೂ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಸಿಇಒ ಅಥವಾ ಮೇಲ್ದರ್ಜೆಯ ಅಧಿಕಾರಿಗಳು ಸಿಗುತ್ತಾರಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅಪೋಲೋ ಆಸ್ಪತ್ರೆಯಲ್ಲಿ ದಲಿತ, ಹಿಂದುಳಿದ ವರ್ಗದ ವೈದ್ಯರು ಸಿಗುತ್ತಾರಾ? ಮೀಸಲಾತಿ ಎನ್ನುವುದು ಕೇವಲ ಸರ್ಕಾರಿ ವಲಯಕ್ಕಷ್ಟೇ ಸೀಮಿತವಾಗಿದೆ. ಖಾಸಗಿ ವಲಯದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಆದರೆ ಅವರ ಹೇಳಿಕೆ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಖಾಸಗಿ ವಲಯದಲ್ಲೂ ಮೀಸಲಾತಿ ನೀಡಿದರೆ ಪ್ರತಿಭೆಗೆ ಎಲ್ಲಿ ಬೆಲೆ? ಈ ವ್ಯಕ್ತಿ ಏನು ಮಾತನಾಡುತ್ತಿದ್ದಾರೆ ಎಂಬ ಅರಿವಿದೆಯೇ ಎಂದು ಕೆಲವರು ಕಿಡಿ ಕಾರಿದ್ದಾರೆ. ಅದಾನಿ ಕಂಪನಿ ಅವರ ಖಾಸಗಿ ಕಂಪನಿ. ಅಲ್ಲಿ ಕೆಲಸಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಅವರ ನಿರ್ಧಾರವಾಗಿರುತ್ತದೆ ಎಂದು ಟ್ರೋಲ್ ಮಾಡಿದ್ದಾರೆ.
ಅದಾನಿ ಕಂಪನಿಯಲ್ಲಿ ಯಾರೊಬ್ಬರೂ ದಲಿತರು ಮೇಲಧಿಕಾರಿಗಳು ಸಿಗಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ
WhatsApp Group
Join Now