Horoscope Today : 10 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ಆಧ್ಯಾತಿಕ ಸಾಮರ್ಥ್ಯವು ಇಂದು ನಿಮ್ಮ ದಿನವನ್ನು ವಿಶಿಷ್ಟವಾಗಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಅತೀಂದ್ರಿಯ ಮತ್ತು ನಿಸರ್ಗಾತೀತ ವಿಚಾರಗಳ ಬಗ್ಗೆ ಆಕರ್ಷಿತರಾಗುತ್ತೀರಿ. ಆಧ್ಯಾತ್ಮಿಕದಲ್ಲಿ ಸಫಲತೆಯನ್ನು ಪಡೆಯುವಿರಿ. ನಿಂದನೆಯ ನಿಯಂತ್ರಣ ಮತ್ತು ನಾಲಗೆಯ ಮೇಲಿನ ಹಿಡಿತವು ಅತ್ಯಗತ್ಯ. ಸಾಧ್ಯವಿದ್ದರೆ, ಹೊಸ ಯೋಜನೆಗಳ ಪ್ರಾರಂಭವನ್ನು ಮತ್ತ ಪ್ರಯಾಣವನ್ನು ತಪ್ಪಿಸಿ..

ವೃಷಭ :-

ಗಣೇಶನ ದಯೆಯಿಂದ ನೀವು ಇಂದು ಕುಟುಂಬ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ನೀವು ನಿಮ್ಮ ಕುಟುಂಬ ಹಾಗೂ ಪ್ರೀತಿಪಾತ್ರರೊಂದಿಗೆ ಉಲ್ಲಾಸದ ವಾತಾವರಣದಲ್ಲಿ ಖುಷಿಯಿಂದ ಭೋಜನ ಮಾಡುವಿರಿ. ನೀವು ಸಣ್ಣ ಪ್ರವಾಸಕ್ಕೂ ಸಿದ್ಧತೆಗೊಳಿಸಬಹುದು. ವಿದೇಶದಲ್ಲಿ ನೆಲೆಸಿರುವ ಸಂಬಂಧಿಗಳಿಂದ ಬರುವ ಸುದ್ದಿಗಳು ನಿಮ್ಮನ್ನು ಸಂತಸದಲ್ಲಿರಿಸಲಿವೆ. ಲಕ್ಷ್ಮೀದೇವಿಯು ತನ್ನ ಅನುಗ್ರಹದ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾಳೆ.

ಮಿಥುನ :-

ಈ ದಿನವು ಶುಭಕರ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬದ ವಾತಾವರಣವು ಉಲ್ಲಾಸ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ ಇದು ನಿಮಗೆ ಅದೃಷ್ಟ ಮತ್ತು ಖ್ಯಾತಿಯನ್ನು ತರಲಿದೆ. ಹಣಕಾಸು ಲಾಭ ಉಂಟಾಗಲಿದೆ. ಖರ್ಚಿನಲ್ಲಿ ಹೆಚ್ಚಳ ಉಂಟಾಗಬಹುದು ಆದರೆ, ನೀವು ಸರಿಯಾಗಿಯೇ ಬಳಸಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ದಿನಪೂರ್ತಿ ನೀವು ದೈಹಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಕೋಪವು ಅನಗತ್ಯವಾಗಿ ಮಿತಿಮೀರುವಂತಹ ಸಂದರ್ಭವು ಉಂಟಾಗಬಹುದು. ಆದರೆ, ನಿಮ್ಮ ನಾಲಗೆಯ ಮೇಲೆ ಹಿಡಿತವಿರಲಿ.

ಕರ್ಕಾಟಕ :-

ಈ ದಿನವನ್ನು ಶಾಂತಿಯಿಂದ ಕಳೆಯುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ಇಂದು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ಇಂದು ನೀವು ಆತಂಕ ಹಾಗೂ ಉದರ ಸಂಬಂಧಿ ತೊಂದರೆಗಳನ್ನು ಅನುಭವಿಸಬಹುದು. ಅನಿರೀಕ್ಷಿತ ಖರ್ಚುಗಳು ಉಂಟಾಗಲಿವೆ. ಅಕ್ರಮ ವಿಚಾರಗಳು, ಪ್ರಯಾಣ ಮತ್ತು ಹೊಸ ಕಾರ್ಯಗಳ ಪ್ರಾರಂಭವನ್ನು ತಪ್ಪಿಸಿ.

ಸಿಂಹ :-

ಇಂದು ನೀವು ದೈಹಿಕವಾಗಿ ಸುಸ್ಥಿತಿಯಲ್ಲಿರುವುದಿಲ್ಲ ಮತ್ತು ದಿನವಿಡೀ ಆತಂಕದಿಂದ ತುಂಬಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಸಂಬಂಧಿಗಳೊಂದಿಗಿನ ಅನಗತ್ಯ ಸಂಗತಿಗಳು ನಿಮ್ಮನ್ನು ಕ್ಷೋಭೆಗೊಳಿಸಲಿವೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿಸುವಿರಿ. ಸರಕಾರಿ ಅಥವಾ ಆಸ್ತಿ ಸಂಬಂಧಿತ ದಾಖಲೆಗಳಿಗೆ ಸಹಿ ಮಾಡುವಾಗ ಎಚ್ಚರಿಕೆ ವಹಿಸಿ.

ಕನ್ಯಾ :-

ಆಲೋಚನೆಯಿಲ್ಲದೆ ಕೆಲಸಗಳಿಗೆ ಹಾರುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧಗಳು ಅನ್ಯೋನ್ಯವಾಗಿರುತ್ತದೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳನ್ನು ಭೇಟಿಮಾಡಲಿದ್ದೀರಿ. ಮತ್ತು ಪ್ರತಿ ಕಾರ್ಯದಲ್ಲೂ ನೀವು ಸಫಲತೆಯನ್ನು ಆನಂದಿಸುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ಸಾಮಾಜಿಕವಾಗಿ ನೀವು ಗೌರವ ಸಂಪಾದಿಸುವಿರಿ.

ತುಲಾ :-

ದಿನವಿಡೀ ನೀವು ಹೊಂದುವ ಅಲ್ಪ ಉತ್ಸಾಹದಿಂದಾಗಿ ನಿಮಗೆ ನಿರ್ಧಾರ ಕೈಗೊಳ್ಳಲು ಕಷ್ಟವಾಗಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಪ್ರಮುಖ ನಿರ್ಧಾರಗಳನ್ನು ಮತ್ತು ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸಿ. ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸೆಣಸಾಟ ಉಂಟಾಗುವ ಸಂಭವವಿದೆ. ಆದ್ದರಿಂದ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ಇಂದು ನೀವು ದೃಷ್ಟಿಯು ಹಠಮಾರಿತನದಿಂದಿರುವ ಬದಲು ಹೊಂದಾಣಿಕೆಯಿಂದಿರಬೇಕು ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.

ವೃಶ್ಚಿಕ :-

ಈ ದಿನವು ಶುಭಕರವಾಗಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಉತ್ಸಾಹದಿಂದಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ನೀವು ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆಗಳನ್ನು ಪಡೆಯುವಿರಿ. ನೀವು ಶುಭಸುದ್ದಿಯನ್ನು ಪಡೆಯಬಹುದು. ಸಂತೋಷಕರ ಪ್ರಯಾಣ ತೆರಳಬಹುದು.

ಧನು :-

ಈ ದಿನವು ನಿಮಗೆ ಕಷ್ಟಕರ ದಿನವಾಗಿರಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ಸೆಣಸಾಟವು ನಿಮ್ಮನ್ನು ಅಸಮಾಧಾನಗೊಳಿಸುತ್ತದೆ. ನೀವು ನಿಮ್ಮ ಮಾತುಗಳನ್ನು ಹತೋಟಿಯಲ್ಲಿಡಬೇಕು. ಆಪಾದನೆಗಳನ್ನು ನಿಗ್ರಹಿಸಿ. ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿಕೆಯಿಂದಿರಿ. ನಿಮ್ಮ ದೈಹಿಕ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಖರ್ಚುಗಳು ಹೆಚ್ಚಾಗುವ ಸಂಭವವಿದೆ.

ಮಕರ :-

ನೀವು ಈ ದಿನವನ್ನು ಸ್ನೇಹಿತರನ್ನು ಮತ್ತು ಪ್ರೀತಿಪಾತ್ರರನ್ನು ಭೇಟಿಮಾಡುವ ಮೂಲಕ ಸಂತೋಷದಿಂದ ಕಳೆಯುತ್ತೀರಿ. ಈ ದಿನವು ಸಾಮಾಜಿಕ, ವೃತ್ತಿ ಹಾಗೂ ಇತರ ಕ್ಷೇತ್ರಗಳಲ್ಲಿ ಫಲಪ್ರದವಾಗಿರುತ್ತದೆ. ವಿವಾಹದ ಯೋಜನೆಯಲ್ಲಿರುವವರ ಸೂಕ್ತ ಸಂಗಾತಿಯ ಅನ್ವೇಷಣೆಯು ಇಂದು ಸುಲಭವಾಗಲಿದೆ. ಪ್ರವಾಸ ತೆರಳಬಹುದು. ಮನೆಯಲ್ಲಿ ಶುಭ ಸಮಾರಂಭ ನಡೆಯುವ ಸಾಧ್ಯತೆಯಿದೆ.

ಕುಂಭ :-

ಈ ದಿನವು ಫಲಪ್ರದವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ ಮತ್ತು ಇದು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ತೃಪ್ತಿ ಹೊಂದುತ್ತಾರೆ ಮತ್ತು ಇದು ಬಡ್ತಿಗೆ ಹಾದಿ ಮಾಡಿಕೊಡುತ್ತದೆ. ಹಿರಿಯರು ನಿಮ್ಮನ್ನು ಆಶೀರ್ವದಿಸುತ್ತಾರೆ. ಹಣಕಾಸು ಲಾಭ ಉಂಟಾಗಲಿದೆ. ನಿಮ್ಮ ಕುಟುಂಬ ಜೀವನವು ಉತ್ಸಾಹದಿಂದಿರುತ್ತದೆ..

ಮೀನ :-

ದಿನದ ಪ್ರಾರಂಭದಲ್ಲಿ ನಿಮ್ಮ ಮನಸ್ಸು ಶಾಂತಿಯಿಂದಿರುತ್ತದೆ. ಆದರೆ ನಂತರ ಸುಸ್ತಾಗಿರುವಂತೆ ಮತ್ತು ದುರ್ಬಲರಾಗಿರುವಂತೆ ಭಾಸವಾಗಬಹುದು. ನೀವು ಮತ್ತು ವರಿಷ್ಠರು ಒಂದೇ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಎಚ್ಚರಿಕೆಯಿಂದಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಕ್ಕಳ ಬಗ್ಗೆ ಚಿಂತೆಯು ನಿಮ್ಮನ್ನು ಕಾಡಬಹುದು. ಅನಗತ್ಯ ಖರ್ಚುವೆಚ್ಚಗಳು ಉಂಟಾಗಬಹುದು. ಪ್ರತಿಸ್ಪರ್ಧಿಗಳೊಂದಿಗೆ ಚರ್ಚೆಯನ್ನು ತಪ್ಪಿಸಿ. ಉದರ ಸಂಬಂಧಿ ವ್ಯಾಧಿಗಳು ಕಾಡಬಹುದು. ನೀವು ದುರಾದೃಷ್ಟರು ಎಂದು ನಿಮಗೆ ಅನಿಸಬಹುದು ಆದರೆ ನೆನಪಿಡಿ ಪ್ರತೀ ನಾಯಿಗೂ ತನ್ನದೇ ಒಂದು ದಿನ ಇದೆ ಎಂಬುದಾಗಿ ಗಣೇಶ ಹೇಳುತ್ತಾರೆ.

WhatsApp Group Join Now

Spread the love

Leave a Reply